ಹಿಟ್ ಆ್ಯಂಡ್ ರನ್ ಪ್ರಕರಣ: ವ್ಯಕ್ತಿಯೊಬ್ಬರನ್ನು ಬಾನೆಟ್ ಮೇಲೆ ಎಳೆದೊಯ್ದ ಟಿಟಿ ಚಾಲಕ
ದಕ್ಷಿಣ ದಿಲ್ಲಿಯ ಲಜ್‌ಪತ್ ನಗರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ ಟಿಟಿ ವಾಹನ ಡಿಕ್ಕಿ ಹೊಡೆದು ಅದರ ಬಾನೆಟ್ ಮೇಲೆ ಸ್ವಲ್ಪ ದೂರದವರೆಗೆ ಎಳೆದಕೊಂಡು ಹೋಗಿರುವ ಘಟನೆ ನಡೆದಿದೆ. ಈ ಬಗ್ಗೆ ಒಂದು ವಿಡಿಯೋ ವೈರಲ್ ಆಗಿದೆ. ಭಾನುವಾರ ರಾತ್ರಿ ನಡೆದ ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ದೆಹಲಿ, ಡಿ.18: ಹಿಟ್ ಆ್ಯಂಡ್ ರನ್ (Hit and run case) ಪ್ರಕರಣಗಳು ದೆಹಲಿಯಲ್ಲಿ ಹೆಚ್ಚಾಗಿದೆ. ಇಲ್ಲಿ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದೆ. ನೆನ್ನೆ (ಡಿ.17) ರಾತ್ರಿ ದಕ್ಷಿಣ ದಿಲ್ಲಿಯ ಲಜ್‌ಪತ್ ನಗರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ ಟಿಟಿ ವಾಹನ ಡಿಕ್ಕಿ ಹೊಡೆದು ಅದರ ಬಾನೆಟ್ ಮೇಲೆ ಸ್ವಲ್ಪ ದೂರದವರೆಗೆ ಎಳೆದಕೊಂಡು ಹೋಗಿರುವ ಘಟನೆ ನಡೆದಿದೆ. ಈ ಬಗ್ಗೆ ಒಂದು ವಿಡಿಯೋ ವೈರಲ್ ಆಗಿದೆ. ಭಾನುವಾರ ರಾತ್ರಿ ನಡೆದ ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ಎಕ್ಸ್ನಲ್ಲಿ ಹಂಚಿಕೊಂಡಿರುವ ಒಂದು ವಿಡಿಯೋದಲ್ಲಿ ಒಬ್ಬ ವ್ಯಕ್ತಿಗೆ ಟಿಟಿ ವಾಹನ ಬಂದು ಡಿಕ್ಕಿ ಹೊಡೆದಿದೆ. ಈ ವೇಳೆ ಆ ವ್ಯಕ್ತಿ ಟಿಟಿ ಬಾನೆಟ್ ಮೇಲೆ ನಿಂತಿದ್ದಾನೆ. ಇದನ್ನು ಲೆಕ್ಕಿಸದೆ ಟಿಟಿ ಚಾಲಕ ಸ್ವಲ್ಪ ದೂರುವರೆಗೆ ಎಳೆದುಕೊಂಡು ಹೋಗಿದ್ದಾನೆ. ಮತ್ತೊಂದು ವಿಡಿಯೋದಲ್ಲಿ ಇಳಿಯುತ್ತಿರುವುದನ್ನು ಕಾಣಬಹುದು. ಪೊಲೀಸರಿಗೆ ಬಂದಿರುವ ವರದಿ ಪ್ರಕಾರ ಭಾನುವಾರ ರಾತ್ರಿ 11:30ರ ಸುಮಾರಿಗೆ ಪಿಸಿಆರ್ಗೆ ಒಂದು ಕರೆ ಬಂದಿತ್ತು. ಡಿಎನ್‌ಡಿ ಫ್ಲೈಓವರ್‌ನಿಂದ ನೋಯ್ಡಾ ಕಡೆಗೆ ಹೋಗುತ್ತಿದ್ದಾಗ ಟಿಟಿ ವಾಹನದ ಚಾಲಕ ಲಜಪತ್ ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ತನ್ನ ವಾಹನದ ಬಾನೆಟ್ ಮೇಲೆ ಸ್ವಲ್ಪ ದೂರದವೆರಗೆ ಎಳೆದುಕೊಂಡು ಹೋಗಿದ್ದಾನೆ ಎಂದು ದೂರು ನೀಡಿದ್ದಾರೆ.
ಇದನ್ನೂ ಓದಿ: ಈ ದೃಶ್ಯ ನೋಡಿದ್ರೆ ಎದೆ ಝಲ್ ಎನ್ನುತ್ತೆ, ಬೀದಿ ನಾಯಿಗೆ ಆಹಾರ ನೀಡುತ್ತಿದ್ದ ವೇಳೆ ಯುವತಿಗೆ ಕಾರು ಡಿಕ್ಕಿ
ವೈರಲ್ ವಿಡಿಯೋ ಇಲ್ಲಿದೆ:
#WATCH | Man dragged on a minibus in Delhi’s Kotla Mubarakpur area last night, police probe underway
(Viral video confirmed by police) pic.twitter.com/GqiUfz9HMH
— ANI (@ANI) December 18, 2023
ಟಿಟಿ ವಾಹನವನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಗಳು ದೂರು ನೀಡಿದ್ದಾರೆ. ಈ ಘಟನೆಯಿಂದ ಆ ವ್ಯಕ್ತಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ದೂರು ನೀಡಿದವರು ಉತ್ತರಪ್ರದೇಶದವರಾಗಿದ್ದು, ನಾವು ದೂರು ನೀಡಲು ದೆಹಲಿ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ಅವರಲ್ಲಿ ದೂರು ನೀಡಲು ದೆಹಲಿಗೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ. ಒಂದು ಬಾರಿ ದೆಹಲಿಗೆ ಬಂದು ದೂರು ನೀಡಿದರೆ, ಕಾನೂನು ಪ್ರಕಾರ ಅವರ ಮೇಲ್ಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.