Karnataka Breaking Kannada News Highlights: ಅನೇಕರು ನನ್ನನ್ನು ತುಳಿಯಲು ಯತ್ನಿಸಿದರು: ಜನಾರ್ದನ ರೆಡ್ಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: May 28, 2023 | 9:52 PM

Karnataka Breaking Kannada Highlights News Updates in Kannada: 24 ಶಾಸಕರು ನಿನ್ನೆ(ಮೇ 27) ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ಈಗ ಇನ್ನೇನಿದ್ರೂ ಯಾರಿಗೆ ಯಾವ ಖಾತೆ ಸಿಗುತ್ತೆ ಹಾಗೂ ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ಎನ್ನುವುದು ಕುತೂಹಲ ಮೂಡಿಸಿದೆ. 

Karnataka Breaking Kannada News Highlights: ಅನೇಕರು ನನ್ನನ್ನು ತುಳಿಯಲು ಯತ್ನಿಸಿದರು: ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ

Karnataka Breaking Kannada News in Kannada: ತೀವ್ರ ಕುತೂಹಲ ಕೆರಳಿಸಿದ್ದ ಸಿದ್ದರಾಮಯ್ಯ ಸಂಪುಟದ (Siddaramaiah Cabinet) ವಿಸ್ತರಣೆ ಆಗಿದೆ. 24 ಶಾಸಕರು ನಿನ್ನೆ(ಮೇ 27) ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ಇದರೊಂದಿಗೆ ಸಿದ್ದರಾಮಯ್ಯ ಸೇರಿದಂತೆ ಒಟ್ಟು 34 ಸ್ಥಾನಗಳು ಭರ್ತಿಯೊಂದಿಗೆ ಈಗ ಸಂಪೂರ್ಣ ಸಂಪುಟ ಆಗಿದೆ. ಈಗ ಇನ್ನೇನಿದ್ರೂ ಯಾರಿಗೆ ಯಾವ ಖಾತೆ ಸಿಗುತ್ತೆ ಹಾಗೂ ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ (district incharge Ministers) ಎನ್ನುವುದು ಕುತೂಹಲ ಮೂಡಿಸಿದೆ.

LIVE NEWS & UPDATES

The liveblog has ended.
  • 28 May 2023 08:59 PM (IST)

    Karnataka Breaking Kannada News Live: ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಬಗ್ಗೆ ವಿಪಕ್ಷಗಳಿಂದ ಟೀಕೆ

    ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಬಗ್ಗೆ ವಿಪಕ್ಷಗಳಿಂದ ಟೀಕೆ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದು, ಬಿಜೆಪಿಯವ್ರು 15 ಲಕ್ಷ ಅಕೌಂಟ್‌ಗೆ ಹಾಕ್ತೀವಿ ಅಂದ್ರಲ್ಲಾ?, ಹಾಕಿದ್ರಾ? ಒಂದು ಲಕ್ಷ ರೂಪಾಯಿ ಸಾಲ ಮನ್ನಾ ಮಾಡ್ತೀವಿ ಅಂದ್ರು, ಏನಾಯ್ತು? ಮೊದಲು ಬಿಜೆಪಿಯವರು ನೀಡಿದ್ದ ಭರವಸೆಗಳ ಬಗ್ಗೆ ಮಾತನಾಡಲಿ ಎಂದಿದ್ದಾರೆ.

  • 28 May 2023 08:26 PM (IST)

    Karnataka Breaking Kannada News Live: ಲಡ್ಡುಗಾಗಿ ಮುಗಿಬಿದ್ದ ಕಾಂಗ್ರೆಸ್ ಕಾರ್ಯಕರ್ತರು

    ಬೆಳಗಾವಿ: ಕಾಂಗ್ರೆಸ್ ವಿಜಯೋತ್ಸವದಲ್ಲಿ ಲಡ್ಡುಗಾಗಿ ಕಾಂಗ್ರೆಸ್​ ಕಾರ್ಯಕರ್ತರು ಮುಗಿಬಿದಿದ್ದಾರೆ.  ಸಚಿವರಾದ ಬಳಿಕ ಮೊದಲ ಬಾರಿ ಬೆಳಗಾವಿಗೆ ಆಗಮಿಸಿದ್ದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್
    ತೆರೆದ ವಾಹನದಲ್ಲಿ ಸಚಿವದ್ವಯರ ಬೃಹತ್ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಮುನ್ನ ಹಂಚಲು ತಂದಿದ್ದ ಲಡ್ಡುಗಾಗಿ ಕೈ ಕಾರ್ಯಕರ್ತರು ಮುಗಿಬಿದಿದ್ದಾರೆ.


  • 28 May 2023 07:24 PM (IST)

    Karnataka Breaking Kannada News Live: ಸಚಿವ ಸತೀಶ್ ಜಾರಕಿಹೊಳಿ, ನನ್ನ ನಡುವೆ ವೈಚಾರಿಕ ಸಂಬಂಧ ಇದೆ

    ಸಚಿವ ಸತೀಶ್ ಜಾರಕಿಹೊಳಿ, ನನ್ನ ನಡುವೆ ವೈಚಾರಿಕ ಸಂಬಂಧ ಇದೆ ಎಂದು ಬೈಲೂರು ನಿಷ್ಕಲ ಮಂಟಪದಲ್ಲಿ ನಿಜಗುಣಾನಂದ ಸ್ವಾಮೀಜಿ ಹೇಳಿದರು. ನಮ್ಮ ನಡುವೆ ಯಾವುದೇ ವ್ಯಾವಹಾರಿಕ ಸಂಬಂಧ ಇಲ್ಲ. ನಾವಿಬ್ಬರು ಸಮಾನ ಮನಸ್ಕರು, ಹೀಗಾಗಿ ಮಠಕ್ಕೆ ಬಂದಿದ್ದಾರೆ. ಬಸವಣ್ಣ, ಬುದ್ಧ, ಅಂಬೇಡ್ಕರ್​ ತತ್ವಗಳ ಬಗ್ಗೆ ಅಪಾರ ನಂಬಿಕೆ. ಸತೀಶ್ ಜಾರಕಿಹೊಳಿ ಹುಟ್ಟು ಲಿಂಗಾಯತ ಅಲ್ಲ. ಆದರೂ ಸತೀಶ್​​ ಜಾರಕಿಹೊಳಿಗೆ ಬಸವಣ್ಣ ತತ್ವದ ಬಗ್ಗೆ ನಂಬಿಕೆ ಇದೆ ಎಂದರು.

  • 28 May 2023 07:01 PM (IST)

    Karnataka Breaking Kannada News Live: ಕೊಟ್ಟ ಮಾತು ಬದಲಾಯಿಸುವ ಪ್ರಶ್ನೆಯೇ ಬರಲ್ಲ

    ಚಿತ್ರದುರ್ಗ: ಹಂತ ಹಂತವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತೆ ಎಂದು ಶಾಸಕ ವೀರೇಂದ್ರ ಪಪ್ಪಿ ಹೇಳಿದರು. ಕೊಟ್ಟ ಮಾತು ಬದಲಾಯಿಸುವ ಪ್ರಶ್ನೆಯೇ ಬರಲ್ಲ. ಗ್ಯಾರಂಟಿಗಳಿಗೆ ಷರತ್ತು ವಿಧಿಸಬೇಕಾ, ಬೇಡವಾ ಎಂಬ ನಿರ್ಣಯವೂ ಆಗಿಲ್ಲ. ಸರ್ಕಾರದ ಆದೇಶ ಬಂದ ಬಳಿಕವಷ್ಟೇ ಸ್ಪಷ್ಟತೆ ಸಿಗಲಿದೆ. ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

     

  • 28 May 2023 06:17 PM (IST)

