ಮಕ್ಕಳೊಂದಿಗೆ ಬೆರೆತು ಖುಷಿಪಟ್ಟ ಪ್ರಧಾನಿ; ನಮಸ್ತೆ ಮೋದಿ ಜೀ, ನಿಮ್ಮನ್ನು ಟಿವಿಯಲ್ಲಿ ನೋಡಿದ್ದೇವೆ ಎಂದ ಚಿಣ್ಣರು

|

Updated on: Jul 29, 2023 | 5:01 PM

ಪ್ರಧಾನಿಯನ್ನು ನೋಡಿದ ಮಕ್ಕಳು ಅವರನ್ನು ತಬ್ಬಿಕೊಂಡು 'ನಮಸ್ತೆ ಮೋದಿ ಜೀ' ಎಂದು ಹೇಳುತ್ತಾರೆ. ಪ್ರಧಾನಿ ಮೋದಿಯವರು ಮಕ್ಕಳಲ್ಲಿ 'ಮೋದಿ ಜಿ ನಿಮಗೆ ಯಾರು ಎಂದು ಗೊತ್ತಾ?' ಎಂದು ಕೇಳಿದ್ದಾರೆ. ಇದಕ್ಕೆ ಬಾಲಕನೊಬ್ಬ, 'ನಾನು ಟಿವಿಯಲ್ಲಿ ನಿಮ್ಮನ್ನು ನೋಡಿದ್ದೇನೆ ಅಂತಾನೆ.

ಮಕ್ಕಳೊಂದಿಗೆ ಬೆರೆತು ಖುಷಿಪಟ್ಟ ಪ್ರಧಾನಿ; ನಮಸ್ತೆ ಮೋದಿ ಜೀ, ನಿಮ್ಮನ್ನು ಟಿವಿಯಲ್ಲಿ ನೋಡಿದ್ದೇವೆ ಎಂದ ಚಿಣ್ಣರು
ಪ್ರಧಾನಿ ನರೇಂದ್ರ ಮೋದಿ
Follow us on

ದೆಹಲಿ ಜುಲೈ 29:  ಪ್ರಧಾನಿ ನರೇಂದ್ರ ಮೋದಿ (Narendra Modi) ಮಕ್ಕಳೊಂದಿಗೆ ಬೆರೆತು ಅವರೊಂದಿಗೆ ಮಾತನಾಡುತ್ತಿರುವ ಖುಷಿಯ ಕ್ಷಣಗಳ ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ. ವಿಡಿಯೊದಲ್ಲಿ, ಪ್ರಧಾನಿ ಮೋದಿ ಕೆಲವು ಮಕ್ಕಳೊಂದಿಗೆ ನಗುತ್ತಾ ಮಾತನಾಡುತ್ತಿದ್ದು ಪುಟ್ಟ ಮಕ್ಕಳು ಪ್ರಧಾನಿ ಮೋದಿಯನ್ನು ನೋಡಿ ಖುಷಿಯಿಂದ ಕುಣಿದಾಡಿದ್ದಾರೆ. ಪ್ರಧಾನಿ ಮೋದಿ ಕೂಡ ಮಕ್ಕಳೊಂದಿಗೆ ಖುಷಿಪಡುತ್ತಿರುವುದು ಈ ವಿಡಿಯೊದಲ್ಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ (National Education Policy) ಮೂರನೇ ವಾರ್ಷಿಕೋತ್ಸವದ ಆಚರಣೆಯ ಅಂಗವಾಗಿ ಎರಡು ದಿನಗಳ ಕಾಲ ನಡೆಯುವ ಅಖಿಲ ಭಾರತೀಯ ಶಿಕ್ಷಾ ಸಮಾಗಮ್ 2023 ಉದ್ಘಾಟಿಸಿದ ನಂತರ ಮೋದಿ ಪುಟಾಣಿಗಳ ಜತೆ ಕೆಲವು ಕ್ಷಣಗಳನ್ನು ಕಳೆದಿದ್ದಾರೆ.

ಮಕ್ಕಳನ್ನು ಭೇಟಿಯಾಗಲು ಪ್ರಧಾನಿ ಮೋದಿ ಆಗಮಿಸಿದ ಕೂಡಲೇ ಮಕ್ಕಳಲ್ಲಿ ಹೊಸ ಉತ್ಸಾಹ ಕಂಡು ಬರುತ್ತಿರುವುದನ್ನು ವಿಡಿಯೊಲ್ಲಿ ಕಾಣಬಹುದು. ಪ್ರಧಾನಿಯನ್ನು ನೋಡಿದ ಮಕ್ಕಳು ಅವರನ್ನು ತಬ್ಬಿಕೊಂಡು ‘ನಮಸ್ತೆ ಮೋದಿ ಜೀ’ ಎಂದು ಹೇಳುತ್ತಾರೆ. ಪ್ರಧಾನಿ ಮೋದಿಯವರು ಮಕ್ಕಳಲ್ಲಿ ‘ಮೋದಿ ಜಿ ನಿಮಗೆ ಯಾರು ಎಂದು ಗೊತ್ತಾ?’ ಎಂದು ಕೇಳಿದ್ದಾರೆ. ಇದಕ್ಕೆ ಬಾಲಕನೊಬ್ಬ, ‘ನಾನು ಟಿವಿಯಲ್ಲಿ ನಿಮ್ಮನ್ನು ನೋಡಿದ್ದೇನೆ ಅಂತಾನೆ. ಆಗ ಮೋದಿ ನೀವು ಎಲ್ಲಿ ನೋಡಿದ್ದೀರಿ? ನಾನು ಟಿವಿಯಲ್ಲಿ ಏನು ಮಾಡಿದೆ? ಎಂದು ಕೇಳುತ್ತಾರೆ.

ವಿಡಿಯೊದಲ್ಲಿ ಪ್ರಧಾನಿ ಮೋದಿ ಮಕ್ಕಳು ಪೇಂಟಿಂಗ್ ಮಾಡುವಾಗಲೂ ಅವರೊಂದಿಗೆ ಮಾತನಾಡುತ್ತಿರುವುದು ಕಾಣಿಸುತ್ತದೆ.

ಇದನ್ನೂ ಓದಿ: Akhil Bharatiya Shiksha Samagam: ದೇಶದ ಭವಿಷ್ಯವನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕಿದೆ: ಮೋದಿ

12 ಭಾರತೀಯ ಭಾಷೆಗಳಲ್ಲಿ ಪುಸ್ತಕ ಬಿಡುಗಡೆ

ಅಖಿಲ ಭಾರತೀಯ ಶಿಕ್ಷಾ ಸಮಾಗಮ್ 2023 ರಲ್ಲಿ 12 ಭಾರತೀಯ ಭಾಷೆಗಳಲ್ಲಿ 100 ಪುಸ್ತಕಗಳನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ, ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ, ಆಧುನಿಕ ಮತ್ತು ಪ್ರಾಚೀನ ಶಿಕ್ಷಣದ ಎರಡೂ ವಿಧಾನಗಳತ್ತ ಗಮನ ಹರಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅವರು ಹೊಸ ಶಿಕ್ಷಣ ನೀತಿಯ ಬಗ್ಗೆ ತಮ್ಮ ನಿಲುವನ್ನು ಹೇಳಿದ್ದು, ಹೊಸ ಶಿಕ್ಷಣ ನೀತಿಯು ದೇಶದ ಶಿಕ್ಷಣದ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