‘ಜಮ್ಮು-ಕಾಶ್ಮೀರದಲ್ಲಿ ಹೊಸ ಯುಗ ಶುರುವಾಗಿದ್ದು ಅಮಿತ್​ ಶಾರಿಂದ’-ಪ್ರಧಾನಿ ಮೋದಿಯೆದುರು ಗೃಹ ಸಚಿವರನ್ನು ಹೊಗಳಿದ ಅರುಣ್​ ಮಿಶ್ರಾ ​

| Updated By: Lakshmi Hegde

Updated on: Oct 12, 2021 | 3:55 PM

ಗೃಹ ಸಚಿವ ಅಮಿತ್​ ಶಾರನ್ನು ಹೊಗಳಿದ ಅರುಣ್​ ಮಿಶ್ರಾರನ್ನು ವಕೀಲ ಪ್ರಶಾಂತ್ ಭೂಷಣ್​ ಟೀಕಿಸಿದ್ದಾರೆ. ಇದು ನಾಚಿಕಗೇಡಿನ ವರ್ತನೆ ಎಂದು ಟ್ವೀಟ್ ಮಾಡಿದ್ದಾರೆ.

‘ಜಮ್ಮು-ಕಾಶ್ಮೀರದಲ್ಲಿ ಹೊಸ ಯುಗ ಶುರುವಾಗಿದ್ದು ಅಮಿತ್​ ಶಾರಿಂದ’-ಪ್ರಧಾನಿ ಮೋದಿಯೆದುರು ಗೃಹ ಸಚಿವರನ್ನು ಹೊಗಳಿದ ಅರುಣ್​ ಮಿಶ್ರಾ ​
ಅರುಣ್​ ಮಿಶ್ರಾ
Follow us on

ಭಾರತ ಒಂದು ಪ್ರಬಲ ಪ್ರಜಾಪ್ರಭುತ್ವ ಶಕ್ತಿಯುಳ್ಳ ರಾಷ್ಟ್ರವಾಗಿದೆ. ಇದಕ್ಕೆ ಕಾರಣ ಇಲ್ಲಿನ ನಾಯಕತ್ವ ಮತ್ತು ನಾಗರಿಕರು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಈಗೀಗ ಕೆಲವು ಅಂತಾರಾಷ್ಟ್ರೀಯ ಶಕ್ತಿಗಳ ಪ್ರಭಾವಕ್ಕೆ ಒಳಗಾದವರು ನಮ್ಮ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪ ಮಾಡು ಹೊಸ ಪ್ರವೃತ್ತಿ ಶುರುವಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಅರುಣ್​ ಮಿಶ್ರಾ (Arun Mishra) ಹೇಳಿದರು. ಇಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ 28ನೇ ಸಂಸ್ಥಾಪನಾ ದಿನದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾ ಕೂಡ ಪಾಲ್ಗೊಂಡಿದ್ದರು.  

ಭಾರತದಲ್ಲಿ ಅದ್ಭುತವಾದ ಧಾರ್ಮಿಕ ಸ್ವಾತಂತ್ರ್ಯವಿದೆ. ನಮ್ಮ ದೇಶದ ನಾಗರಿಕರು ದೇವಸ್ಥಾನ, ಚರ್ಚ್​, ಮಸೀದಿಗಳನ್ನು ಯಾವುದೇ ಭಯವಿಲ್ಲದೆ ಕಟ್ಟಬಹುದು. ಆದರೆ ಅದೆಷ್ಟೋ ರಾಷ್ಟ್ರಗಳಲ್ಲಿ ಇಷ್ಟರಮಟ್ಟಿಗಿನ ಧಾರ್ಮಿಕ ಸ್ವಾತಂತ್ರ್ಯ ಖಂಡಿತ ಇಲ್ಲ ಎಂದು ಹೇಳಿದ ಅರುಣ್​ ಮಿಶ್ರಾ, ಯಾರೇ ಆಗಲಿ ಭಯೋತ್ಪಾದಕರನ್ನು, ಉಗ್ರವಾದವನ್ನು ವೈಭವೀಕರಿಸಬಾರದು. ಎಂದು ಹೇಳಿದರು. ಹಾಗೇ, ಜಮ್ಮು-ಕಾಶ್ಮೀರದ ಪ್ರಸ್ತಾಪ ಮಾಡಿದ ಅವರು ಗೃಹ ಸಚಿವ ಅಮಿತ್​ ಶಾರನ್ನು ತುಂಬ ಹೊಗಳಿದರು. ಇವತ್ತು ಜಮ್ಮು-ಕಾಶ್ಮೀರದಲ್ಲಿ ಒಂದು ಹೊಸ ಯುಗ ಪ್ರಾರಂಭವಾಗಿದೆ ಅಂದರೆ ಅದಕ್ಕೆ ಕಾರಣ ಅಮಿತ್​ ಶಾ. ಅವರನ್ನು ಇಂದಿನ ಕಾರ್ಯಕ್ರಮಕ್ಕೆ ಸ್ವಾಗತಿಸಲು ತುಂಬ ಸಂತೋಷವಾಗುತ್ತದೆ.  ಅಮಿತ್​ ಶಾ ಅವರ ಸತತ ಪ್ರಯತ್ನದಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಇಂದು ಶಾಂತಿ ಸ್ಥಾಪನೆಯಾಗುತ್ತಿದೆ. ಕಾನೂನು-ಸುವ್ಯವಸ್ಥೆ ಸದೃಢಗೊಂಡಿದೆ ಎಂದು ಹೇಳಿದರು.

ಪ್ರಶಾಂತ್ ಭೂಷಣ್​ ಟೀಕೆ
ಗೃಹ ಸಚಿವ ಅಮಿತ್​ ಶಾರನ್ನು ಹೊಗಳಿದ ಅರುಣ್​ ಮಿಶ್ರಾರನ್ನು ವಕೀಲ ಪ್ರಶಾಂತ್ ಭೂಷಣ್​ ಟೀಕಿಸಿದ್ದಾರೆ. ಅರುಣ್​ ಮಿಶ್ರಾ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಯಾಗಿದ್ದುಕೊಂಡೇ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಹೊಗಳಿದ್ದರು. ಆಗಲೇ ಅವರು ತಮ್ಮ ಗೌರವ ಕಳೆದುಕೊಂಡಿದ್ದರು. ಈಗ ಮಾನವಹಕ್ಕುಗಳ ರಾಷ್ಟ್ರೀಯ ಆಯೋಗದ ಮುಖ್ಯಸ್ಥರಾಗಿದ್ದರುಕೊಂಡು ಅಮಿತ್​ ಶಾರನ್ನು ಹೊಗಳುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ವರ್ತನೆ. ಇಂಥವರು ಮಾನವ ಹಕ್ಕುಗಳ ರಕ್ಷಣೆ ಮಾಡುತ್ತಾರೆ ಎಂದು ಹೇಗೆ ನಂಬಿಕೊಳ್ಳೋಣ? ಎಂದು ಪ್ರಶಾಂತ್ ಭೂಷಣ್​ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಶಂಕಿತ ಮಾವೋವಾದಿ ಶಿಬಿರಗಳ ಮೇಲೆ ಎನ್ಐಎ ದಾಳಿ

ಒಂದು ಸಿಮ್​ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು?: ಈ ವಿಚಾರ ನಿಮಗೆ ತಿಳಿದಿರಲಿ