    Karnataka Breaking Kannada News Live: ಗಂಗಾವತಿಯನ್ನು ಮಾದರಿ ನಗರವನ್ನಾಗಿ ಮಾಡುತ್ತೇನೆ

    ಈ ಬಾರಿ ಕಾಂಗ್ರೆಸ್ ಗ್ಯಾರಂಟಿಗಳಿಗೆ ಜನ ಮತ ನೀಡಿದ್ದಾರೆ. ನಾನು ಅದಕ್ಕಿಂತ ಹೆಚ್ಚಾಗಿ ಕ್ಷೇತ್ರವನ್ನು ಅಭಿವೃದ್ಧಿ ಮಾಡುವೆ. ನಾನು ಕೊಟ್ಟಿರುವ ಭರವಸೆಗಳನ್ನು ಈಡೇರಿಸುತ್ತೇನೆ. ಇಲ್ಲದಿದ್ದರೆ ಮುಂದಿನ ಬಾರಿ ನನಗೆ ಮತ ಹಾಕಬೇಡಿ ಎಂದು ಜನಾರ್ದನ ರೆಡ್ಡಿ ಹೇಳಿದರು. ಗಂಗಾವತಿಯನ್ನು ಮಾದರಿ ನಗರವನ್ನಾಗಿ ಮಾಡುತ್ತೇನೆ. ಗಂಗಾವತಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವೆ. ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳುತ್ತೇನೆ ಎಂದರು.

  • 28 May 2023 05:46 PM (IST)

    Karnataka Breaking Kannada News Live: 5 ಗ್ಯಾರಂಟಿಗಳನ್ನು ಕಾಂಗ್ರೆಸ್‌ ಈಡೇರಿಸುತ್ತೆ ಎಂಬ ಭರವಸೆ ಇದೆ

    ದೆಹಲಿ: ಐದು ಗ್ಯಾರಂಟಿಗಳನ್ನು ಕಾಂಗ್ರೆಸ್‌ ಈಡೇರಿಸುತ್ತೆ ಎಂಬ ಭರವಸೆ ಇದೆ ಎಂದು ಕಲಬುರಗಿ ಕ್ಷೇತ್ರದ ಸಂಸದ ಉಮೇಶ್ ಜಾಧವ್ ಹೇಳಿದರು. ಗ್ಯಾರಂಟಿಗಳನ್ನು ಸಿಎಂ ಸಿದ್ದರಾಮಯ್ಯ ಈಡೇರಿಸುತ್ತಾರೆಂಬ ವಿಶ್ವಾಸವಿದೆ. ಒಂದು ವೇಳೆ ಗ್ಯಾರಂಟಿ ಈಡೇರಿಸದಿದ್ದರೆ ನೆನಪಿಸುವ ಕೆಲಸ ಮಾಡುತ್ತೇವೆ ಎಂದರು.

  • 28 May 2023 05:44 PM (IST)

    Karnataka Breaking Kannada News Live: ಅನೇಕರು ನನ್ನನ್ನು ತುಳಿಯಲು ಯತ್ನಿಸಿದರು

    ಅನೇಕರು ನನ್ನನ್ನು ತುಳಿಯಲು ಯತ್ನಿಸಿದರು. ಆದರೆ ಗಂಗಾವತಿ ಕ್ಷೇತ್ರದ ಜನತೆ ನನ್ನನ್ನು ಮೇಲೆತ್ತಿದ್ದಾರೆ ಎಂದು ಕೆಆರ್​ಪಿಪಿ ನೂತನ ಶಾಸಕ ಜನಾರ್ದನ ರೆಡ್ಡಿ ಹೇಳಿದರು. ಮತದಾರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರೆಡ್ಡಿ ರಾಜಕೀಯ ಮುಗಿದೇ ಹೋಯಿತು ಅಂದುಕೊಂಡಿದ್ದವರಿಗೆ ಉತ್ತರ ನೀಡಿದ್ದೀರಿ. ನಿಮಗೆಲ್ಲಾ ನಾನು ನನ್ನ ಶಿರ ಭಾಗಿ ನಮಸ್ಕರಿಸುತ್ತೇನೆ ಎಂದರು.

  • 28 May 2023 05:13 PM (IST)

    Karnataka Breaking Kannada News Live: ನಾವು ಪಕ್ಷದ ಹಿತದೃಷ್ಟಿಯಿಂದ ಕೆಲ ಮಾತುಕತೆ ಆಡಿದ್ದೇವೆ

    ಯಾವ ಮಾತುಕತೆಯೂ ಇಲ್ಲ. ನಾವು ಪಕ್ಷದ ಹಿತದೃಷ್ಟಿಯಿಂದ ಕೆಲ ಮಾತುಕತೆ ಆಡಿದ್ದೇವೆ. ಊಹಪೋಹಗಳು ಬಂದಿವೆ. ಸತತವಾಗಿ 8 ಬಾರಿ ರಾಮಲಿಂಗಾ ರೆಡ್ಡಿ ಶಾಸಕರಾಗಿದ್ದಾರೆ. ಕಳೆದ ಬಾರಿ ನಮಗೂ ಇರಲಿಲ್ಲ, ಅವರಿಗೂ ಇರಲಿಲ್ಲ. ರಾಮಲಿಂಗಾ ರೆಡ್ಡಿ ಅವರು ಪಕ್ಷಕ್ಕೆ ಬದ್ಧರಾಗಿದ್ದಾರೆ. ನನಗೂ ಕಳೆದ ಬಾರಿ ಏನೂ ಸಿಕ್ಕಿರಲಿಲ್ಲ, ಅವರಿಗೂ ಸಿಕ್ಕಿರಲಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.

  • 28 May 2023 05:00 PM (IST)

    Karnataka Breaking Kannada News Live: ಪಕ್ಷದ ತೀರ್ಮಾನಕ್ಕೆ ಸಚಿವ ರಾಮಲಿಂಗಾರೆಡ್ಡಿ ಬದ್ಧರಾಗಿರುತ್ತಾರೆ

    ಪಕ್ಷದ ತೀರ್ಮಾನಕ್ಕೆ ಸಚಿವ ರಾಮಲಿಂಗಾರೆಡ್ಡಿ ಬದ್ಧರಾಗಿರುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್​  ಪ್ರತಿಕ್ರಿಯೆ ನೀಡಿದ್ದಾರೆ. ರಾಮಲಿಂಗಾರೆಡ್ಡಿ, ನಾವು ಬದ್ಧರಾಗಿರುತ್ತೇವೆ, ಯಾವುದೇ ಗೊಂದಲವಿಲ್ಲ. ಸಮ್ಮಿಶ್ರ ಸರ್ಕಾರದಲ್ಲೂ ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ಇರಲಿಲ್ಲ ಎಂದು ಹೇಳಿದರು.

  • 28 May 2023 04:49 PM (IST)

    ಫೈನಲ್‌ಗೆ ಮಳೆ ಕಾಟ

    ಹವಾಮಾನ ಇಲಾಖೆಯ ವರದಿಯ ಪ್ರಕಾರ ರಾತ್ರಿ 8 ರಿಂದ 9 ಗಂಟೆಯವರೆಗೆ ಅಹಮದಾಬಾದ್​ನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯಕ್ಕೆ ಮಳೆ ವಿಲನ್ ಆಗುವ ಸಾಧ್ಯತೆಗಳಿವೆ.

