ಡಿಜಿಟಲ್ ಪೇಮೆಂಟ್ನಲ್ಲಿ ಈ ಕ್ಯೂಆರ್ ಕೋಡ್ ಅತ್ಯಂತ ವ್ಯಾಪಕವಾಗಿ ಬಳಕೆಯಾಗುತ್ತದೆ. ಕ್ಯೂಆರ್ (ತ್ವರಿತ ಪ್ರತಿಕ್ರಿಯೆ ಕೋಡ್) ಕೋಡ್ ಒಂದು ರೀತಿಯ ಬಾರ್ ಕೋಡ್ ಆಗಿದ್ದು, ಡಾಟಾ ಸಂಗ್ರಹ ಮಾಡುತ್ತದೆ. ಈಗಂತೂ ಡಿಜಿಟಲ್ ಪಾವತಿಯಲ್ಲಿ ಅತ್ಯಂತ ಹೆಚ್ಚಾಗಿ ಬಳಕೆಯಾಗುತ್ತದೆ. ಈ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣ ಪಾವತಿ ಮಾಡಬಹುದಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕೊವಿಡ್ 19 ಸಾಂಕ್ರಾಮಿಕ ಬಂದ ಮೇಲಂತೂ ನಗದನ್ನು ಮುಟ್ಟಲು ಎಲ್ಲರೂ ಭಯಪಡುತ್ತಿದ್ದಾರೆ. ಹಾಗಾಗಿ ಡಿಜಿಟಲ್ ಪೇಮೆಂಟ್ಗೆ ಮತ್ತಷ್ಟು ಒತ್ತು ಸಿಕ್ಕಿದೆ. ಇದನ್ನು ಇ-ಪೇಮೆಂಟ್ ಎಂದೂ ಕರೆಯಲಾಗುತ್ತದೆ. ಅಂದರೆ ಇಲ್ಲಿ ಹಣವನ್ನು ಕೈಯಲ್ಲಿ ಮುಟ್ಟುವ ಅವಶ್ಯಕತೆ ಇರುವುದಿಲ್ಲ. ನೇರವಾಗಿ ಅಕೌಂಟ್ಗೇ ಹಣ ಪಾವತಿ ಮಾಡುವ ವಿಧಾನ ಇದು.
ಆದರೆ ಇ-ಪೇಮೆಂಟ್ ವಿಧಾನದಲ್ಲಿ ಅಪಾಯವೂ ಸಾಕಷ್ಟಿದೆ. ಅದೆಷ್ಟೋ ಗ್ರಾಹಕರು ಡಿಜಿಟಲ್ ಪೇಮೆಂಟ್ ಮಾಡುವಾಗ ವಂಚನೆಗೆ ಒಳಗಾದ ಘಟನೆಗಳ ಬಗ್ಗೆ ಈಗಾಗಲೇ ಅನೇಕ ವರದಿಗಳನ್ನೂ ಓದಿದ್ದೇವೆ. ಕ್ಯೂಆರ್ ಕೋಡ್ನ್ನು ಸ್ಕ್ಯಾನ್ ಮಾಡಿ ಸಾವಿರಾರು ರೂಪಾಯಿ ಕಳೆದುಕೊಂಡವರೂ ಇದ್ದಾರೆ. ಹಾಗಾಗಿ ಬ್ಯಾಂಕ್ಗಳು ಕೂಡ ಆಗಾಗ ಗ್ರಾಹಕರನ್ನು ಎಚ್ಚರಿಸುವ ಕೆಲಸ ಮಾಡುತ್ತವೆ. ಹಾಗೇ ಇತ್ತೀಚೆಗೆ ಎಸ್ಬಿಐ ಕೂಡ ಮತ್ತೊಮ್ಮೆ ಗ್ರಾಹಕರಿಗೆ ಎಚ್ಚರಿಕೆ ನೀಡಿ, ಯಾರ್ಯಾರೋ ನೀಡುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಡಿ ಎಂದು ಸಲಹೆ ನೀಡಿದೆ. ಟ್ವೀಟ್ ಮಾಡಿರುವ SBI, ನೀವು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ನಿಮ್ಮ ಅಕೌಂಟ್ಗೆ ಹಣ ಬರುವುದಿಲ್ಲ. ಬದಲಿಗೆ ನಿಮ್ಮ ಅಕೌಂಟ್ನಿಂದ ಇಂತಿಷ್ಟು ಹಣ ಕಟ್ ಆಗಿದೆ ಎಂಬ ಸಂದೇಶ ಬರುತ್ತದೆ. ಹಾಗಿದ್ದಾಗ ಎಲ್ಲೆಲ್ಲೋ ನೀಡುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸುವುದು ಸರಿಯಲ್ಲ ಎಂದು ತಿಳಿಸಿದೆ.
You don’t receive money when you scan a QR code. All you get is a message that your bank account is debited for an ‘X’ amount. Do not scan #QRCodes shared by anyone unless the objective is to pay. Stay alert. #StaySafe. https://t.co/EXGQB7YFT9#QRCodes #InternetBanking
— State Bank of India (@TheOfficialSBI) April 27, 2021