ಬಾಬಾ ಸಿದ್ದಿಕಿ ಕೊಲೆ: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಂಧನ

ಬಾಬಾ ಸಿದ್ದಿಕಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗ್ಯಾಂಗ್​ಸ್ಟರ್ ಅನ್ಮೋಲ್ ಬಿಷ್ಣೋಯ್(Anmol Bishnoi)​ನನ್ನು ಅಮೆರಿಕ ಗಡಿಪಾರು ಮಾಡಿದ್ದು, ದೆಹಲಿಯಲ್ಲಿ ಎನ್​ಐಎ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಅನ್ಮೋಲ್ ಬಿಷ್ಣೋಯ್​ನನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು.  ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ ಬುಧವಾರ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ಬಾಬಾ ಸಿದ್ದಿಕಿ ಕೊಲೆ: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಂಧನ
ಅನ್ಮೋಲ್

Updated on: Nov 19, 2025 | 2:46 PM

ನವದೆಹಲಿ, ನವೆಂಬರ್ 19: ಬಾಬಾ ಸಿದ್ದಿಕಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗ್ಯಾಂಗ್​ಸ್ಟರ್ ಅನ್ಮೋಲ್ ಬಿಷ್ಣೋಯ್(Anmol Bishnoi)​ನನ್ನು ಅಮೆರಿಕ ಗಡಿಪಾರು ಮಾಡಿದ್ದು, ದೆಹಲಿಯಲ್ಲಿ ಎನ್​ಐಎ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಅನ್ಮೋಲ್ ಬಿಷ್ಣೋಯ್​ನನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು.  ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ ಬುಧವಾರ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ಅನ್ಮೋಲ್ ಬಿಷ್ಣೋಯ್ ಕುಖ್ಯಾತ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್​ನ ಕಿರಿಯ ಸಹೋದರನಾಗಿದ್ದು, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯಲ್ಲಿ ಬೇಕಾಗಿದ್ದ. ಸಿಧು ಮೂಸೆವಾಲಾ ಕೊಲೆ, ಬಾಬಾ ಸಿದ್ದಿಕಿ ಹತ್ಯೆ ಮತ್ತು ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಅನ್ಮೋಲ್ ಬಿಷ್ಣೋಯ್.

ಅನ್ಮೋಲ್ ಬಿಷ್ಣೋಯ್ ಗ್ಯಾಂಗ್‌ಸ್ಟರ್ ಲಾರೆನ್ಸ್ ನ ಕಿರಿಯ ಸಹೋದರ. ಆತ ಅಮೆರಿಕದಿಂದ ಭಾರತದಲ್ಲಿ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದನು. ಮೂಸೆವಾಲಾ ಹತ್ಯೆಗೆ ಶಸ್ತ್ರಾಸ್ತ್ರಗಳು ಮತ್ತು ಲಾಜಿಸ್ಟಿಕ್ಸ್ ಒದಗಿಸುವುದು ಸೇರಿದಂತೆ ಅನ್ಮೋಲ್ ವಿರುದ್ಧ ಹದಿನೆಂಟು ಪ್ರಕರಣಗಳು ದಾಖಲಾಗಿವೆ. ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆಯನ್ನು ಅನ್ಮೋಲ್ ಬಿಷ್ಣೋಯ್ ಹೊತ್ತುಕೊಂಡಿದ್ದ.

ಮತ್ತಷ್ಟು ಓದಿ: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ: ಗ್ಯಾಂಗ್​ಸ್ಟರ್​ ಅನ್ಮೋಲ್ ಬಿಷ್ಣೋಯ್​ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

2024ರ ಅಕ್ಟೋಬರ್ 12ರಂದು ಬಾಬಾ ಸಿದ್ದಿಕಿಯನ್ನು ಅವರ ಮಗನ ಕಚೇರಿಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅನ್ಮೋಲ್ ಕೂಡ ಶೂಟರ್‌ಗಳೊಂದಿಗೆ ಸಂಪರ್ಕದಲ್ಲಿದ್ದ. ಅನ್ಮೋಲ್ ಬಿಷ್ಣೋಯ್ ಪಂಜಾಬಿ ಗಾಯಕ ಕರಣ್ ಔಜ್ಲಾನೊಂದಿಗೆ ವಿದೇಶದಲ್ಲಿ ರಾತ್ರಿ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದ. 2024ರಲ್ಲಿ ಆತನನ್ನು ಅಮೆರಿಕದಲ್ಲಿ ಬಂಧಿಸಲಾಗಿತ್ತು.

ವರದಿಗಳ ಪ್ರಕಾರ, ಅಂದಿನಿಂದ ಅನ್ಮೋಲ್ ಅಮೆರಿಕದ ಪೊಲೀಸರು ಮತ್ತು ಏಜೆನ್ಸಿಗಳ ವಶದಲ್ಲಿದ್ದ. ಜೈಲಿನಲ್ಲಿರುವ ಅನ್ಮೋಲ್ ಅವರ ಹಿರಿಯ ಸಹೋದರ ಲಾರೆನ್ಸ್ ಬಿಷ್ಣೋಯ್ ನೇತೃತ್ವದ ಗ್ಯಾಂಗ್‌ಗೆ ಸಂಬಂಧಿಸಿದ ಹಲವಾರು ವ್ಯಕ್ತಿಗಳನ್ನು ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಯಿತು.
ಲಾರೆನ್ಸ್ ಗ್ಯಾಂಗ್ ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ, ಚಂಡೀಗಢ , ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಹರಡಿಕೊಂಡಿದೆ.

ಅನ್ಮೋಲ್ 2011 ರಲ್ಲಿ, ಲಾರೆನ್ಸ್ ಎಸ್​ಒಪಿಒ ಎಂಬ ಸಂಘಟನೆಯನ್ನು ರಚಿಸಿ ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಚುನಾವಣೆಯ ಸಮಯದಲ್ಲಿ, ಆತನ ಮೇಲೆ ಹಲ್ಲೆ ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪ ಹೊರಿಸಲಾಯಿತು. ಚಂಡೀಗಢ ಮತ್ತು ಪಂಜಾಬ್‌ನಲ್ಲಿ ಹಲವಾರು ಗ್ಯಾಂಗ್‌ಗಳೊಂದಿಗೆ ದ್ವೇಷವನ್ನು ಹೊಂದಿದ್ದ, ಇದು ಆಗಾಗ ಗ್ಯಾಂಗ್ ವಾರ್‌ಗಳಿಗೆ ಕಾರಣವಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