  • 28 May 2023 04:06 PM (IST)

    Karnataka Breaking Kannada News Live: ರಾಮಲಿಂಗಾ ರೆಡ್ಡಿ ಮನವೊಲಿಕೆ ಡಿಕೆ ಶಿವಕುಮಾರ್​ ಯತ್ನ

    ಬೆಂಗಳೂರಿನ ಕೋರಮಂಗಲದಲ್ಲಿರುವ ಸಚಿವ ರಾಮಲಿಂಗಾರೆಡ್ಡಿ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಆಗಮಿಸಿದ್ದು, ರಾಮಲಿಂಗಾ ರೆಡ್ಡಿ ಜೊತೆ ಡಿಸಿಎಂ ಡಿ.ಕೆ.ಶಿವಕುಮಾರ್​ ಚರ್ಚೆ ಮಾಡಿದ್ದಾರೆ. ಸಾರಿಗೆ ಇಲಾಖೆ ಖಾತೆ ಪಡೆಯುವಂತೆ ಮನವೊಲಿಕೆಗೆ ಯತ್ನಿಸಿದ್ದು, ಸಾರಿಗೆ ಇಲಾಖೆ ಖಾತೆ ಒಪ್ಪಿಕೊಳ್ಳುವಂತೆ ರಾಮಲಿಂಗಾ ರೆಡ್ಡಿಗೆ ಮನವಿ ಮಾಡಿದ್ದಾರೆ. ನನಗೆ ಸಾರಿಗೆ ಇಲಾಖೆ ಬೇಡ ಎಂದು ರಾಮಲಿಂಗಾ ರೆಡ್ಡಿ ಪುನರುಚ್ಚರಿಸಿದ್ದಾರೆ.

  • 28 May 2023 03:37 PM (IST)

    Karnataka Breaking Kannada News Live: ಆಡಳಿತ ಯಂತ್ರಕ್ಕೆ ಚುರುಕು ನೀಡಲು ಮುಂದಾದ ಸಿದ್ದರಾಮಯ್ಯ

    ಬೆಂಗಳೂರು: ಆಡಳಿತ ಯಂತ್ರಕ್ಕೆ ಚುರುಕು ನೀಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದು, ನೂತನ ಸಚಿವರಿಗೆ ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ನಾವು ಕೊಟ್ಟ ಗ್ಯಾರಂಟಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ. ಅಧಿಕಾರಿಗಳ ಮೇಲೆ ನಿಗಾ ಇಟ್ಟು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಲೋಕಸಭಾ ಚುನಾವಣೆಯಲ್ಲಿ ನಾವು ಕನಿಷ್ಠ 20 ಸ್ಥಾನ ಗೆದ್ದು ಹೈಕಮಾಂಡ್​ ನಾಯಕರಿಗೆ ಗಿಫ್ಟ್​​ ನೀಡಬೇಕು ಎಂದು ಎಲ್ಲಾ ಸಚಿವರಿಗೂ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

  • 28 May 2023 03:17 PM (IST)

    Karnataka Breaking Kannada News Live: ಐದು ಗ್ಯಾರಂಟಿಗಳನ್ನು ನಾವು ಜಾರಿಗೆ ತಂದೇ ತರುತ್ತೇವೆ

    ಬೆಳಗಾವಿ: 5 ಗ್ಯಾರಂಟಿಗಳ ಜಾರಿಗೆ ಮೊದಲ ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಬೆಳಗಾವಿಯಲ್ಲಿ ಟಿವಿ9ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಐದು ಗ್ಯಾರಂಟಿಗಳನ್ನು ನಾವು ಜಾರಿಗೆ ತಂದೇ ತರುತ್ತೇವೆ. ನಾವಂತೂ ಗ್ಯಾರಂಟಿ ಭರವಸೆ ಈಡೇರಿಸಲು ಸಿದ್ಧರಿದ್ದೇವೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೂ ಸೂಚನೆ ಕೊಟ್ಟಿದ್ದೇವೆ. ಗ್ಯಾರಂಟಿ ಜಾರಿ ಮಾಡಲು ಐದಾರು ತಿಂಗಳು ಸಮಯ ಕೇಳ್ತಿಲ್ಲ. 15-20 ದಿನಗಳ ಕಾಲಾವಕಾಶ ಕೇಳ್ತಿದ್ದೇವೆ ಎಂದರು.

  • 28 May 2023 01:31 PM (IST)

    New Parliament inauguration Live: ಇಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯ ಬರುವ ದಿನಗಳಲ್ಲಿ ಬಹಳಷ್ಟು ಮಹತ್ವ

    ನವದೆಹಲಿ: ಇಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯ ಬರುವ ದಿನಗಳಲ್ಲಿ ಬಹಳಷ್ಟು ಮಹತ್ವವಾಗುತ್ತದೆ. ಇಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯ ಭಾರತದ ಉಜ್ವಲ ಭವಿಷ್ಯದ ಆಧಾರವಾಗಲಿದೆ. ಇಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯ ಬಡವರ ಪಾಲಿನ ಆಶಾ ಕಿರಣವಾಗಲಿವೆ. ಈ ಸಂಸತ್​ ಬಡವರ ಕಲ್ಯಾಣಕ್ಕಾಗಿ ಸಮರ್ಪಿತವಾಗಿದೆ. ಇಲ್ಲಿ ನಿರ್ಮಸಲಿರುವ ಕಾನೂನುಗಳು ಬಡವರ, ಯುವಕರ ಏಳಿಗೆಗೆ ಅನುಕೂಲವಾಗಲಿವೆ. ನಾನು ದೇಶದ ಜನರಿಗೆ ನೂತನ ಸಂಸತ್​ ನಿರ್ಮಾಣದ ಶುಭಾಶಯ ತಿಳಿಸುತ್ತೇನೆ ಎಂದು ಪ್ರಧಾನಿ ಮೋದಿಯವರು ತಮ್ಮ ಮಾತಿಗೆ ವಿರಾಮ ಹೇಳಿದರು.

  • 28 May 2023 01:27 PM (IST)

    New Parliament inauguration Live: ಸಂಸ್ಕೃತ ಸಾಲುಗಳನ್ನು ಹೇಳುವ ಮೂಲಕ ನಾಯಕರಿಗೆ ಮೋದಿ ಕಿವಿಮಾತು

    ನವದೆಹಲಿ: ಸಫಲತೆ ಮೊದಲ ಶರತ್​ ಸಫಲ ಹೊಂದುತ್ತೇನೆ ಎಂಬ ವಿಶ್ವಾಸದಲ್ಲಿ ಅಡಗಿದೆ. ಈ ಸಂಸತ್​ ಭವನ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವನ್ನು ಜಾಗೃತಗೊಳಿಸುತ್ತದೆ. ಇಲ್ಲಿ ಕುಳಿತ ಪ್ರತಿಯೊಬ್ಬ ಜನನಾಯಕನಲ್ಲೂ ಕರ್ತವ್ಯ ಜಾಗೃತ ಮಾಡುತ್ತದೆ. ನಮಗೆ ದೇಶ ಮೊದಲು. ನಾವು ನಿರಂತರವಾಗಿ ನಮ್ಮನ್ನು ನಾವು ಸುಧಾರಣೆಯಾಗಬೇಕು. ನಾವು ಹೊಸ ಮಾರ್ಗವನ್ನು ಹುಡುಕುತ್ತಿರಬೇಕು. ಲೋಕ ಕಲ್ಯಾಣ ನಮ್ಮ ಜೀವನದ ಮಂತ್ರವಾಗಿರಬೇಕು ಎಂದು ಸಂಸ್ಕೃತ ಮಂತ್ರಗಳನ್ನು ಹೇಳುವ ಮೂಲಕ ನಾಯಕರಿಗೆ ಕಿವಿ ಮಾತು ಹೇಳಿದರು.

