ತೆಲಂಗಾಣದ ಜನರ ಶಕ್ತಿ ಯಾವಾಗಲೂ ಭಾರತದ ಶಕ್ತಿಯನ್ನು ಹೆಚ್ಚಿಸಿದೆ: ಪ್ರಧಾನಿ ಮೋದಿ

PM Narendra Modi in Warangal: ಇಂದಿನ ನವ ಭಾರತ ಯುವ ಭಾರತವಾಗಿದೆ. ಇದು ಚೈತನ್ಯವುಳ್ಳದ್ದಾಗಿದೆ. 21 ನೇ ಶತಮಾನದ ಮೂರನೇ ದಶಕದಲ್ಲಿ ನಮಗೆ ಸುವರ್ಣ ಅವಧಿ ಇದೆ. ನಾವು ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಅಭಿವೃದ್ಧಿಯ ವಿಷಯದಲ್ಲಿ ದೇಶದ ಯಾವುದೇ ಪ್ರದೇಶ ಹಿಂದೆ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಮೋದಿ ಹೇಳಿದ್ದಾರೆ.

ತೆಲಂಗಾಣದ ಜನರ ಶಕ್ತಿ ಯಾವಾಗಲೂ ಭಾರತದ ಶಕ್ತಿಯನ್ನು ಹೆಚ್ಚಿಸಿದೆ: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
|

Updated on:Jul 08, 2023 | 12:57 PM

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ ತೆಲಂಗಾಣಕ್ಕೆ (Telangana) ಭೇಟಿ ನೀಡಿದ್ದು ವಾರಂಗಲ್‌ನಲ್ಲಿ (Warangal) ಸುಮಾರು ₹ 6,100 ಕೋಟಿ ಮೌಲ್ಯದ ಹಲವಾರು ನಿರ್ಣಾಯಕ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಇಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ ರಾಷ್ಟ್ರದ ಯುವಕರ ಸಾಮರ್ಥ್ಯವನ್ನು ಶ್ಲಾಘಿಸಿದ್ದು, 21 ನೇ ಶತಮಾನದ ಮೂರನೇ ದಶಕದಲ್ಲಿ ಭಾರತವನ್ನು ಸುವರ್ಣ ಯುಗಕ್ಕೆ ಮುನ್ನಡೆಸಲು ಅವರ ಶಕ್ತಿಯನ್ನು ಬಳಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು.

ಇಂದಿನ ನವ ಭಾರತ ಯುವ ಭಾರತವಾಗಿದೆ. ಇದು ಚೈತನ್ಯವುಳ್ಳದ್ದಾಗಿದೆ. 21 ನೇ ಶತಮಾನದ ಮೂರನೇ ದಶಕದಲ್ಲಿ ನಮಗೆ ಸುವರ್ಣ ಅವಧಿ ಇದೆ. ನಾವು ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಅಭಿವೃದ್ಧಿಯ ವಿಷಯದಲ್ಲಿ ದೇಶದ ಯಾವುದೇ ಪ್ರದೇಶ ಹಿಂದೆ ಉಳಿಯದಂತೆ ನೋಡಿಕೊಳ್ಳಬೇಕು. ದೇಶದ ಅಪಾರ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ಮತ್ತು ಸುಸ್ಥಿರ ಬೆಳವಣಿಗೆಯನ್ನು ಸಾಧಿಸುವತ್ತ ಪ್ರಗತಿ ಸಾಧಿಸಲು ಸಂಘಟಿತ ಪ್ರಯತ್ನ ಅತ್ಯಗತ್ಯ ಎಂದು ಮೋದಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಭಿವೃದ್ಧಿ ಉಪಕ್ರಮಗಳ ಸರಣಿಯನ್ನು ಉದ್ಘಾಟಿಸಿದ್ದಾರೆ. . ಭಾರತವು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುತ್ತಿರುವುದರಿಂದ, ದೇಶದಲ್ಲಿ ಹೂಡಿಕೆ ಮಾಡಲು ಅಂತರರಾಷ್ಟ್ರೀಯ ಆಸಕ್ತಿಯು ಹೆಚ್ಚಿದೆ. ತೆಲಂಗಾಣ ಸಂಭಾವ್ಯ ಅವಕಾಶಗಳಿಗೆ ಭರವಸೆಯ ತಾಣವಾಗಿ ಹೊರಹೊಮ್ಮುತ್ತದೆ.

ತೆಲಂಗಾಣದ ಜನರ ಶಕ್ತಿ ಯಾವಾಗಲೂ ಭಾರತದ ಶಕ್ತಿಯನ್ನು ಹೆಚ್ಚಿಸಿದೆ.ಇಂದು ಭಾರತವು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದಾಗ, ತೆಲಂಗಾಣದ ಜನರು ಇದರಲ್ಲಿ ದೊಡ್ಡ ಪಾತ್ರವನ್ನು ಹೊಂದಿದ್ದಾರೆ.  ಭಾರತದಲ್ಲಿ, ಪ್ರಪಂಚದಾದ್ಯಂತ ಹೂಡಿಕೆ ಮಾಡಲು ಸಾಕಷ್ಟು ಉತ್ಸುಕತೆ ಇದೆ. ಇಡೀ ಪ್ರಪಂಚವು ಹೂಡಿಕೆ ಮಾಡಲು ಭಾರತಕ್ಕೆ ಬರುತ್ತಿರುವಾಗ, ತೆಲಂಗಾಣಕ್ಕೆ ಅನೇಕ ಅವಕಾಶಗಳಿವೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Khalistan Terrorists: ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ 21 ಖಲಿಸ್ತಾನಿಗಳ ಹೆಸರು ಪ್ರಕಟಿಸಿದ ಎನ್​ಐಎ

ಕೆಸಿಆರ್ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ

ತೆಲಂಗಾಣದ ವಾರಂಗಲ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ತೆಲಂಗಾಣ ಸರ್ಕಾರ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯುಂಟುಮಾಡುವುದು ಸೇರಿದಂತೆ ಅನೇಕ ತಪ್ಪುಗಳನ್ನು ಮಾಡಿದೆ ಎಂದು ಆರೋಪಿಸಿದ್ದಾರೆ.

ತೆಲಂಗಾಣದಲ್ಲಿ ಪ್ರಸ್ತುತ ಸರ್ಕಾರವು 4 ಕೆಲಸಗಳನ್ನು ಮಾಡಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರವನ್ನು ಬೈದು ಅವರು ಒಂದು ಕುಟುಂಬವನ್ನು ಅಧಿಕಾರಕ್ಕೇರಿಸಿದ್ದಾರೆ. ಅವರು ತೆಲಂಗಾಣದ ಆರ್ಥಿಕ ಅಭಿವೃದ್ಧಿಯನ್ನು ಅಲ್ಲೋಲಕಲ್ಲೋಲ ಮಾಡಿ ತೆಲಂಗಾಣವನ್ನು ಭ್ರಷ್ಟಾಚಾರಕ್ಕೆ ತಳ್ಳಿದ್ದಾರೆ. ಭ್ರಷ್ಟಾಚಾರದ ಆರೋಪ ಇಲ್ಲದ ಯಾವುದೇ ಯೋಜನೆ ಇಲ್ಲ. ತೆಲಂಗಾಣದಲ್ಲಿ ಕೆಸಿಆರ್ ಸರಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:33 pm, Sat, 8 July 23

Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುತ್ತೇನೆ: ದೇವೇಗೌಡ
ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುತ್ತೇನೆ: ದೇವೇಗೌಡ