ಪುಲ್ವಾಮಾ ದಾಳಿಕೋರನ ಜೊತೆ ಲವ್ ಅಫೇರ್, ಜೈಲು ಸೇರಿದ ಕಾಶ್ಮೀರದ ರೈಫಲ್ ಸುಂದರಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ರೈಫಲ್ ಕನ್ಯೆಯನ್ನು ಪೊಲೀಸರು ಅರೆಸ್ಟ್ ಮಾಡಿ ಜೆಲಿಗೆ ಕಳಿಸಿದ್ದಾರೆ. ಹೌದು ಭಾರತದ ಸೈನಿಕರ ಮಾರಣ ಹೋಮ ನಡೆಸಿದ ಪುಲ್ವಾಮಾ ದಾಳಿಯಲ್ಲಿ ಓರ್ವ ಯುವತಿ ಕೂಡ ಭಾಗಿಯಾಗಿದ್ದಳು. ಪುಲ್ವಾಮಾ ದಾಳಿಕೋರನೊಂದಿಗೆ ಲವ್ ಆಫೇರ್ ಹೊಂದಿದ್ದ ಪುಲ್ವಾಮಾದ 23 ವರ್ಷದ ಇನ್ ಶಾ ಜಾನ್ ಎಂಬ ಯುವತಿ, ಈಗ ಭಯೋತ್ಪಾದಕಿಯಾಗಿ ಜೈಲು ಸೇರಿದ್ದಾಳೆ. ಪಾಕಿಸ್ತಾನದಿಂದ ಭಾರತಕ್ಕೆ ಗಡಿದಾಟಿ ನುಸುಳಿ ಬಂದಿದ್ದ ಮೊಹಮ್ಮದ್ ಉಮರ್ ಫಾರೂಕ್‌ಗೆ ಈಕೆ […]
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ರೈಫಲ್ ಕನ್ಯೆಯನ್ನು ಪೊಲೀಸರು ಅರೆಸ್ಟ್ ಮಾಡಿ ಜೆಲಿಗೆ ಕಳಿಸಿದ್ದಾರೆ.
ಹೌದು ಭಾರತದ ಸೈನಿಕರ ಮಾರಣ ಹೋಮ ನಡೆಸಿದ ಪುಲ್ವಾಮಾ ದಾಳಿಯಲ್ಲಿ ಓರ್ವ ಯುವತಿ ಕೂಡ ಭಾಗಿಯಾಗಿದ್ದಳು. ಪುಲ್ವಾಮಾ ದಾಳಿಕೋರನೊಂದಿಗೆ ಲವ್ ಆಫೇರ್ ಹೊಂದಿದ್ದ ಪುಲ್ವಾಮಾದ 23 ವರ್ಷದ ಇನ್ ಶಾ ಜಾನ್ ಎಂಬ ಯುವತಿ, ಈಗ ಭಯೋತ್ಪಾದಕಿಯಾಗಿ ಜೈಲು ಸೇರಿದ್ದಾಳೆ.
ಪಾಕಿಸ್ತಾನದಿಂದ ಭಾರತಕ್ಕೆ ಗಡಿದಾಟಿ ನುಸುಳಿ ಬಂದಿದ್ದ ಮೊಹಮ್ಮದ್ ಉಮರ್ ಫಾರೂಕ್‌ಗೆ ಈಕೆ ತನು ಮನ ಧನ ಸೇರಿ ಎಲ್ಲ ರೀತಿಯ ನೆರವು ನೀಡಿದ್ದಳು. ಉಮರ್ ಫಾರೂಕ್‌ನನ್ನು ತನ್ನ ಮನೆಯಲ್ಲೇ ಇರಿಸಿಕೊಂಡು ಊಟ , ವಸತಿ ಸೌಲಭ್ಯ ನೀಡಿದ್ದಳು ಇನ್ ಶಾ ಜಾ.
ಇಷ್ಟೇ ಅಲ್ಲ ಆಕೆ ಎಕೆ-47 ಹಾಗೂ ರಿವಾಲ್ವರ್ ಹಿಡಿದು ಪೋಟೋ ಕೂಡಾ ತೆಗೆಸಿಕೊಂಡಿದ್ದಾಳೆ. ಈಕೆಯ ಮನೆಯಲ್ಲಿ ಯೋಧರ ಮೇಲೆ ದಾಳಿ ನಡೆಸಿದ ಆದಿಲ್ ಅಹಮದ್ ಧರ್ ವಿಡಿಯೋ ರೆಕಾರ್ಡ್ ಮಾಡಿ ಅದನ್ನು ಪಾಕಿಸ್ತಾನಕ್ಕೆ ಕಳಿಸಿದ್ದರು. ಪಾಕಿಸ್ತಾನದಿಂದ ಆ ವಿಡಿಯೋವನ್ನು ಚೆನ್ನಾಗಿ ಎಡಿಟ್ ಮಾಡಿ ವಾಪಸ್ ಕಳಿಸಿದ್ದರು.