  • 28 May 2023 01:24 PM (IST)

    New Parliament inauguration Live: ಭಾರತ ಜಗತ್ತಿನ ಅನೇಕ ದೇಶಗಳಿಗೆ ಪ್ರೇರಣೆಯಾಗಿದೆ

    ನವದೆಹಲಿ: ಸ್ವಾತಂತ್ರ್ಯದ ಪೂರ್ವದಲ್ಲಿ ಒಂದು ಸಮಯದಲ್ಲಿ ಮಹಾತ್ಮಾ ಗಾಂಧಿಯವರ ಸಯೋಗ ಆಂದೋಲನವು ಪ್ರತಿಯೊಬ್ಬ ಭಾರತಿಯನ್ನು ಒಗ್ಗೂಡಿಸಿತ್ತು. ಇದರ ಪ್ರತಿಫಲ ನಮಗೆ 1947ರಲ್ಲಿ ದೊರೆಯಿತು.  ಮುಂದಿನ ದಿನಗಳಲ್ಲಿ ಭಾರತ ಹೊಸ ಮಾರ್ಗದಲ್ಲಿ ಸಾಗಲಿದೆ. ಭಾರತದ ವಿಶ್ವಾಸ ಬೇರೆ ದೇಶದ ವಿಶ್ವಾಸಕ್ಕೆ ಉತ್ತೇಜನ ನೀಡಿತು. ಭಾರತದಂತ ವಿವಿಧತೆಯಿಂದ ಕೂಡಿದ ದೇಶ ವಿಶ್ವಾಸದಿಂದ ಮುನ್ನಡೆಯುತ್ತದೆ. ಇದು ಬೇರೆ ದೇಶಗಳಿಗೆ ಪ್ರೇರಣೆಯಾಗಿದೆ. ಭಾರತ ಜಗತ್ತಿನ ಅನೇಕ ದೇಶಗಳಿಗೆ ಪ್ರೇರಣೆಯಾಗಿದೆ.

  • 28 May 2023 01:20 PM (IST)

    New Parliament inauguration Live: ದೇಶದ ಅಭಿವೃದ್ಧಿ ದೇಶದ ಜನರ ಅಭಿವೃದ್ದಿ

    ನವದೆಹಲಿ: ಸಂಸತ್​ನಲ್ಲಿ ಡಿಜಿಟಲ್​ ಗ್ಯಾಲರಿ ಇದೆ. ಸಂಸತ್​ನಲ್ಲಿ ಸಾಕಷ್ಟು ಕಾರ್ಮಿಕರ ಪರಿಶ್ರಮವಿದೆ. 9 ವರ್ಷಗಳಲ್ಲಿ 9 ಹೊಸ ನಿರ್ಮಾಣದ ಕಲ್ಯಾಣವಾಗಿದೆ. 9 ವರ್ಷಗಳಲ್ಲಿ ಬಡವರಿಗಾಗಿ 4 ಕೋಟಿ ಮನೆಗಳನ್ನು ನಿರ್ಮಾಣವಾಗಿವೆ. 13 ಕೋಟಿ ಶೌಚಾಲಯ ನಿರ್ಮಾಣವಾಗಿದೆ. ಈ ನೂತನ ಸಂಸತ ಭವನದಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದೇವೆ. ನೀರು ಸಂರಕ್ಷಣೆಗಾಗಿ 50 ಸಾವಿರಕ್ಕಿಂತ ಹೆಚ್ಚು ಅಮೃತ ಸರೋವರ ನಿರ್ಮಾಣ ಮಾಡಿದ್ದೇವೆ ಇದು ನನಗೆ ಬಹಳ ಸಂಸತ ತಂದಿದೆ. ದೇಶದ ಅಭಿವೃದ್ಧಿ ದೇಶದ ಜನರ ಅಭಿವೃದ್ದಿ ಎಂದು ಪ್ರಧಾನಿ ಮೋದಿ ಹೇಳಿದರು.

  • 28 May 2023 01:15 PM (IST)

    New Parliament inauguration Live: ಸಂಸತ್​​ನ ಕಣ ಕಣದಲ್ಲಿ ಏಕ ಭಾರತ ಶ್ರೇಷ್ಠ ಭಾರತದ ದರ್ಶನವಾಗಲಿದೆ

    ನವದೆಹಲಿ: ನಮ್ಮ ದೇಶ ವಿವಿಧತೆಯಿಂದ ಕೂಡಿದೆ. ಈ ಸಂಸತ್​​ ಭವನ ವಿವಿಧತೆಯಲ್ಲಿ ಏಕತೆಯ ಪ್ರತೀಕವಾಗಿದೆ. ಸಂಸತ್​​ನ ಕಣ ಕಣದಲ್ಲಿ ಏಕ ಭಾರತ ಶ್ರೇಷ್ಠ ಭಾರತದ ದರ್ಶನವಾಗಲಿದೆ.

  • 28 May 2023 01:12 PM (IST)

    New Parliament inauguration Live: ರಾಜದಂಡ ಪ್ರಜಾಪ್ರಭುತ್ಚಕ್ಕೆ ಮಾದರಿ

    ನವದೆಹಲಿ: ನವ ಭಾರತ ನಿರ್ಮಾಣಕ್ಕಾಗಿ ನಾವೆಲ್ಲರೂ ಶ್ರಮಿಸುತ್ತಿದ್ದೇವೆ. ಇಡೀ ವಿಶ್ವಕ್ಕೆ ಭಾರತ ದೇಶದ ಶಕ್ತಿ ಏನೆಂಬುದು ಗೊತ್ತಾಗಿದೆ. ಸಂವಿಧಾನ ನಮಗೆ ಪ್ರೇರಣೆಯಾಗಿದೆ. ರಾಜದಂಡವನ್ನು ಸಂಸತ್​ ಭವನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ರಾಜದಂಡ ಪ್ರಜಾಪ್ರಭುತ್ಚಕ್ಕೆ ಮಾದರಿಯಾಗಿದೆ. ಈ ಸಂಸತ್​ ಭವನ ಕಂಡು ಭಾರತೀಯರಿಗೆ ಹೆಮ್ಮೆಯಾಗಿದೆ. ಇದರಲ್ಲಿ ಸಂವಿಧಾನದ ಸ್ವರ, ಕಲಾ, ಸಂಸ್ಕೃತಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

  • 28 May 2023 01:10 PM (IST)

    New Parliament inauguration Live: ಸೆಂಗೋಲ್​​ ನಾವು ಮಾಡಬೇಕಾದ ಕರ್ತವ್ಯವನ್ನು ನೆನಪಿಸುತ್ತೆ

    ನವದೆಹಲಿ: ಆತ್ಮ ನಿರ್ಭರ್​ ಭಾರತ್​ ಯೋಜನೆಗೆ ಇದು ಸಾಕ್ಷಿಯಾಗಿದೆ. ಭಾರತೀಯರ ಸಂಕಲ್ಪದಿಂದ ಸಂಸತ್​ ಭವನ ನಿರ್ಮಾಣವಾಗಿದೆ. ಭಾರತದ ಪ್ರತಿಷ್ಠೆ, ಭಾರತೀಯರ ಗೌರವ ಮತ್ತಷ್ಟು ಹೆಚ್ಚಲಿದೆ. ಬ್ರಿಟೀಷರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ನೀಡಿದರು. ಅಧಿಕಾರ ಹಸ್ತಾಂತರಕ್ಕೆ ಸಾಕ್ಷಿಯಾಗಿ ಸೆಂಗೋಲ್​ ನೀಡಿದ್ದರು. ಸೆಂಗೋಲ್​​ ನಾವು ಮಾಡಬೇಕಾದ ಕರ್ತವ್ಯವನ್ನು ನೆನಪಿಸುತ್ತೆ. ಸೆಂಗೋಲ್​ ನಮ್ಮೆಲ್ಲರಿಗೂ ಪ್ರೇರಣೆ ಆಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

  • 28 May 2023 01:08 PM (IST)

    New Parliament inauguration Live: ಭಾರತ ಲೋಕತಂತ್ರದ ಜನಕ

    ನವದೆಹಲಿ: ಭಾರತ ಲೋಕತಂತ್ರದ ಜನಕ. ನಮ್ಮ ವೇದಗಳು ಪ್ರಜಾಪ್ರಭುತ್ವದ ಬಗ್ಗೆ ಹೇಳುತ್ತವೆ. ಮಹಾಭಾರತದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಹೇಳಲಾಗಿದೆ. ಬಸವೇಶ್ವರರ ಅನುಭವ ಮಂಟಪ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿತು.

