Viral Video: ರಾಷ್ಟ್ರೀಯ ಉದ್ಯಾನವನದಲ್ಲಿ ನಾಯಿಯ ಮೇಲೆ ದಾಳಿ ಮಾಡಿದ ಹುಲಿ: ಬೆಚ್ಚಿಬಿದ್ದ ಪ್ರವಾಸಿಗರು
ಪ್ರವಾಸಿಗರ ಎದುರೇ ಹುಲಿಯೊಂದು ನಾಯಿಯ ಮೇಲೆ ಎರಗಿದ ಭಯಾನಕ ಘಟನೆ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾವನದಲ್ಲಿ ನಡೆದಿದೆ. ಡಿಸೆಂಬರ್ 27 ರಂದು ಬೆಳಗ್ಗೆ ಈ ಘಟನೆ ನಡೆದಿದೆ.
ಪ್ರವಾಸಿಗರ ಎದುರೇ ಹುಲಿಯೊಂದು ನಾಯಿಯ ಮೇಲೆ ಎರಗಿದ ಭಯಾನಕ ಘಟನೆ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾವನದಲ್ಲಿ ನಡೆದಿದೆ. ಡಿಸೆಂಬರ್ 27 ರಂದು ಬೆಳಗ್ಗೆ ಈ ಘಟನೆ ನಡೆದಿದೆ. ಪ್ರವಾಸಿಗರನ್ನು ಹೊತ್ತೊಯ್ದ ಸಫಾರಿ ವಾಹನ ಕಾಡಿನ ಮಧ್ಯೆ ನಿಂತಿತ್ತು. ಈ ವೇಳೆ ಪ್ರವಾಸಿಗರ ಎದುರು ಇದ್ದಕ್ಕಿಂದಂತೆ ಹುಲಿಯೊಂದು ಅಲ್ಲೇ ಸುತ್ತುತ್ತಿದ್ದ ನಾಯಿಯ ಮೇಲೆ ದಾಳಿ ನಡೆಸಿ ಕೊಲೆ ಮಾಡಿದೆ. ಈ ಭಯಾನಕ ದೃಶ್ಯ ನೋಡಿ ಪ್ರವಾಸಿಗರು ಬೆಚ್ಚಿಬಿದ್ದಿದ್ದು, ಗಾಡಿಯನ್ನು ಮುಂದೆ ತೆಗೆದುಕೊಂಡು ಹೋಗುವಂತೆ ಕೂಗಿದ್ದಾರೆ. ಇದರ ವೀಡಿಯೋವನ್ನು ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಿಂದ ಯುಟ್ಯೂಬ್ನಲ್ಲಿ ಹಂಚಿಕೊಳ್ಳಲಾಗಿದೆ.
ವೀಡಿಯೋದಲ್ಲಿ ಮೊದಲು ನಾಯಿಯೊಂದು ಪ್ರವಾಸಿಗರ ಗಾಡಿಯ ಪಕ್ಕ ಓಡಾಡುತ್ತಿರುತ್ತದೆ. ಮುಂದೆ ಹೋಗಲು ದಾರಿ ಕಾಣದೆ ಓಡಾಡುತ್ತಿದ್ದ ನಾಯಿ ಸಫಾರಿ ವಾಹನದ ಮಧ್ಯೆ ಹೋಗಲು ಪ್ರಯತ್ನಿಸುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ನುಸುಳಿ ಬಂದ ಹುಲಿ ನಾಯಿಯ ಮೇಲೆ ದಾಳಿ ನಡೆಸಿ, ಪಕ್ಕಕ್ಕೆ ಎಳೆದೊಯ್ಯುತ್ತದೆ. ಇದನ್ನು ಕಂಡು ಗಾಡಿಯಲ್ಲಿದ್ದ ಪ್ರವಾಸಿಗರು ಗಾಬರಿಗೊಂಡು ಕೂಗಿದ್ದಾರೆ.
ಈ ವೀಡಿಯೋವನ್ನು ವನ್ಯಜೀವಿ ಸಂರಕ್ಷಣಾ ಟ್ರಸ್ಟ್ನ ಅಧ್ಯಕ್ಷರಾದ ಅನೀಶ್ ಅಂಧೇರಿಯಾ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರು, ಹುಲಿಯು ನಾಯಿಯ ಮೇಲೆ ದಾಳಿ ಮಾಡುವುದರಿಂದ ಹುಲಿಗಳು ಕೋರೆಹಲ್ಲು ರೋಗಕ್ಕೆ ತುತ್ತಾಗಬಹುದು. ಇದರಿಂದ ಹುಲಿಗಳ ಸಂತತಿ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದಿದ್ದಾರೆ. ರಾಷ್ಟ್ರೀಯ ಉದ್ಯಾನವನಗಳಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಇನ್ನೂ ಹೆಚ್ಚಿನ ಕ್ರಮಕ್ಕೆ ಆದ್ಯತೆ ನೀಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:
Viral Video: ಜೀವದ ಹಂಗು ತೊರೆದು ರೈಲಿನಡಿಗೆ ಸಿಲುಕುತ್ತಿದ್ದ ನಾಯಿ ರಕ್ಷಣೆ; ಮಾನವೀಯತೆಯೇ ಧರ್ಮ ಎಂದ ನೆಟ್ಟಿಗರು