ಕೇರಳದಲ್ಲಿ ಕೊವಿಡ್ ರೂಪಾಂತರಿ ಜೆಎನ್​.1 ಪತ್ತೆ; ಏನಿದರ ಲಕ್ಷಣ? ತಡೆಗಟ್ಟುವುದು ಹೇಗೆ?

ಜ್ವರ, ವಿಪರೀತ ಶೀತ, ಗಂಟಲು ನೋವು ಈ ಹೊಸ ರೂಪಾಂತರಿಯ ಪ್ರಮುಖ ರೋಗಲಕ್ಷಣಗಳು. JN.1 ಅನ್ನು ಮೊದಲ ಬಾರಿಗೆ ಅಮೆರಿಕಾದಲ್ಲಿ ಸೆಪ್ಟೆಂಬರ್‌ನಲ್ಲಿ ಪತ್ತೆ ಹಚ್ಚಲಾಗಿತ್ತು. ಚೀನಾದಲ್ಲಿ ಡಿಸೆಂಬರ್ 15ರಂದು 7 ಪ್ರಕರಣಗಳು ಕಂಡುಬಂದಿವೆ.

ಕೇರಳದಲ್ಲಿ ಕೊವಿಡ್ ರೂಪಾಂತರಿ ಜೆಎನ್​.1 ಪತ್ತೆ; ಏನಿದರ ಲಕ್ಷಣ? ತಡೆಗಟ್ಟುವುದು ಹೇಗೆ?
ಕೊವಿಡ್‌ ರೂಪಾಂತರಿ
Follow us
ಸುಷ್ಮಾ ಚಕ್ರೆ
|

Updated on: Dec 18, 2023 | 3:15 PM

ಜಗತ್ತಿನಾದ್ಯಂತ ಮತ್ತೊಮ್ಮೆ ಕೊವಿಡ್ ಸೋಂಕು ಆತಂಕ ಸೃಷ್ಟಿಸಿದೆ. ಅಮೆರಿಕಾ, ಚೀನಾ ಬಳಿಕ ಇದೀಗ ನಮ್ಮ ನೆರೆಯ ರಾಜ್ಯವಾದ ಕೇರಳದಲ್ಲಿ ಕೊವಿಡ್ ರೂಪಾಂತರಿ JN.1 ಪ್ರಕರಣ ಪತ್ತೆಯಾಗಿದೆ. ಭಾರತಕ್ಕೂ ಈ ಹೊಸ ರೂಪಾಂತರಿ ವೈರಸ್ ಕಾಲಿಟ್ಟಿರುವುದರಿಂದ ಮತ್ತೊಮ್ಮೆ ಆತಂಕ ಎದುರಾಗಿದೆ. ಕೊವಿಡ್ ವೇರಿಯಂಟ್ JN. 1 ಹೆಚ್ಚಿನ ಟ್ರಾನ್ಸ್ಮಿಸಿಬಿಲಿಟಿ ಮತ್ತು ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಇದು ಹಿಂದಿನ ಒಮಿಕ್ರಾನ್ ತಳಿಯದ್ದೇ ರೋಗಲಕ್ಷಣಗಳನ್ನು ಹೊಂದಿದೆ. ಆದರೆ, ದುರ್ಬಲ ಆರೋಗ್ಯ ಸ್ಥಿತಿ ಹೊಂದಿರುವವರಿಗೆ, ಗರ್ಭಿಣಿಯರಿಗೆ, ವೃದ್ಧರಿಗೆ, ಮಕ್ಕಳಿಗೆ ಈ ಸೋಂಕಿನ ಅಪಾಯ ಹೆಚ್ಚು. ಹೀಗಾಗಿ, ಈ ಹೊಸ ಕೊವಿಡ್ ರೂಪಾಂತರಿಯ ಲಕ್ಷಣಗಳು, ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕಾದುದು ಅಗತ್ಯ.