  • 28 May 2023 01:04 PM (IST)

    New Parliament inauguration Live: ಚೋಳ ಸಾಮ್ರಾಜ್ಯದಲ್ಲಿ ಸೆಂಗೋಲ್​ ಕರ್ತವ್ಯ ಮತ್ತು ಸೇವೆಯ ಪ್ರತಿಕ

    ನವದೆಹಲಿ: ಭಾರತ ಅಭಿವೃದ್ಧಿ ಹೊಂದಿದಂತೆಲ್ಲ, ವಿಶ್ವ ಪ್ರಗತಿ ಮಾರ್ಗದತ್ತ ಸಾಗುತ್ತದೆ. ನೂತನ ಸಂಸತ್​ನಲ್ಲಿ ಪವಿತ್ರ ಸೆಂಗೋಲ್​ ಸ್ಥಾಪನೆಯಾಗಿದೆ. ಚೋಳ ಸಾಮ್ರಾಜ್ಯದಲ್ಲಿ ಸೆಂಗೋಲ್​ ಕರ್ತವ್ಯ ಮತ್ತು ಸೇವೆಯ ಪ್ರತಿಕವಾಗಿದೆ. ತಮೀಳುನಾಡಿನಿಂದ ಬಂದ ಪುರೋಹಿತರ ಮಾರ್ಗದರ್ಶನದಲ್ಲಿ ಸಂಸತ್​​ನಲ್ಲಿ ಸ್ಥಾಪನೆ ಮಾಡಲಾಗಿದೆ. ಸೆಂಗೋಲ್​​ನ ಗತಕಾಲದ ವೈಭವ ಮರುಕಳಿಸಿದೆ.

  • 28 May 2023 01:00 PM (IST)

    New Parliament inauguration Live: ನೂತನ ಸಂಸತ್​ ಭವನ ಪ್ರಜಾಪ್ರಭುತ್ವದ ಮಂದಿರ

    ನವದೆಹಲಿ: ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರ ತ್ಯಾಗ, ಬಲಿದಾನವಾಗಿದೆ. ಭಾರತ ದೇಶದ ಪ್ರಗತಿಗಾಗಿ ಅನೇಕ ಮಹನೀಯರು ಶ್ರಮಿಸಿದ್ದಾರೆ. ಭಾರತದ ವಿಕಾಸ ಯಾತ್ರೆಗೆ ಈ ಸಂಸತ್​ ಭವನ ಸಾಕ್ಷಿಯಾಗಿದೆ. ಸರ್ವ ಧರ್ಮಗಳ ಪ್ರಾರ್ಥನೆಯಿಂದ ಸಂಸತ್​ ಭವನ ನಿರ್ಮಾಣವಾಗಿದೆ. ನೂತನ ಸಂಸತ್​ ಭವನ ಪ್ರಜಾಪ್ರಭುತ್ವದ ಮಂದಿರವಾಗಿದೆ ಎಂದು ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

  • 28 May 2023 12:55 PM (IST)

    New Parliament inauguration Live: ₹ 75 ನಾಣ್ಯ, ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದ ಮೋದಿ,

    ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ 75 ರೂ. ನಾಣ್ಯ, ವಿಶೇಷ ಅಂಚೆ ಚೀಟಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದರು.

  • 28 May 2023 12:49 PM (IST)

    New Parliament inauguration Live: ಹೊಸ ಸಂಸತ್​ ಭವನ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಸಾಕ್ಷಿ

    ನವದೆಹಲಿ: ಹೊಸ ಸಂಸತ್​ ಭವನ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಸಾಕ್ಷಿ. ಭಾರತದ ಪ್ರಜಾಪ್ರಭುತ್ವದ ಪ್ರತೀಕ ಈ ನೂತನ ಸಂಸತ್​ ಭವನ. ಸ್ವತಂತ್ರ್ಯದ ಅಮೃತ್​ ಮಹೋತ್ಸವದಲ್ಲಿ ನೂತನ ಸಂಸತ್​​ ನಿರ್ಮಾಣವಾಗಿದೆ. ಸಾವಿರಾರು ಕಾರ್ಮಿಕರ ಬಲದಿಂದ ಈ ಸಂಸತ್​ ಭವನ ನಿರ್ಮಾಣವಾಗಿದೆ. ಲೋಕಸಭೆಯಲ್ಲಿ ಸದಸ್ಯರ ಚರ್ಚೆಯಿಂದ ಅನೇಕ ಕಾನೂನು ನಿರ್ಮಿಸಲಾಗಿದೆ.  ನೂತನ ಸಂಸತ್​ ಭವನ ಮಹತ್ವದ ವಿಚಾರಗಳ ಬಗ್ಗೆ ಚರ್ಚೆಗೆ ವೇದಿಕೆಯಾಗಿದೆ. ಸಂಸತ್ ಭವನ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವೇದಿಕೆಯಾಗಲಿದೆ ಎಂದು ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಹೇಳಿದ್ದಾರೆ.  

  • 28 May 2023 12:43 PM (IST)

    New Parliament inauguration Live: ಸಂಸತ್​ ಭವನ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾಗಿದೆ

    ನವದೆಹಲಿ: ನೂತನ ಸಂಸತ್​ ಭವನದ ಉದ್ಘಾಟನಾ ದಿನವನ್ನು ಭಾರತದ ಇತಿಹಾಸದಲ್ಲಿ ಸ್ವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಈ ಸಂಸತ್​ ಭವನ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾಗಿದೆ. ಭಾರತದ ಸಂಸ್ಕೃತಿ ಅನಾವರಣ ಆಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಂದೇಶವನ್ನು ರಾಜ್ಯಸಭಾ ಉಪಸಭಾಪತಿ ಹರಿವಂಶ್​​ ಓದಿದರು.

  • 28 May 2023 12:39 PM (IST)

    New Parliament inauguration Live: ನೂತನ ಸಂಸತ್​ ಭವನ ಭಾರತೀಯ ಸಂಸ್ಕೃತಿ ಬಿಂಬಿಸುತ್ತದೆ

    ನವದೆಹಲಿ: ಎರಡನೇ ಹಂತದ ಕಾರ್ಯಕ್ರಮದಲ್ಲಿ ಉಪಸಭಾಪತಿ ಹರಿವಂಶ್ ಅವರು ಉಪ ರಾಷ್ಟ್ರಪತಿ ಜಗದೀಪ್​ ಧನಕರ್​​ ಅವರ ಸಂದೇಶ ಓದಿದರು. ನೂತನ ಸಂಸತ್​ ಭವನ ಕಟ್ಟಡ ವಾಸ್ತು ಪ್ರಕಾರ ನಿರ್ಮಾಣವಾಗಿದೆ. ನೂತನ ಸಂಸತ್​ ಭವನ ಭಾರತೀಯ ಸಂಸ್ಕೃತಿ ಬಿಂಬಿಸುತ್ತದೆ. ಸಂಸತ್​ ಭವನ ವಿವಿಧತೆಯಲ್ಲಿ ಏಕತೆಯ ಸಂದೇಶ ಸಾರಲಿದೆ ಎಂದು ಉಪ ರಾಷ್ಟ್ರಪತಿಯವರು ಹೇಳಿದ್ದಾರೆ.   ​​

  • 28 May 2023 12:19 PM (IST)

    New Parliament inauguration Live: ನೂತನ ಸಂಸತ್​ ಭವನ ನಿರ್ಮಾಣ ಕುರಿತಾದ ಕಿರುಚಿತ್ರ ಪ್ರದರ್ಶನ

    ನವದೆಹಲಿ: ನೂತನ ಸಂಸತ್​ ಭವನ ನಿರ್ಮಾಣ ಮತ್ತು ಸಿಂಗೋಲ್​ ನಿರ್ಮಾಣದ ಕುರಿತಾದ ಕುರಿತಾದ ಕಿರುಚಿತ್ರ ಪ್ರದರ್ಶನವಾಯಿತು.

