ಹೊರಗೆ ಹೊರಟಿದ್ದ ಮಾಲೀಕನ ಎದುರು ಹೋಗಿ ಕುಳಿತ ನಾಯಿ ಅಲ್ಲೇ ಗೋಡೆಗೆ ಸಿಕ್ಕಿಸಿಟ್ಟಿದ್ದ ಚೈನ್ ಅನ್ನು ತೋರಿಸುತ್ತಾ ನಿನ್ನ ಜೊತೆ ನನ್ನನ್ನೂ ವಾಕಿಂಗ್ ಕರೆದುಕೊಂಡು ಹೋಗು ಎಂದು ಮನವಿ ಮಾಡುತ್ತಿರುವ ವಿಡಿಯೋ ನೆಟ್ಟಿಗರ ಮನಸನ್ನು ಗೆದ್ದಿದೆ. ರೆಡ್ಡಿಟ್ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.
ಬಾಗಿಲಿನ ಮುಂದೆ ಕುಳಿತಿರುವ ನಾಯಿಯು ತನ್ನ ಕಣ್ಣುಗಳಿಂದಲೇ ಒಡೆಯನಿಗೆ ಚೈನ್ ಅನ್ನು ತೋರಿಸಿ, ತಾನೂ ಹೊರಗೆ ಬರುತ್ತೇನೆ ಎಂದು ಮನವಿ ಮಾಡುತ್ತಿದೆ. ಅಪ್ಲೋಡ್ ಆದ ಆರು ಗಂಟೆಯೊಳಗೆ ಈ ವಿಡಿಯೋ ವೈರಲ್ ಆಗಿದ್ದು, 5,400ಕ್ಕೂ ಹೆಚ್ಚು ಜನರು ಲೈಕಿಸಿದ್ದಾರೆ. ಈ ವಿಡಿಯೋ ನೋಡಿದ ಶ್ವಾನಪ್ರಿಯರು ತಮ್ಮ ಮನೆಯ ನಾಯಿ ಯಾವೆಲ್ಲ ರೀತಿಯಲ್ಲಿ ಕಾಟ ಕೊಡುತ್ತದೆ, ಹುಡುಗಾಟವಾಡುತ್ತದೆ ಎಂಬುದನ್ನು ವಿವರಿಸಿ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಸಮೋಸಾಕ್ಕೆ ಜಾಮೂನ್ ಸೇರಿಸಿ ತಿಂದ ಫುಡ್ ಬ್ಲಾಗರ್: ಕೆಟ್ಟ ರುಚಿ ಎಂದ ನೆಟ್ಟಿಗರು
Viral Video: ಉದ್ದಿನ ದೋಸೆ, ನೀರ್ ದೋಸೆಯೆಲ್ಲ ಹಳೇದಾಯ್ತು; ಫ್ರೂಟ್ ದೋಸೆ ಮಾಡೋದು ಹೇಗಂತ ಗೊತ್ತಾ?