ಪಾಟ್ನಾ ಜುಲೈ 11: ನೀಟ್ ( NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (CBI) ಗುರುವಾರ ಪಾಟ್ನಾದಿಂದ ಬಿಹಾರದ (Bihar) ಕಿಂಗ್‌ಪಿನ್‌ನನ್ನು ಬಂಧಿಸಿದೆ. ಈತನನ್ನು ರಾಕೇಶ್ ರಂಜನ್ ಅಲಿಯಾಸ್ ರಾಕಿ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಸಿಬಿಐನ ಸಕ್ಷಮ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 10 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಲಾಗಿದೆ. ಪಾಟ್ನಾ ಮತ್ತು ಕೋಲ್ಕತ್ತಾ ಸೇರಿದಂತೆ ರಾಕಿಯೊಂದಿಗೆ ಸಂಪರ್ಕ ಹೊಂದಿದ ನಾಲ್ಕು ಸ್ಥಳಗಳನ್ನು ಕೇಂದ್ರ ಸಂಸ್ಥೆ ಮತ್ತಷ್ಟು ಶೋಧಿಸಿದೆ. ಮೂಲಗಳ ಪ್ರಕಾರ, ಶೋಧದ ಸಮಯದಲ್ಲಿ ದೋಷಾರೋಪಣೆಯ ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಮೂಲಗಳ ಪ್ರಕಾರ ರಾಕೇಶ್ ರಂಜನ್ ಅಲಿಯಾಸ್ ರಾಕಿ ಜಾರ್ಖಂಡ್‌ನ ರಾಂಚಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. ರಾಕಿಯೇ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿನಂತರ ಅದನ್ನು ಚಿಂಟು ಎಂಬಾತನಿಗೆ ಕಳುಹಿಸಿದನು. ಈತ ವಿದ್ಯಾರ್ಥಿಗಳಿಗೆ ಉತ್ತರಗಳೊಂದಿಗೆ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಿ ವಿತರಣೆ ಮಾಡಿದ್ದರು
ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ನಂತರ ರಾಕಿ ನೀಟ್ ಯುಜಿ ಪರೀಕ್ಷೆಗಳಿಗೆ ಪರಿಹಾರಗಳನ್ನು ಸಹ ಏರ್ಪಡಿಸಿದ್ದರು. ಪಾಟ್ನಾ ಮತ್ತು ರಾಂಚಿಯ ಹಲವಾರು MBBS ವಿದ್ಯಾರ್ಥಿಗಳನ್ನು ರಾಕಿ ಪರಿಹಾರಕರಾಗಿ ನೇಮಿಸಿಕೊಂಡರು.
ಇದೀಗ NEET-UG ಪೇಪರ್ ಸೋರಿಕೆಗೆ ಸಂಬಂಧಿಸಿದಂತೆ ಸಂಸ್ಥೆಯು 4 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ಪ್ರಸ್ತುತ ಪಾಟ್ನಾ, ಕೋಲ್ಕತ್ತಾ ಮತ್ತು ಬಿಹಾರ ರಾಜಧಾನಿ ಸಮೀಪದ 2 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ.
ಕಳೆದ ಜುಲೈ 9ರಂದು ಕೇವಲ 2 ದಿನಗಳ ಹಿಂದಷ್ಟೇ ಪೇಪರ್ ಸೋರಿಕೆ ಪ್ರಕರಣದಲ್ಲಿ ಮತ್ತಿಬ್ಬರನ್ನು ಸಿಬಿಐ ಬಂಧಿಸಿತ್ತು. ಬಂಧಿತರನ್ನು ಸನ್ನಿ ಕುಮಾರ್ ಮತ್ತು ಇನ್ನೊಬ್ಬ ನೀಟ್ ಅಭ್ಯರ್ಥಿಯ ತಂದೆ ರಂಜೀತ್ ಕುಮಾರ್ ಎಂದು ಗುರುತಿಸಲಾಗಿದೆ. ಸನ್ನಿಯನ್ನು ನಳಂದಾದಿಂದ ಬಂಧಿಸಲಾಗಿದ್ದರೆ, ರಂಜೀತ್‌ನನ್ನು ಗಯಾದಿಂದ ಬಂಧಿಸಲಾಗಿದೆ.
ಇದನ್ನೂ ಓದಿ: ಮಣಿಪುರಕ್ಕೆ ಭೇಟಿ ನೀಡುವಂತೆ ಪ್ರಧಾನಿಗೆ ಒತ್ತಾಯ; ಪ್ರವಾಸದ ವಿಡಿಯೊ ಪೋಸ್ಟ್ ಮಾಡಿದ ರಾಹುಲ್ ಗಾಂಧಿ
ನೀಟ್ ಯುಜಿ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುತ್ತದೆ. ಈ ಪರೀಕ್ಷೆಯ ಮೂಲಕವೇ ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಎಂಬಿಬಿಎಸ್, ಬಿಡಿಎಸ್, ಆಯುಷ್ ಮತ್ತು ಇತರ ಸಂಬಂಧಿತ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಾರೆ.
NEET-UG, 2024 ಪರೀಕ್ಷೆಯನ್ನು ಮೇ 5 ರಂದು ಭಾರತದಾದ್ಯಂತ ನಡೆಸಲಾಯಿತು. ಅಂದಾಜು 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ರಾಕೇಶ್ ರಂಜನ್ ಬಿಹಾರದಿಂದ ಬಂಧಿತ 9ನೇ ವ್ಯಕ್ತಿ. ಉತ್ತರಾಖಂಡದ ಗುಜರಾತ್ ಮತ್ತು ಡೆಹ್ರಾಡೂನ್‌ನಿಂದಲೂ ಹಲವರನ್ನು ಬಂಧಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:34 pm, Thu, 11 July 24