ತಮಿಳುನಾಡಿನ ಪಕ್ಷಿಧಾಮಗಳಲ್ಲೀಗ ಫ್ಲೆಮಿಂಗೋ ವಲಸೆ ಹಕ್ಕಿಗಳ ಕಲರವ: ವೀಡಿಯೋ ವೈರಲ್​

ತಮಿಳುನಾಡಿನ ಕೊಡಿಯಾಕರೈನಲ್ಲಿರುವ ಪಾಯಿಂಟ್​ ಕ್ಯಾಲಿಮರ್​ ವನ್ಯಜೀವಿ ಮತ್ತು ಪಕ್ಷಿಧಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಲಸೆಗಳು  ಬಂದಿದ್ದು ಪ್ರವಾಸಿಗರನ್ನು ಆಕರ್ಷಿಸಿದೆ. ಇದರ ವೀಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ತಮಿಳುನಾಡಿನ ಪಕ್ಷಿಧಾಮಗಳಲ್ಲೀಗ ಫ್ಲೆಮಿಂಗೋ ವಲಸೆ ಹಕ್ಕಿಗಳ ಕಲರವ: ವೀಡಿಯೋ ವೈರಲ್​
ಫ್ಲೆಮಿಂಗೋ ಹಕ್ಕಿಗಳು
Follow us
TV9 Web
| Updated By: Pavitra Bhat Jigalemane

Updated on: Dec 29, 2021 | 10:20 AM

ಚಳಿಗಾಲದಲ್ಲಿ ಎತ್ತ ನೋಡಿದರೂ ವಲಸೆ ಹಕ್ಕಿಗಳದೇ ಕಲವರ. ಪಕ್ಷಿಧಾಮಗಳು, ವನ್ಯಜೀವಿ ಧಾಮಗಳಲ್ಲಿ ವಲಸೆ ಹಕ್ಕಿಗಳು ಬೀಡು ಬಿಟ್ಟು ನೋಡುಗರ ಕಣ್ಮನ ಸೆಳೆಯುತ್ತವೆ. ಇದೀಗ ತಮಿಳುನಾಡಿನ ಕೊಡಿಯಾಕರೈನಲ್ಲಿರುವ ಪಾಯಿಂಟ್​ ಕ್ಯಾಲಿಮರ್​ ವನ್ಯಜೀವಿ ಮತ್ತು ಪಕ್ಷಿಧಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಲಸೆಗಳು  ಬಂದಿದ್ದು ಪ್ರವಾಸಿಗರನ್ನು ಆಕರ್ಷಿಸಿದೆ. ಇದರ ವೀಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಸಾಲು ಸಾಲು ಪಕ್ಷಿಗಳು ಹಾರಾಡುವುದನ್ನು ಕಾಣಬಹದು. 

ಮುಖ್ಯವಾಗಿ ಫ್ಲೆಮಿಂಗೋ ಪಕ್ಷಿಗಳು ಕೊಡಿಯಾಕರೈನ ಪಕ್ಷಿಧಾಮದಲ್ಲಿ ಕಾಣಿಸಿಕೊಂಡಿವೆ. ಇದರ ವೀಡಿಯೋವನ್ನು ತಮಿಳುನಾಡಿನ ಅರಣ್ಯ ಮತ್ತು ಪರಿಸರ ಹವಾಮಾನ ಬದಲಾವಣೆ ಕಾರ್ಯದರ್ಶಿ ಸುಪ್ರಿಯಾ ಸಾಹು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.  ಡಿಸೆಂಬರ್​ 25ರಂದು ಈ ವೀಡಿಯೋ ಹಂಚಿಕೊಳ್ಳಲಾಗಿದ್ದು, 8 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದೆ.