  • 28 May 2023 12:17 PM (IST)

    New Parliament inauguration Live: ಗಣ್ಯರನ್ನು ಸ್ವಾಗತಿಸಿದ ರಾಜ್ಯಸಭಾ ಉಪಸಭಾಪತಿ ಹರಿವಂಶ

    ನವದೆಹಲಿ: ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರನ್ನು ರಾಜ್ಯಸಭಾ ಉಪಸಭಾಪತಿ ಹರಿವಂಶ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಅವರು ನಮ್ಮ ಅತಿದೊಡ್ಡ ಪ್ರಜಾಪ್ರಭುತ್ವದ ದೇಗುಲವಾದ ನೂತನ ಸಂಸತ್​ ಅನ್ನು ಲೋಕಾರ್ಪಣೆಗೊಂಡಿದ್ದು ಸಂತಸದ ಸಂಗತಿಯಾಗಿದೆ ಎಂದರು. ಪ್ರಧಾನಿ ಮೋದಿಯವರು ಕಡಿಮೆ ಸಮಯದಲ್ಲಿ ಭವಿಷ್ಯದ ದೃಷ್ಟಿಯಿಂದ ಸುಂದರವಾದ ಸಂಸತ್​​ ಅನ್ನು ನಿರ್ಮಿಸಿದ್ದಾರೆ. ಬಹಳ ಸುಂದರವಾದ ಭವನವಾಗಿದೆ. ಈ ಹಿಂದಿನ ಸಂಸತ ಭವನಕ್ಕಿಂತ ದೊಡ್ಡದಾಗಿದೆ. ಡಿಜಿಟಲ್​ ಸೌಲಭ್ಯ ಹೊಂದಿದೆ. ಆಜಾದಿ ಕಾ ಅಮೃತ ಕಾಲದಲ್ಲಿ ಈ ಸಂಸತ್​ ಭವನ ನಿರ್ಮಾಣ ಜಪ್ರತಿನಿಧಿಗಳಿಗೆ ಪ್ರೇರಣಾದಾಯಕವಾಗಿದೆ ಎಂದು ಹೇಳಿದರು.

  • 28 May 2023 12:07 PM (IST)

    New Parliament inauguration Live: ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಆರಂಭ

    ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ಸ್ಪೀಕರ್​ ಓಂ ಬಿರ್ಲಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್​ ಸಿಂಗ್​, ಪ್ರಲ್ಹಾದ್​​ ಜೋಶಿ ಮತ್ತು ಮಾಜಿ ಪ್ರಧಾನಿ ಹೆಚ್​​.ಡಿ.ದೇವೇಗೌಡ, ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್​ ರೆಡ್ಡಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​  ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.

    ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ದೇವೇಗೌಡ ಭಾಗಿ

  • 28 May 2023 11:33 AM (IST)

    Mann Ki Baat Live: ಮನ್​ ಕೀ ಬಾತ್​ ಮುಕ್ತಾಯ

    ನವದೆಹಲಿ: ಬದಲಾಗುತ್ತಿರುವ ಹವಾಮನದಲ್ಲಿ ಜನರು ಆರೋಗ್ಯದ ಬಗ್ಗೆ ಕಾಳಜಿವಹಿಸಿರಿ. ಸುಭೀಕ್ಷವಾಗಿರಿ ಎಂದು ಮನ್​ ಕೀ ಬಾತ್​ ಮುಗಿಸಿದರು.

  • 28 May 2023 11:30 AM (IST)

    Mann Ki Baat Live: ಸಂತ ಕಬೀರದಾಸರನ್ನು ನೆನೆದ ಪ್ರಧಾನಿ ಮೋದಿ

    ನವದೆಹಲಿ: ಸಂತ ಕಬೀರದಾಸರ ಜಯಂತಿ. ಅವರ ಪ್ರತಿಯೊಂದ ದೋಹಗಳು ಜನರ ಜೀವನ ಮಾರ್ಗದರ್ಶನವಾಗಿದೆ. ಅವರು ತಿಳಿಸಿದ ಹಾದಿಯಲ್ಲಿ ನಾವು, ನೀವು ಸಾಗೋಣ ಎಂದರು.

  • 28 May 2023 11:28 AM (IST)

    Mann Ki Baat Live: ವೀರ್​ ಸಾವರ್ಕರ್​ ಸಾಹಸ, ತ್ಯಾಗ ಪ್ರೇರಣಾದಾಯಿ

    ನವದೆಹಲಿ: ಮೇ 28 ಸ್ವಾತಂತ್ರ್ಯ ಸೇನಾನಿ ವೀರ್​ ಸಾವರ್ಕರ್​ ಅವರ ಜನ್ಮದಿನ. ಅವರ ಸಾಹಸ, ತ್ಯಾಗ ಪ್ರೇರಣಾದಾಯಿ. ವೀರ್​ ಸಾವರ್ಕರ್​​ ಅವರ ವ್ಯಕ್ತಿತ್ವ ಪ್ರೇರಣೆಯಾಗುವಂತಿತ್ತು. ಸಾಮಾಜಿಕ ನ್ಯಾಯಕ್ಕಾಗಿ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ.

  • 28 May 2023 11:24 AM (IST)

    Mann Ki Baat Live: ಯುವಕರು ಜಲ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಿ

    ನವದೆಹಲಿ: ದೇಶದ ವಿವಿಧ ಹಳ್ಳಿಗಳಲ್ಲಿ ಯುವಕರು ಜಲ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಮನೆ ಮನೆಗೆ ತೆರಳಿ ನೀರಿನ ಮಹತ್ವದ ಕುರಿತು ತಿಳಿ ಹೇಳುತ್ತಿದ್ದಾರೆ. ಇವರಿಗೆ ನನ್ನ ಅಭಿನಂದನೆಗಳು.

  • 28 May 2023 11:22 AM (IST)

    Mann Ki Baat Live: ಹಳ್ಳಿಗಳಲ್ಲಿ 50 ಸಾವಿರ ಅಮೃತಸರೋವರಗಳ ನಿರ್ಮಾಣ

    ನವದೆಹಲಿ: ದೇಶದ ವಿವಿಧ ಹಳ್ಳಿಗಳಲ್ಲಿ ಅಮೃತ ಸರೋವರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೆ ಹಲವು ಹಳ್ಳಿಗಳಲ್ಲಿ 50 ಸಾವಿರ ಅಮೃತಸರೋವರಗಳನ್ನು ನಿರ್ಮಾಣ ಮಾಡಲಾಗಿದೆ. ಜಲಸಂಪನ್ಮೂಲ ಮೂಲಕ ಅನೇಕ ಸ್ಟಾರ್ಟ್​​ ಅಪ್​​ಗಳಿಗೆ ಉತ್ತೇಜನ ಸಿಕ್ಕಿದೆ. ಇದರಲ್ಲಿ ಒಂದಾದ ಕುಂಬಿ ಕಾಗಜ್​ ಸ್ಟಾರ್ಟ್​ ಬಹಳ ವಿಶೇಷವಾಗಿದೆ.  ​​

