Domestic flights ಅಕ್ಟೋಬರ್ 18ರಿಂದ ದೇಶೀಯ ವಿಮಾನಗಳಲ್ಲಿ ಶೇ 100 ಸಾಮರ್ಥ್ಯಕ್ಕೆ ಅನುಮತಿ

Ministry of Civil Aviation ಅಕ್ಟೋಬರ್ 18 ರಿಂದ ವಿಮಾನಯಾನದಲ್ಲಿ ದೇಶೀಯ ಕಾರ್ಯಾಚರಣೆಗಳನ್ನು ಮರುಸ್ಥಾಪಿಸುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಮಂಗಳವಾರ ಘೋಷಿಸಿತು ಮತ್ತು ದೇಶೀಯ ವಿಮಾನಗಳ ಶೇ 100 ಸಾಮರ್ಥ್ಯಕ್ಕೆ ಅನುಮತಿ ನೀಡುವ ಸುತ್ತೋಲೆಯನ್ನು ಹೊರಡಿಸಿತು.

Domestic flights ಅಕ್ಟೋಬರ್ 18ರಿಂದ ದೇಶೀಯ ವಿಮಾನಗಳಲ್ಲಿ ಶೇ 100 ಸಾಮರ್ಥ್ಯಕ್ಕೆ ಅನುಮತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 12, 2021 | 4:36 PM

ದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಯಾವುದೇ ಸಾಮರ್ಥ್ಯದ ನಿರ್ಬಂಧವಿಲ್ಲದೆ, ಅಕ್ಟೋಬರ್ 18 ರಿಂದ ನಿಗದಿತ ದೇಶೀಯ ವಿಮಾನಯಾನ ಕಾರ್ಯಾಚರಣೆಗಳನ್ನು ಪುನಃಸ್ಥಾಪಿಸಲು ಅನುಮತಿ ನೀಡಿದೆ. ಅಕ್ಟೋಬರ್ 18 ರಿಂದ ವಿಮಾನಯಾನದಲ್ಲಿ ದೇಶೀಯ ಕಾರ್ಯಾಚರಣೆಗಳನ್ನು ಮರುಸ್ಥಾಪಿಸುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಮಂಗಳವಾರ ಘೋಷಿಸಿತು ಮತ್ತು ದೇಶೀಯ ವಿಮಾನಗಳ ಶೇ 100 ಸಾಮರ್ಥ್ಯಕ್ಕೆ ಅನುಮತಿ ನೀಡುವ ಸುತ್ತೋಲೆಯನ್ನು ಹೊರಡಿಸಿತು.ಪ್ರಸ್ತುತ, ದೇಶೀಯ ವಿಮಾನಗಳ ಸಾಮರ್ಥ್ಯವು ಶೇಕಡಾ 85 ಕ್ಕೆ ಮಿತಿಗೊಂಡಿದೆ.

ನಾಗರಿಕ ವಿಮಾನಯಾನ ಸಚಿವಾಲಯದ ಆದೇಶದ ಪ್ರಕಾರ, ಆಗಸ್ಟ್ 12 ರಿಂದ ವಿಮಾನಯಾನ ಸಂಸ್ಥೆಗಳು 72.5 ಶೇಕಡಾ ಪೂರ್ವ ಕೊವಿಡ್ ದೇಶೀಯ ವಿಮಾನಗಳನ್ನು ನಿರ್ವಹಿಸುತ್ತಿವೆ. ಜುಲೈ 5 ಮತ್ತು ಆಗಸ್ಟ್ 12 ರ ನಡುವೆ ಸಾಮರ್ಥ್ಯ ಶೇ. 65 ರಷ್ಟಿತ್ತು. ಜೂನ್ 1 ಮತ್ತು ಜುಲೈ 5 ರ ನಡುವೆ ಸಾಮರ್ಥ್ಯ 50 ಶೇಕಡಾದಲ್ಲಿತ್ತು.

ಎರಡು ತಿಂಗಳ ವಿರಾಮದ ನಂತರ,ಮೇ 25, 2020 ರಂದು ಸರ್ಕಾರವು ನಿಗದಿತ ದೇಶೀಯ ವಿಮಾನಯಾನವನ್ನು ಪುನರಾರಂಭಿಸಿದಾಗ, ಸಚಿವಾಲಯವು ವಾಹಕಗಳಿಗೆ ಕೊವಿಡ್ ಪೂರ್ವದ ದೇಶೀಯ ಸೇವೆಗಳ ಶೇಕಡಾ 33 ಕ್ಕಿಂತ ಹೆಚ್ಚಿಲ್ಲದೆಯೇ ಕಾರ್ಯನಿರ್ವಹಿಸಲು ಅವಕಾಶ ನೀಡಿತು. ಡಿಸೆಂಬರ್ 2020 ರ ವೇಳೆಗೆ ಈ ಮಿತಿಯನ್ನು ಕ್ರಮೇಣ 80 ಪ್ರತಿಶತಕ್ಕೆ ಹೆಚ್ಚಿಸಲಾಯಿತು.

ವಿಮಾನಯಾನ ಸಂಸ್ಥೆಗಳು ಸೆಪ್ಟೆಂಬರ್‌ನಲ್ಲಿ ಸುಮಾರು 61,100 ನಿರ್ಗಮನಗಳಿಗೆ ಸಾಕ್ಷಿಯಾಗಿದ್ದು, ಇದೇ ತಿಂಗಳಲ್ಲಿ 39,628 ನಿರ್ಗಮನಗಳಿಗೆ ಹೋಲಿಸಿದರೆ, ಅನುಕ್ರಮವಾಗಿ, ಕಳೆದ ತಿಂಗಳಲ್ಲಿ ಹೊರಡುವವರ ಸಂಖ್ಯೆಯು ಸುಮಾರು 6 ಪ್ರತಿಶತದಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: Coal Crisis ಕಲ್ಲಿದ್ದಲು ಬಿಕ್ಕಟ್ಟು: ದೇಶದಲ್ಲಿ ವಿದ್ಯುತ್ ಸಮಸ್ಯೆ ನಿರೀಕ್ಷಿತ; ಯಾವ ರಾಜ್ಯಗಳಲ್ಲಿ ಹೇಗಿದೆ ಪರಿಸ್ಥಿತಿ?

Published On - 4:27 pm, Tue, 12 October 21

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