ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆ ಮುಂದೆ ಪ್ರತಿಭಟನೆ ವೇಳೆ ಬಿಜೆಪಿ ಸಂಸದ ಮನೋಜ್ ತಿವಾರಿಗೆ ಗಾಯ

TV9 Digital Desk

| Edited By: Sushma Chakre

Updated on:Oct 12, 2021 | 4:34 PM

Manoj Tiwari: ಮಾರ್ಕೆಟ್​ಗಳು, ಮಾಲ್​ಗಳು, ಅಂಗಡಿ, ಥಿಯೇಟರ್​ಗಳನ್ನೆಲ್ಲ ತೆರೆಯಲು ಅನುಮತಿ ನೀಡಿ ಛಾತ್ ಪೂಜೆಗೆ ನಿಷೇಧ ಹೇರಿರುವುದಕ್ಕೆ ಬಿಜೆಪಿ ಆಕ್ಷೇಪಿಸಿದ್ದರು. ಬಿಜೆಪಿ ನಾಯಕರು ಇಂದು ಸಿಎಂ ಅರವಿಂದ್ ಕೇಜ್ರಿವಾಲ್ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಬಿಜೆಪಿ ಸಂಸದ ಮನೋಜ್ ತಿವಾರಿ ಅವರಿಗೆ ಗಾಯವಾಗಿದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆ ಮುಂದೆ ಪ್ರತಿಭಟನೆ ವೇಳೆ ಬಿಜೆಪಿ ಸಂಸದ ಮನೋಜ್ ತಿವಾರಿಗೆ ಗಾಯ
ಗಾಯಗೊಂಡ ಬಿಜೆಪಿ ಸಂಸದ ಮನೋಜ್ ತಿವಾರಿ
Follow us

ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಛಾತ್ ಪೂಜೆಯನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆ ಮುಂದೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಮಾರ್ಕೆಟ್​ಗಳು, ಮಾಲ್​ಗಳು, ಅಂಗಡಿ, ಥಿಯೇಟರ್​ಗಳನ್ನೆಲ್ಲ ತೆರೆಯಲು ಅನುಮತಿ ನೀಡಿ ಛಾತ್ ಪೂಜೆಗೆ ನಿಷೇಧ ಹೇರಿರುವುದಕ್ಕೆ ಬಿಜೆಪಿ ಆಕ್ಷೇಪಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಇಂದು ಸಿಎಂ ಅರವಿಂದ್ ಕೇಜ್ರಿವಾಲ್ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಬಿಜೆಪಿ ಸಂಸದ ಮನೋಜ್ ತಿವಾರಿ ಅವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ದೆಹಲಿ ಸಿಎಂ ಮನೆ ಮುಂದೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾಗ ಅವರನ್ನು ನಿಯಂತ್ರಿಸಲು ಪೊಲೀಸರು ಅಶ್ರು ವಾಯು ಪ್ರಯೋಗಿಸಿದ್ದರು. ಈ ವೇಳೆ ಬಿಜೆಪಿ ಸಂಸದ ಮನೋಜ್ ತಿವಾರಿಗೆ ಗಾಯಗಳಾಗಿವೆ. ಅವರನ್ನು ಸಫ್ದರ್​ಜಂಗ್ ಆಸ್ಪತ್ರೆಗೆ ಸೇರಿಸಲಾಗಿದೆ. ಮನೋಜ್ ತಿವಾರಿ ಅವರನ್ನು ರಕ್ಷಿಸಲು ಬಿಜೆಪಿ ಕಾರ್ಯಕರ್ತರು ಪ್ರಯತ್ನಿಸಿದ್ದಾರೆ. ಆದರೂ ಅವರಿಗೆ ಗಾಯವಾಗಿದೆ.

ಮನೋಜ್ ತಿವಾರಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆ ಬಳಿ ಹೋಗುವಾಗ ಮಾಡಿದ್ದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ಹಿಂದೆ ಟ್ವಿಟ್ಟರ್​ನಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮನೋಜ್ ತಿವಾರಿ, ‘ದೆಹಲಿಯಲ್ಲಿ 1.8 ಕೋಟಿ ಜನರು ಕೊರೊನಾ ಲಸಿಕೆ ಪಡೆದಿದ್ದಾರೆ, ಮಾರ್ಕೆಟ್​ನಿಂದ ಮೆಟ್ರೋವರೆಗೂ ಎಲ್ಲವನ್ನೂ ಓಪನ್ ಮಾಡಲಾಗಿದೆ. ಬಾರ್, ಥಿಯೇಟರ್, ಬಸ್​ ಎಲ್ಲವೂ ಮಾಮೂಲಿನಂತೆ ಕಾರ್ಯ ನಿರ್ವಹಿಸುತ್ತಿವೆ. ಆದರೂ ಏಕೆ ಛಾತ್ ಪೂಜೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸಲು ಅನುಮತಿ ನೀಡುತ್ತಿಲ್ಲ? ಇದಕ್ಕೆ ಮಾತ್ರ ಕೊರೊನಾ ನೆಪ ನೀಡುವುದು ಸರಿಯೇ?’ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: ದೆಹಲಿಯಲ್ಲಿ ಪಾಕಿಸ್ತಾನದ ಉಗ್ರನ ಬಂಧನ; ಗನ್, ಮದ್ದುಗುಂಡುಗಳ ವಶ

ದೆಹಲಿ ಪೊಲೀಸ್​ ಆಯುಕ್ತ ಸ್ಥಾನಕ್ಕೆ ರಾಕೇಶ್ ಅಸ್ತನಾ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ; ಪಿಐಎಲ್​ಗೆ ಅವಕಾಶವಿಲ್ಲವೆಂದ ದೆಹಲಿ ಹೈಕೋರ್ಟ್​

ತಾಜಾ ಸುದ್ದಿ

Related Stories

Click on your DTH Provider to Add TV9 Kannada