     

  • 28 May 2023 11:19 AM (IST)

    Mann Ki Baat Live: ದೇಶದ ವಿವಿಧ ಪ್ರಸಿದ್ಧ ಮ್ಯೂಸಿಯಂಗಳಲ್ಲಿ ಭಾರತದ ಇತಿಹಾಸ ಸಂಗ್ರಹ

    ನವದೆಹಲಿ: ದೇಶದ ವಿವಿಧ ಪ್ರಸಿದ್ಧ ಮ್ಯೂಸಿಯಂಗಳಲ್ಲಿ ಭಾರತದ ಇತಿಹಾಸ ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಸ್ವತಂತ್ರ್ಯ ಹೋರಾಟಗಾರರ 10 ಮ್ಯೂಸಿಯಂ ತೆರೆಯಲಾಗುವುದು. ಭಾರತದ ಪೂರ್ವ ಪ್ರಧಾನ ಮಂತ್ರಿಗಳ ಮ್ಯೂಸಿಯಂ ಸ್ಥಾಪಿಸಲಾಗುವುದು. ದೇಶದ ಪ್ರತಿಯೊಂದು ಮ್ಯೂಸಿಯಂ ಬಗ್ಗೆ ತಿಯುವುದು ಯುವಕರ ಕರ್ತವ್ಯವಾಗಿದೆ. ನಿಮಗೆ ಅವಕಾಶ ಸಿಕ್ಕಾಗಲೆಲ್ಲ ಈ ಮ್ಯೂಸಿಯಂಗಳಿಗೆ ಭೇಟಿ ನೀಡಿ ಎಂದು ಹೇಳಿದರು.

  • 28 May 2023 11:15 AM (IST)

    Mann Ki Baat Live: ಯುವ ಸಂಗಮದ ಮೂಲಕ ದೇಶದ ವಿವಿಧ ಪ್ರದೇಶದ ಪರಿಚಯ

    ನವದೆಹಲಿ: ಯುವ ಸಂಗಮದ ಮೂಲಕ ದೇಶದ ವಿವಿಧ ಪ್ರದೇಶದ ಪರಿಚಯವಾಗಿದೆ. ಈ ಯುವ ಸಂಗಮದಲ್ಲಿ ಭಾಗಿಯಾದ ಯುವಕರಲ್ಲಿ ಸದಾ ನೆನಪುಳಿಯುವ ಸಮಾರಂಭವಾಗಿದೆ.

  • 28 May 2023 11:10 AM (IST)

    Mann Ki Baat Live: ಯುವ ಸಂಗಮದಲ್ಲಿ ಭಾಗಿಯಾಗಿದ್ದ ಯುವಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ

    ನವದೆಹಲಿ: ಯುವ ಸಂಗಮದ ಸುಸಂದರ್ಭದಲ್ಲಿ ಭಾಗಿಯಾಗಿದ್ದ ಅರುಣಾಚಲ ಪ್ರದೇಶ ಓರ್ವ ಯುವಕ ಮತ್ತು ಬಿಹಾರದ ಓರ್ವ ಯುವತಿಯೊಂದಿಗೆ ಪ್ರಧಾನಿ ಮೋದಿಯವರು ಸಂವಾದ ನಡೆಸಿದರು. ಈ ವೇಳೆ ಈ ಯವಕರಿಗೆ ತಮ್ಮ ಅನುಭವವನ್ನು ಬ್ಲಾಗ್​ ಮೂಲಕ ಹಂಚಿಕೊಳ್ಳಿ. ಇದು ಇನ್ನು ಸಾಕಷ್ಟು ಯುವಕರಿಗೆ ಪ್ರೇರಣೆ ನೀಡುತ್ತದೆ ಎಂದರು. ಸಂವಾದ ನಡೆಸಿದರು.

  • 28 May 2023 11:04 AM (IST)

    Mann Ki Baat Live: ಈ ಬಾರಿಯ ಮನ್​​ ಕೀ ಬಾತ್​ ಸೆಕೆಂಡ್​ ಸೆಂಚುರಿಯ ಪ್ರಾರಂಭ

    ನವದೆಹಲಿ: ಈ ಬಾರಿಯ ಮನ್​​ ಕೀ ಬಾತ್​ ಸೆಕೆಂಡ್​ ಸೆಂಚುರಿಯ ಪ್ರಾರಂಭವಾಗಿದೆ. ಕಳೆದ ತಿಂಗಳು ನಾವು ವಿಶೇಷ ಸೆಂಚೂರಿಯನ್ನು ಆಚರಿಸಿದೇವು. ವಿವಿಧ ದೇಶಗಳ ಜನರು ಮನ್​​ ಕೀ ಬಾತ್​​​​ ಅನ್ನು ಕೇಳಿದ್ದಾರೆ.

  • 28 May 2023 11:03 AM (IST)

    Mann Ki Baat Live: 101ನೇ ಮನ್​ ಕೀ ಬಾತ್​ ಆರಂಭ

    ನವದೆಹಲಿ: 101ನೇ ಮನ್​ ಕೀ ಬಾತ್​​ ಆರಂಭವಾಗಿದೆ.

  • 28 May 2023 10:11 AM (IST)

    New Parliament inauguration Live: ಮಧ್ಯಾಹ್ನ 12 ಗಂಟೆ ನಂತರ ಎರಡನೇ ಹಂತದ ಕಾರ್ಯಕ್ರಮ ಆರಂಭ

    ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಆರಂಭವಾಗಿದ್ದು ಬೆಳಗಿನ ಜಾವ ಪೂಜಾ ಕೈಂಕರ್ಯಗಳು ಮತ್ತು ಸೆಂಗೋಲ್​​ ಪ್ರತಿಷ್ಠಾಪನೆ ನೆರವೇರಿತು. ಮಧ್ಯಾಹ್ನ 12 ಗಂಟೆ ನಂತರ ಎರಡನೇ ಹಂತದ ಕಾರ್ಯಕ್ರಮ ಆರಂಭವಾಗಲಿದೆ. ಎರಡನೇ ಹಂತದ ಕಾರ್ಯಕ್ರಮದಲ್ಲಿ ದೇಶದ ಹಲವು, ವಿವಿಧ ಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ. ಎರಡನೇ ಹಂತದ ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಅಧಿಕೃತ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಎರಡು ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

    ಇದಾದ ಬಳಿಕ ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿಗಳ ಸಂದೇಶವನ್ನು ರಾಜ್ಯಸಭೆಯ ಉಪಾಧ್ಯಕ್ಷರು ಓದಲಿದ್ದಾರೆ. ನಂತರ ಲೋಕಸಭೆ ಸ್ಪೀಕರ್ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ 75ರೂ ಮುಖಬೆಲೆಯ ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆ ಮಾಡಲಾಗುತ್ತದೆ. ಕೊನೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮವು ಮಧ್ಯಾಹ್ನ 2:30 ರ ಸುಮಾರಿಗೆ ಸಂಪನ್ನವಾಗುತ್ತದೆ.

  • 28 May 2023 09:20 AM (IST)

    New Parliament inauguration Live: ನೂತನ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ

    ನವದೆಹಲಿ: ನೂತನ ಸಂಸತ್​ ಭವನವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರು.

