ದೆಹಲಿ, ಡಿ.18: ರಾಮಮಂದಿರ (Ram Mandir) ನಿರ್ಮಾಣ ಪೂರ್ಣಗೊಳುತ್ತಿರುವ ವೇಳೆಯಲ್ಲಿ ವಿವಾದಿತ ಬಾಬರಿ ಮಸೀದಿಗೆ (Babri mosque) ನೀಡಿದ ಸ್ಥಳದಲ್ಲಿ ಹೊಸದಾಗಿ ಮಸೀದಿ ನಿರ್ಮಾಣದ ಹೊಣೆಯನ್ನು ಬಿಜೆಪಿ ನಾಯಕನಿಗೆ ನೀಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಿ. ಮಸೀದಿ ನಿರ್ಮಾಣಕ್ಕೆ ಬೇರೆ ಸ್ಥಳವನ್ನು ನೀಡಲಾಗಿತ್ತು. ಇದೀಗ ಬಾಬರಿ ಮಸೀದಿಯ ನಿರ್ಮಾಣದ ಜವಾಬ್ದಾರಿಯನ್ನು ಮುಂಬೈನ ಹಾಜಿ ಅರಾಫತ್ ಶೇಖ್ ಅವರಿಗೆ ನೀಡಲಾಗಿದೆ. ಹಾಜಿ ಅರಾಫತ್ ಶೇಖ್ ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರು.
ಇವರು ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸೇರಿಸಿಕೊಂಡಿದ್ದಾರೆ. ಹಾಗೂ ಇಸ್ಲಾಂ ಧರ್ಮಕ್ಕೆ ಇವರ ಕೊಡುಗೆ ಮಹತ್ತರವಾದ್ದದು. ಬಾಬರಿ ಮಸೀದಿಯನ್ನು ಅಯೋಧ್ಯೆಯ ಧನ್ನಿಪುರಗೆ ಸ್ಥಳಾಂತರಿಸಿದ ನಂತರ 2023 ಅಕ್ಟೋಬರ್ನಲ್ಲಿ ಈ ಮಸೀದಿಗೆ ಪ್ರವಾದಿ ‘ಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ’ ಎಂದು ಹೆಸರಿಸಲು ಅಖಿಲ ಭಾರತ ರಬ್ತಾ-ಎ-ಮಸ್ಜಿದ್ ಸೂಚಿಸಿತ್ತು.
ಇದೀಗ ಉತ್ತರ ಪ್ರದೇಶ ಸುನ್ನಿ ಮಂಡಳಿಯ ಅಧ್ಯಕ್ಷ ಜಾಫರ್ ಫಾರೂಕಿ ಅವರು ಹಾಜಿ ಅರಾಫತ್ ಅವರನ್ನು ಮಸೀದಿ ನಿರ್ಮಾಣದ ಮೇಲ್ವಿಚಾರಣೆಯ ಅಭಿವೃದ್ಧಿ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಲು ನಿರ್ಧರಿಸಿದ್ದಾರೆ. ಅಬ್ದುಲ್ಲಾ ಇಬ್ನ್ ಕಮರ್, ಡಾ. ಅಬಿದ್ ಸೈಯದ್, ಮೌಲಾನಾ ಮುಹಮ್ಮದ್ ಮದನಿ ಅಬ್ದುಲ್ ರಬ್ ಅವರ ಉಪಸ್ಥಿತಿಯಲ್ಲಿ ಇವರನ್ನು ನೇಮಕ ಮಾಡಲಾಗಿದೆ.
ಮಸೀದಿ ನಿರ್ಮಾಣ ಹೊಣೆಯನ್ನು ನನಗೆ ನೀಡಿರುವುದು, ತುಂಬಾ ಖುಷಿ ಇದೆ. ಈ ಕಾರ್ಯಕ್ಕೆ ನನ್ನ ಕೈಯಲಾದ ಸಹಾಯವನ್ನು ಮಾಡುತ್ತೇನೆ ಹಾಗೂ ವಿಶ್ವಕ್ಕೆ ಮಾದರಿಯಾಗುವಂತೆ ಇದರ ಅಭಿವೃದ್ಧಿಯನ್ನು ಮಾಡುವೆ, ಇದರ ಜತೆಗೆ ಮುಸ್ಲಿಂ ಸಮುದಾಯದ ಅಭಿವೃದ್ಧಿ ಕೂಡ ನಡೆಯುತ್ತದೆ ಎಂದು ಹೇಳಿದ್ದಾರೆ. ಹಲವು ವರ್ಷಗಳಿಂದ ಈ ಬಗ್ಗೆ ಚರ್ಚೆಯಲ್ಲಿ ಇತ್ತು. ಇದೀಗ ಈ ಸಮಸ್ಯೆಯನ್ನು ಪರಿಹಾರಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಬಾಬರಿ ಮಸೀದಿ ಧ್ವಂಸಕ್ಕೆ 29 ವರ್ಷ, 1992 ಡಿಸೆಂಬರ್ 6ರಂದು ಅಲ್ಲಿ ನಡೆದದ್ದೇನು?
ಇದು ದೇವರ ಇಚ್ಛೆ, ನಾನು ಖಂಡಿತವಾಗಿಯೂ ಈ ಮಸೀದಿಯನ್ನು ಪೂರ್ಣಗೊಳಿಸುತ್ತೇನೆ. ಈ ಉದಾತ್ತ ಕಾರ್ಯದಲ್ಲಿ, ನಾನು ದೇಶದ ಎಲ್ಲಾ ಧರ್ಮ ಮತ್ತು ಪ್ರತಿಯೊಂದು ಪ್ರದೇಶದ ಎಲ್ಲಾ ಧಾರ್ಮಿಕ ವಿದ್ವಾಂಸರು, ಧಾರ್ಮಿಕ ಮುಖಂಡರು, ಇಸ್ಲಾಮಿಕ್ ವಿದ್ವಾಂಸರ ಸಹಾಯವನ್ನು ತೆಗೆದುಕೊಳ್ಳುತ್ತೇನೆ. ಎಲ್ಲಾ ಶರಿಯತ್ ಅಂಶಗಳನ್ನು ಪಾಲಿಸಿ ಇದರ ನಿರ್ಮಾಣವನ್ನು ಪೂರ್ಣಗೊಳಿಸುತ್ತೇನೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