ಜ್ವರ, ವಿಪರೀತ ಶೀತ, ಗಂಟಲು ನೋವು ಈ ಹೊಸ ರೂಪಾಂತರಿಯ ಪ್ರಮುಖ ರೋಗಲಕ್ಷಣಗಳು. JN.1 ಅನ್ನು ಮೊದಲ ಬಾರಿಗೆ ಅಮೆರಿಕಾದಲ್ಲಿ ಸೆಪ್ಟೆಂಬರ್‌ನಲ್ಲಿ ಪತ್ತೆ ಹಚ್ಚಲಾಗಿತ್ತು. ಚೀನಾದಲ್ಲಿ ಡಿಸೆಂಬರ್ 15ರಂದು 7 ಪ್ರಕರಣಗಳು ಕಂಡುಬಂದಿವೆ. ಇದು ಈ ಸೋಂಕಿನ ಹರಡುವಿಕೆಯ ಬಗ್ಗೆ ಕಳವಳಕ್ಕೆ ಕಾರಣವಾಗಿದೆ. ಕೋವಿಡ್ -19 ಮತ್ತು ಇನ್ಫ್ಲುಯೆನ್ಸದ ತಾಜಾ ಪ್ರಕರಣಗಳು ಅಮೆರಿಕದ ಆರೋಗ್ಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಎಚ್ಚರಿಸಿದೆ.

ಇದನ್ನೂ ಓದಿ: ಕೊವಿಡ್ ಚಿಕಿತ್ಸೆ ಬಳಿಕ ಕಂದು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗಿದ ಮಗುವಿನ ಕಣ್ಣು

ಭಾರತದಲ್ಲಿಯೂ ಕೊವಿಡ್‌ ರೂಪಾಂತರಿ JN.1 ಪ್ರಕರಣ:

“JN.1 ಸ್ಟ್ರೈನ್ ಕೊರೋನಾವೈರಸ್ ಇತ್ತೀಚೆಗೆ ಕೇರಳದಲ್ಲಿ ಪತ್ತೆಯಾಗಿದೆ. ಡಿಸೆಂಬರ್ 8ರಂದು ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯ ಕರಕುಲಂನಲ್ಲಿ ಆರ್​ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. 79 ವರ್ಷದ ಮಹಿಳೆ ಈ ಸೋಂಕಿನ ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದರು.

ಕೊವಿಡ್‌ ರೂಪಾಂತರಿ JN.1 ಲಕ್ಷಣಗಳು:

JN.1 ಅಮೆರಿಕಾದಲ್ಲಿ ಸುಮಾರು ಶೇ. 15ರಿಂದ ಶೇ. 29ರಷ್ಟು ಪ್ರಕರಣಗಳನ್ನು ಹೊಂದಿದೆ. ಹೆಚ್ಚಿದ ಸೋಂಕು ಮತ್ತು ಹರಡುವಿಕೆ ಇದ್ದರೂ JN.1ನ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ. ಈ ಸೋಂಕು ಕಾಣಿಸಿಕೊಂಡರೆ ಆಸ್ಪತ್ರೆಗೆ ದಾಖಲಾಗಲೇಬೇಕೆಂದೇನೂ ಇಲ್ಲ. ಮನೆಯಲ್ಲೇ ಕ್ವಾರಂಟೈನ್ ಆಗಿ ರೋಗವನ್ನು ಕಡಿಮೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಕೊರೊನಾ ಪರೀಕ್ಷೆ ಹೆಚ್ಚಿಸುತ್ತೇವೆ, ನಿರ್ಬಂಧ ಸದ್ಯಕ್ಕಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

ರೋಗ ತಡೆಗಟ್ಟುವುದು ಹೇಗೆ?:

ಈ ರೋಗ ಹರಡದಂತೆ ಮಾಸ್ಕ್ ಧರಿಸುವುದು, ಗ್ಲೌಸ್​ಗಳನ್ನು ಹಾಕಿಕೊಳ್ಳುವುದು, ನೈರ್ಮಲ್ಯ ಕಾಪಾಡಿಕೊಳ್ಳುವುದು ಅಗತ್ಯ. ಹಾಗೇ, ಮುನ್ನೆಚ್ಚರಿಕಾ ಕ್ರಮವಾಗಿ ಬೂಸ್ಟರ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ತಜ್ಞರು ಸಲಹೆ ನೀಡಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