  • 28 May 2023 08:28 AM (IST)

    New Parliament inauguration Live: ನೂತನ ಸಂಸತ್ ಭವನ ವಿಶೇಷತೆ

    ನವದೆಹಲಿ: ನೂತನ ಸಂಸತ್ ಭವನ  ಹಲವು ವಿಶೇಷತೆಗಳನ್ನು ಒಳಗೊಂಡಿದೆ. ತ್ರಿಕೋನ ಆಕಾರದ 4 ಅಂತಸ್ತಿನ ಕಟ್ಟಡದ ವಿಸ್ತೀರ್ಣ 64,500 ಚದರ ಮೀಟರ್ ಇದ್ದು, ಕಟ್ಟಡದಲ್ಲಿ 1,280 ಸಂಸದರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಜ್ಞಾನದ್ವಾರ, ಶಕ್ತಿದ್ವಾರ, ಕರ್ಮದ್ವಾರ ಎಂಬ 3 ಪ್ರಮುಖ ದ್ವಾರಗಳನ್ನು ನಿರ್ಮಾಣ ಮಾಡಲಾಗಿದೆ. ಸಂಸದರು, ವಿಐಪಿ ಸಂದರ್ಶಕರು, ಅಧಿಕಾರಿಗಳಿಗಾಗಿ ಪ್ರತ್ಯೇಕ ದ್ವಾರ ನಿರ್ಮಿಸಲಾಗಿದೆ.

  • 28 May 2023 08:13 AM (IST)

    New Parliament inauguration Live: ನೂತನ ಸಂಸತ್​​ ಭವನದಲ್ಲಿ ವಿವಿಧ ಧರ್ಮದ ಮುಖಂಡರಿಂದ ಪ್ರಾರ್ಥನೆ ಆರಂಭ

    ನವದೆಹಲಿ: ನೂತನ ಸಂಸತ್​​ ಭವನದಲ್ಲಿ ವಿವಿಧ ಧರ್ಮದ ಮುಖಂಡರಿಂದ ಪ್ರಾರ್ಥನೆ ಆರಂಭವಾಗಿದ್ದು, ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್​ ಓಂ ಬಿರ್ಲಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್​ ಸಿಂಗ್​, ಪ್ರಲ್ಹಾದ್​​ ಜೋಶಿ, ಎಸ್​​. ಜೈಶಂಕರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವರು  ಭಾಗಿಯಾಗಿದ್ದಾರೆ. ಹಾಗೇ ಪ್ರಾರ್ಥನಾ ಸಭೆಯಲ್ಲಿ ಪಂಡಿತರು, ಸಾಧು ಸಂತರು ಪಾಲ್ಗೊಂಡಿದ್ದಾರೆ.

  • 28 May 2023 08:07 AM (IST)

    New Parliament inauguration Live: ಸಂಸತ್​ ಭವನ ನಿರ್ಮಿಸಿದ ಕಾರ್ಮಿಕರಿಗೆ ಮೋದಿ ಸನ್ಮಾನ

    ನವದೆಹಲಿ:ದೆಹಲಿಯಲ್ಲಿ ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿದ್ದು, ಸಂಸತ್​ ಭವನದ ಕಟ್ಟಡ ನಿರ್ಮಿಸಿದ ಕಾರ್ಮಿಕರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸನ್ಮಾನ ಮಾಡಿದ್ದಾರೆ.

  • 28 May 2023 07:55 AM (IST)

    New Parliament inauguration Live: ಸ್ಪೀಕರ್​ ಆಸನದ ಬಳಿ ಸೆಂಗೋಲ್​ ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ

    ನವದೆಹಲಿ: ದೆಹಲಿಯಲ್ಲಿ ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿದ್ದು, ಪುರೋಹಿತರಿಂದ ಸೆಂಗೋಲ್​​ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಸ್ಪೀಕರ್​ ಆಸನದ ಬಳಿ ಸೆಂಗೋಲ್​ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ಸಾಥ್​​​ ನೀಡಿದ್ದಾರೆ.

  • 28 May 2023 07:49 AM (IST)

    New Parliament inauguration Live: ಪುರೋಹಿತರಿಂದ ಸೆಂಗೋಲ್​​ ಸ್ವೀಕರಿಸಿದ ಪ್ರಧಾನಿ ಮೋದಿ

    ನವದೆಹಲಿ: ದೆಹಲಿಯಲ್ಲಿ ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ತಮಿಳುನಾಡಿನ ಪುರೋಹಿತರು ಐತಿಹಾಸಿಕ ಸೆಂಗೋಲ್​ ಅನ್ನು​ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದರು.

  • 28 May 2023 07:45 AM (IST)

    New Parliament inauguration Live: ಪೂಜಾ-ಕೈಂಕರ್ಯಗಳನ್ನು ನೆರವೇರಿಸಿದ ಶೃಂಗೇರಿಯ ಪುರೋಹಿತರು

    ನವದೆಹಲಿ: ದೆಹಲಿಯಲ್ಲಿ ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ  ಹೋಮ, ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿದ್ದು, ವಿಶೇಷ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್​ ​ ಓಂ ಬಿರ್ಲಾ ಭಾಗಿಯಾಗಿದ್ದಾರೆ. ಪೂಜಾ-ಕೈಂಕರ್ಯಗಳನ್ನು ಕರ್ನಾಟಕದ ಶೃಂಗೇರಿಯ ಪುರೋಹಿತರಾದ ಸೀತಾರಾಮ ಶರ್ಮಾ, ಶ್ರೀರಾಮ ಶರ್ಮಾ, ಲಕ್ಷ್ಮೀಶ ತಂತ್ರಿರಿಂದ ನೆರವೇರಿಸಿದರು.

  • 28 May 2023 07:39 AM (IST)

    New Parliament inauguration Live: ಗಣಪತಿ ಪೂಜೆ ಮೂಲಕ ಹವನ ಆರಂಭ

    ನವದೆಹಲಿ: ದೆಹಲಿಯಲ್ಲಿ ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಆರಂಭವಾಗಿದ್ದು, ಸಂಸತ್​ ಭವನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾಪತಿ ಓಂ ಬಿರ್ಲಾ ಆಗಮಿಸಿದ್ದಾರೆ. ಈ ವೇಳೆ ನೂತನ ಸಂಸತ್​ ಭವನ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿದರು. ಇದೀಗ ಗಣಪತಿ ಪೂಜೆ ಮೂಲಕ ಹವನ ಆರಂಭವಾಗಿವೆ.

  • 28 May 2023 07:29 AM (IST)

    New Parliament inauguration Live: 2020ರಲ್ಲಿ ಅಡಿಗಲ್ಲು ಹಾಕಿದ್ದ ಪ್ರಧಾನಿ ಮೋದಿ

    ಸೆಂಟ್ರಲ್ ವಿಸ್ತಾ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು. ಸ್ವತಂತ್ರ ಭಾರತಕ್ಕೆ ಹೊಸ ಸಂಸತ್ ಭವನ ಬೇಕು ಅಂತಾ ಪಣ ತೊಟ್ಟಿದ್ದ ಮೋದಿ 2020ರಲ್ಲಿ ನೂತನ ಸಂಸತ್ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ರು. ಇಂದಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಿ ಸ್ವೀಕರಿಸಿ 9 ವರ್ಷ ವಾಗ್ತಿದ್ದು, ಅದೇ ದಿನ ನೂತನ ಸಂಸತ್​ ಭವನವನ್ನ ಲೋಕಾಪರ್ಣೆಗೊಳಿಸಲಿದ್ದಾರೆ.

  • 28 May 2023 07:17 AM (IST)

    New Parliament inauguration Live: ಇಂದು ಪ್ರಧಾನಿ ಮೋದಿಯಿಂದ ನೂತನ ಸಂಸತ್​ ಉದ್ಘಾಟನೆ

    ನವದೆಹಲಿ: ಇಂದು(ಮೇ.28) ನೂತನ ಸಂಸತ್ ಭವನ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಸಮಾರಂಭವು ಹವನ ಮತ್ತು ಪೂಜೆಯೊಂದಿಗೆ ಆರಂಭವಾಗಲಿದೆ.

Published On - 7:16 am, Sun, 28 May 23

Follow us on