ದೆಹಲಿಯಲ್ಲಿ ಪಾಕಿಸ್ತಾನದ ಉಗ್ರನ ಬಂಧನ; ಗನ್, ಮದ್ದುಗುಂಡುಗಳ ವಶ

Pakistan Terrorist Arrest: ಭಯೋತ್ಪಾದಕನಿಂದ ಎಕೆ -47 ಗನ್ ಮತ್ತು ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಡುರಾತ್ರಿ ದೆಹಲಿಯಲ್ಲಿ ಆ ಉಗ್ರ ನಡೆಸಬೇಕಿದ್ದ ದಾಳಿ ಇದರಿಂದ ತಪ್ಪಿದಂತಾಗಿದೆ.

ದೆಹಲಿಯಲ್ಲಿ ಪಾಕಿಸ್ತಾನದ ಉಗ್ರನ ಬಂಧನ; ಗನ್, ಮದ್ದುಗುಂಡುಗಳ ವಶ
ಬಂಧಿತನಾಗಿರುವ ಪಾಕಿಸ್ತಾನದ ಉಗ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 12, 2021 | 3:35 PM

ದೆಹಲಿ: ದೆಹಲಿಯ ಲಕ್ಷ್ಮೀನಗರದಲ್ಲಿ ಪಾಕಿಸ್ತಾನ ಮೂಲದ ಉಗ್ರನನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಪಾಕಿಸ್ತಾನದ ಪಂಜಾಬ್ ನಿವಾಸಿಯಾದ ಮೊಹಮ್ಮದ್ ಆಶ್ರಫ್ ಎಂಬ ಉಗ್ರ ನಕಲಿ ಐಡಿ ಕಾರ್ಡ್​ ಇಟ್ಟುಕೊಂಡು ದೆಹಲಿಯ ತುಂಬ ಓಡಾಡುತ್ತಿದ್ದ. ಆತನನ್ನು ವಶಕ್ಕೆ ಪಡೆದಿರುವ ದೆಹಲಿ ಪೊಲೀಸ್ ವಿಶೇಷ ತಂಡ ಆತನನ್ನು ವಿಚಾರಣೆಗೆ ಒಳಪಡಿಸಿದೆ. ಹಾಗೇ, ಆ ಭಯೋತ್ಪಾದಕನಿಂದ ಎಕೆ -47 ಗನ್ ಮತ್ತು ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ನಡುರಾತ್ರಿ ದೆಹಲಿಯಲ್ಲಿ ಆ ಉಗ್ರ ನಡೆಸಬೇಕಿದ್ದ ದಾಳಿ ಇದರಿಂದ ತಪ್ಪಿದಂತಾಗಿದೆ.

ಬಂಧಿತ ಪಾಕಿಸ್ತಾನದ ಭಯೋತ್ಪಾದಕನ ಹೆಸರು ಮೊಹಮ್ಮದ್ ಅಶ್ರಫ್ ಅಲಿಯಾಸ್ ಅಲಿ. ಭಯೋತ್ಪಾದಕ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿ. ಮೊಹಮ್ಮದ್ ಅಶ್ರಫ್ ದೆಹಲಿಯ ಶಾಸ್ತ್ರಿ ನಗರದಲ್ಲಿ ಅಲಿ ಅಹ್ಮದ್ ನೂರಿ ಎಂಬ ಹೆಸರಿನಲ್ಲಿ ವಾಸಿಸುತ್ತಿದ್ದ. ಈತನನ್ನು ಲಕ್ಷ್ಮಿ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ನಕಲಿ ದಾಖಲೆಗಳ ಸಹಾಯದಿಂದ ಭಾರತದ ಗುರುತಿನ ಚೀಟಿಯನ್ನೂ ಪಡೆದುಕೊಂಡಿದ್ದ.

ಈತನ ಬಂಧನದ ಬಳಿಕ ದೆಹಲಿ ಪೊಲೀಸರು ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚು ಅಲರ್ಟ್​ ಆಗಿದ್ದು, ದೆಹಲಿಯ ಮಾರುಕಟ್ಟೆಗಳು ಮತ್ತು ಮಾಲ್‌ಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ಅವರು ಭಯೋತ್ಪಾದನಾ ವಿರೋಧಿ ಕ್ರಮಗಳಿಗೆ ಒತ್ತು ನೀಡುವುದು, ಎಲ್ಲ ಕಡೆ ಪೊಲೀಸ್ ಗಸ್ತು ಹೆಚ್ಚಿಸುವುದು ಮತ್ತು ರಾಷ್ಟ್ರ ರಾಜಧಾನಿಯಾದ್ಯಂತ ರಾತ್ರಿ ಗಸ್ತು ತೀವ್ರಗೊಳಿಸುವಂತೆ ಡಿಸಿಪಿಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಇನ್ನು, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ಮುಂದುವರೆದಿದ್ದು, ಶೋಪಿಯಾನ್ ನಲ್ಲಿ ಇಂದು ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಮತ್ತೆ ಎನ್​ಕೌಂಟರ್ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆ ಸಿಬ್ಬಂದಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ನ ಫಿರಿಪೋರಾ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಆ ಪ್ರದೇಶವನ್ನು ಸುತ್ತುವರೆದಿದ್ದಾರೆ. ನಿನ್ನೆ ತಡರಾತ್ರಿ ಇದೇ ಶೋಪಿಯಾನ್ ಜಿಲ್ಲೆಯ ಇಮಾಮ್ಸಾಹಿಬ್ ಪ್ರದೇಶದಲ್ಲಿ ಮತ್ತೊಂದು ಗುಂಡಿನ ಚಕಮಕಿ ನಡೆದಿತ್ತು, ಇದರಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಇಂದು ಕಳೆದ 36 ಗಂಟೆಗಳಲ್ಲಿ 5ನೇ ಎನ್​ಕೌಂಟರ್ ಕಾರ್ಯಾಚರಣೆ ನಡೆಸಲಾಗಿದೆ.

ಇದನ್ನೂ ಓದಿ: Terrorist Encounter: ಜಮ್ಮು ಕಾಶ್ಮೀರದಲ್ಲಿ ಪೊಲೀಸರಿಂದ ಎಲ್​ಇಟಿ ಉಗ್ರನ ಎನ್​ಕೌಂಟರ್

ಕಾಶ್ಮೀರದಲ್ಲಿ ಮುಂಜಾನೆ ನಡೆದ ಎನ್​ಕೌಂಟರ್​​; ಇಬ್ಬರು ಉಗ್ರರ ಹತ್ಯೆ, ಮೂವರು ಯೋಧರಿಗೆ ಗಾಯ

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