20 ಚದರ ಕಿಮೀ ನಿತ್ಯಹರಿದ್ವರ್ಣ ಕಾಡುಗಳನ್ನು ಕೊಡಿಯಾಕರೈ ವನ್ಯಜೀವಿಧಾಮ ಆವರಿಸಿದ್ದು  250 ಜಾತಿಯ ವಿವಿಧ ಪಕ್ಷಿಗಳ ನೆಲೆಯಾಗಿದೆ. 1967ರಲ್ಲಿ ಕೊಡಿಯಾಕರೈಅನ್ನು ವನ್ಯ ಜೀವಿ ಮತ್ತು ಪಕ್ಷಿಧಾಮ ಎಂದು ತಮಿಳುನಾಡು ಸರ್ಕಾರ ಗುರುತಿಸಿ ಸಂರಕ್ಷಿಸುತ್ತಿದೆ. ಒಟ್ಟು ನಾಲ್ಕು ಜಾತಿ ಫ್ಲೆಮಿಂಗೋಗಳು ಅಮೆರಿಕಾದಲ್ಲಿ ಕಂಡುಬರುತ್ತವೆ. ಇನ್ನು ಎರಡು ಜಾತಿಯ ಫ್ಲೆಮಿಂಗೋಗಳು  ಆಫ್ರಿಕಾ, ಏಷ್ಯಾ ಮತ್ತು ಯುರೋಪ್​ ಖಂಡಗಳಲ್ಲಿ ಕಂಡುಬರುತ್ತವೆ. ಸಾರ್ವಜನಿಕವಾಗಿ ಸುಲಭವಾಗಿ ಕಾಣಿಸಕೊಳ್ಳುವ ಈ ಪಕ್ಷಿಗಳು ಪ್ರತಿ ವರ್ಷ ಚಳಿಗಾಲದ ಸಂದರ್ಭದಲ್ಲಿ ವಲಸೆ ಹೋಗುತ್ತವೆ.

ಸದ್ಯ ಪಕ್ಷಿಗಳ ಹಾರಾಟದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ವಾವ್​ ಎಂದು ಉದ್ಘರಿಸಿದ್ದಾರೆ. ಚಳಿಗಾಲದಲ್ಲಿ ಸಂತಾನಕ್ಕಾಗಿ ಪಕ್ಷಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆಹೋಗುತ್ತವೆ. ಅವುಗಳ ಹಾರಾಟ, ಅವುಗಳ ನಡುವಿನ ಬಾಂದವ್ಯ ನೋಡುಗರನ್ನು ಮೈಮರೆಸುತ್ತವೆ.

ಇದನ್ನೂ ಓದಿ:

ಬಚ್​ಪನ್​ಕಾ ಪ್ಯಾರ್​ ಖ್ಯಾತಿಯ ಸಹದೇವ್ ದಿರ್ಡೋಗೆ ಅಪಘಾತ: ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡ ಬಾದ್​ ಶಾ

ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್
ಸಚಿವೆ ವಿರುದ್ಧ ಕೆಟ್ಟ ಪದವನ್ನು ನಾನು ಬಳಸಿಲ್ಲ, ದಾಖಲೆ ನೋಡಿ: ಸಿಟಿ ರವಿ
ಸಚಿವೆ ವಿರುದ್ಧ ಕೆಟ್ಟ ಪದವನ್ನು ನಾನು ಬಳಸಿಲ್ಲ, ದಾಖಲೆ ನೋಡಿ: ಸಿಟಿ ರವಿ
ಬಿಜೆಪಿ ಮುಖಂಡ ಯಾರ ಒತ್ತಾಸೆ ಮೇರೆಗೆ ಸಂಪರ್ಕಿಸಿದರೋ ಗೊತ್ತಿಲ್ಲ: ಕೃಷ್ಣ
ಬಿಜೆಪಿ ಮುಖಂಡ ಯಾರ ಒತ್ತಾಸೆ ಮೇರೆಗೆ ಸಂಪರ್ಕಿಸಿದರೋ ಗೊತ್ತಿಲ್ಲ: ಕೃಷ್ಣ
ಮಲ್ಲಿಕಾರ್ಜುನ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ: ಬಸವರಾಜು
ಮಲ್ಲಿಕಾರ್ಜುನ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ: ಬಸವರಾಜು
ನಿವೃತ್ತಿ ಬೆನ್ನಲ್ಲೇ ಟೀಮ್ ಇಂಡಿಯಾ ತೊರೆದ ಅಶ್ವಿನ್​ಗೆ ಅದ್ಧೂರಿ ಸ್ವಾಗತ
ನಿವೃತ್ತಿ ಬೆನ್ನಲ್ಲೇ ಟೀಮ್ ಇಂಡಿಯಾ ತೊರೆದ ಅಶ್ವಿನ್​ಗೆ ಅದ್ಧೂರಿ ಸ್ವಾಗತ
ಸಿದ್ದರಾಮಯ್ಯ ಸಹ ಬಂಗಾರಪ್ಪ ಹಾಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ: ಮಧು
ಸಿದ್ದರಾಮಯ್ಯ ಸಹ ಬಂಗಾರಪ್ಪ ಹಾಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ: ಮಧು
ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ಹೃದಯಾಘಾತದ ಅಪಾಯ ಹೆಚ್ಚು: ಡಾಕ್ಟರ್
ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ಹೃದಯಾಘಾತದ ಅಪಾಯ ಹೆಚ್ಚು: ಡಾಕ್ಟರ್