ನೀಟ್​ ಪ್ರಶ್ನೆ ಪತ್ರಿಕೆ​ ಸೋರಿಕೆ: ಸೈಬರ್​ ಗ್ಯಾಂಗ್​ ಜತೆಗೂಡಿ ನಡೆಸಿತ್ತು ಎಕ್ಸಾಂ ಮಾಫಿಯಾ ದಂಧೆ, 6 ಮಂದಿ ಬಂಧನ

|

Updated on: Jun 25, 2024 | 11:13 AM

ನೀಟ್​ ಪೇಪರ್ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಬಿಹಾರದ ಆರ್ಥಿಕ ಅಪರಾಧಗಳ ಘಟಕದ ತಂಡವು ಈ ವಿಷಯದಲ್ಲಿ ಸೈಬರ್ ಅಪರಾಧದ ಹೊಸ ಪ್ರಕರಣವನ್ನು ದಾಖಲಿಸಿದೆ.

ನೀಟ್​ ಪ್ರಶ್ನೆ ಪತ್ರಿಕೆ​ ಸೋರಿಕೆ: ಸೈಬರ್​ ಗ್ಯಾಂಗ್​ ಜತೆಗೂಡಿ ನಡೆಸಿತ್ತು ಎಕ್ಸಾಂ ಮಾಫಿಯಾ ದಂಧೆ, 6 ಮಂದಿ ಬಂಧನ
Follow us on

ನೀಟ್​ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ಪರೀಕ್ಷಾ ಮಾಫಿಯಾ ಹಾಗೂ ಸೈಬರ್​ ಕ್ರಿಮಿನಲ್​ಗಳು ಒಟ್ಟಾಗಿ ನೀಟ್​ ಪೇಪರ್ ಸೋರಿಕೆ ಹಗರಣವನ್ನು ನಡೆಸಿದ್ದರು ಎಂಬುದು ತಿಳಿದುಬಂದಿದೆ.

ನೀಟ್​ ಪೇಪರ್ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಬಿಹಾರದ ಆರ್ಥಿಕ ಅಪರಾಧಗಳ ಘಟಕದ ತಂಡವು ಈ ವಿಷಯದಲ್ಲಿ ಸೈಬರ್ ಅಪರಾಧದ ಹೊಸ ಪ್ರಕರಣವನ್ನು ದಾಖಲಿಸಿದೆ. ಈ ಪ್ರಕರಣದಲ್ಲಿ ಜಾರ್ಖಂಡ್‌ನ ದಿಯೋಘರ್‌ನಲ್ಲಿ ಬಂಧಿತರಾದ ರಾಜೀವ್ ಕುಮಾರ್, ಪರಮ್‌ಜೀತ್ ಸಿಂಗ್ ಮತ್ತು ಪಂಕು ಕುಮಾರ್ ಮತ್ತು ಶೇಖಪುರದ ರಂಜನ್ ಕುಮಾರ್ ವಿರುದ್ಧ ಇಒಯುನಲ್ಲಿ ಪ್ರಕರಣ ದಾಖಲಾಗಿದೆ.

ಎಫ್​ಐಆರ್​ ಪ್ರತಿಯಲ್ಲಿ ಈ ಸೈಬರ್ ಗ್ಯಾಂಗ್ ನೀಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ಹೇಗೆ ಸಕ್ರಿಯವಾಗಿತ್ತು ಮತ್ತು ನೀಟ್ ಪೇಪರ್ ಸೋರಿಕೆ ಹಗರಣದಲ್ಲಿ ಹೇಗೆ ಸಹಾಯ ಮಾಡುತ್ತಿದೆ ಎಂದು ಉಲ್ಲೇಖಿಸಲಾಗಿದೆ.
ನೀಟ್ ಪೇಪರ್ ಸೋರಿಕೆ ಹಗರಣದ ಮಾಸ್ಟರ್ ಮೈಂಡ್ ಸಂಜೀವ್ ಮುಖಿಯಾ ಅವರ ಶಿಷ್ಯರಿಗೆ ಮೊಬೈಲ್ ಮತ್ತು ಸಿಮ್ ಕಾರ್ಡ್ ಗಳನ್ನು ಒದಗಿಸಿದ್ದರು. ಆತ ಕೊಟ್ಟ ಮೊಬೈಲ್ ಮತ್ತು ಸಿಮ್ ಕಾರ್ಡ್ ನಲ್ಲಿ ಪ್ರಶ್ನೆ ಉತ್ತರ ಪತ್ರಿಕೆ ಬಂದಿತ್ತು.

ಮತ್ತಷ್ಟು ಓದಿ: ನೀಟ್​ ಪರೀಕ್ಷೆ ಅಕ್ರಮ: ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಕಾನೂನು ಜಾರಿ ಮಾಡಿದ ಕೇಂದ್ರ

ಗ್ಯಾಂಗ್ ಲೀಡರ್ ರಂಜನ್ ಅವರನ್ನು ಬಂಧಿಸಲು ಐಒಯು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಹಾಗೂ ಶೇಖಪುರ ಪೊಲೀಸರ ಸಹಕಾರವನ್ನೂ ಪಡೆಯಲಾಗುತ್ತಿದೆ. ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಜಾರ್ಖಂಡ್​ನ ದಿಯೋಗಢದಲ್ಲಿ 6 ಮಂದಿ ಶಂಕಿತರನ್ನು ಬಂಧಿಸಿದ್ದಾರೆ.

ಏಮ್ಸ್​ ಆಸ್ಪತ್ರೆಯ ಹತ್ತಿರದಲ್ಲಿ ಬಂಧಿತ ಆರೋಪಿಗಳು ಗೆಳೆಯನ ಮನೆಯಲ್ಲಿ ವಾಸವಿದ್ದರು. ಇವರನ್ನು ಪಾಟ್ನಾಗೆ ಕರೆತಂದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ರಿತ್ವಿಕ್ ಶ್ರೀವಾಸ್ತವ ಹೇಳಿದ್ದಾರೆ.

ಬಂಧಿತರನ್ನು ಬಿಹಾರದ ನಳಂದ ಜಿಲ್ಲೆಯ ನಿವಾಸಿಗಳಾದ ಪರಮ್​ಜಿತ್ ಸಿಂಗ್ ಅಲಿಯಾಸ್ ಬಿಟ್ಟು, ಚಿಂಟು ಅಲಿಯಾಸ್ ಬುಲ್ದೇವ್ ಕುಮಾರ್, ಪ್ರಶಾಂತ್​ ಕುಮಾರ್, ಅಜಿತ್ ಕುಮಾರ್, ರಾಜೀವ್ ಕುಮಾರ್ ಮತ್ತು ಪಾಕು ಕುಮಾರ್ ಎಂದು ಪೊಲೀಸರು ಹೇಳಿದ್ದಾರೆ.
ಈ ಹಗರಣದ ಬಗ್ಗೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ತನಿಖೆಗೆ ಆಗ್ರಹ ಮಾಡಿವೆ, ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:13 am, Tue, 25 June 24