ಹಾರ್ವರ್ಡ್​ ವಿಶ್ವವಿದ್ಯಾಲಯದ ಹೆಸರು ಹೇಳಿ ಪತ್ರಕರ್ತೆ ನಿಧಿ ರಜ್ದಾನ್​ಗೆ ವಂಚನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 15, 2021 | 7:58 PM

ಕಳೆದ ಜೂನ್​ ತಿಂಗಳಲ್ಲಿ ನಿಧಿ ಟ್ವೀಟ್​ ಮಾಡಿ, ಸುದ್ದಿ ವಾಹಿನಿ ತೊರೆಯುತ್ತಿದ್ದೇನೆ. ಹಾರ್ವರ್ಡ್​ ವಿಶ್ವ ವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಪಕಿಯಾಗಿ ಕೆಲಸ ಸಿಕ್ಕಿದೆ ಎಂದು ಬರೆದುಕೊಂಡಿದ್ದರು. ಆದರೆ, ಇದು ಮೋಸದ ಜಾಲ ಎಂದು ಆರು ತಿಂಗಳ ನಂತರ ಗೊತ್ತಾಗಿದೆ.

ಹಾರ್ವರ್ಡ್​ ವಿಶ್ವವಿದ್ಯಾಲಯದ ಹೆಸರು ಹೇಳಿ ಪತ್ರಕರ್ತೆ ನಿಧಿ ರಜ್ದಾನ್​ಗೆ ವಂಚನೆ
ಪತ್ರಕರ್ತೆ ನಿಧಿ ರಜ್ದಾನ್​
Follow us on

ಹಿರಿಯ ಪತ್ರಕರ್ತೆ ಹಾಗೂ ನ್ಯೂಸ್​ ಆ್ಯಂಕರ್​ ನಿಧಿ ರಜ್ದಾನ್ ಫಿಶಿಂಗ್​ (phishing) ಜಾಲಕ್ಕೆ ಸಿಲುಕಿ ಮೋಸ ಹೋಗಿದ್ದಾರೆ. ಹಾರ್ವರ್ಡ್​ ವಿಶ್ವವಿದ್ಯಾಲಯದಲ್ಲಿ ಕೆಲಸ ನೀಡುವುದಾಗಿ ನಂಬಿಸಿ ನಿಧಿಗೆ ಮೋಸ ಮಾಡಲಾಗಿದೆ.

ಕಳೆದ ಜೂನ್​ ತಿಂಗಳಲ್ಲಿ ನಿಧಿ ಟ್ವೀಟ್​ ಮಾಡಿ, ಸುದ್ದಿ ವಾಹಿನಿ ತೊರೆಯುತ್ತಿದ್ದೇನೆ. ಹಾರ್ವರ್ಡ್​ ವಿಶ್ವ ವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಸಿಕ್ಕಿದೆ ಎಂದು ಬರೆದುಕೊಂಡಿದ್ದರು. ಆದರೆ, ಇದು ಮೋಸದ ಜಾಲ ಎಂದು ಆರು ತಿಂಗಳ ನಂತರ ಗೊತ್ತಾಗಿದೆ.

ಹಾರ್ವರ್ಡ್​ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪಾಠ ಮಾಡಲು ಅವಕಾಶ ನೀಡುತ್ತಿದ್ದೇವೆ. ನೀವು ಸಹಾಯಕ ಪ್ರಾಧ್ಯಾಪಕಿಯಾಗಿ ಸೇರ್ಪಡೆಯಾಗಿ ಎಂದು ಕಳೆದ ವರ್ಷ ನಿಧಿ ಅವರಿಗೆ ಇ-ಮೇಲ್​ ಮೂಲಕ ಕೋರಲಾಗಿತ್ತು. ಹಾರ್ವರ್ಡ್​ ವಿಶ್ವವಿದ್ಯಾಲಯದವರೇ ಇದನ್ನು ಕಳುಹಿಸಿದ್ದಾರೆ ಎಂದು ನಂಬಿದ ನಿಧಿ, ಆಫರ್​ ಒಪ್ಪಿಕೊಂಡಿದ್ದರು. ಅಲ್ಲದೆ, ಇ-ಮೇಲ್​ ಕಳುಹಿಸಿದವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದರು.

ಆಫರ್​ ಲೆಟರ್​ ಸಿಕ್ಕ ಬೆನ್ನಲ್ಲೇ ನಿಧಿ ತಾವು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ರಾಜೀನಾಮೆ ನೀಡಿದ್ದರು. ಸೆಪ್ಟೆಂಬರ್​ 2020ರಂದು ಇವರಿಗೆ ಹಾರ್ವರ್ಡ್​ ವಿಶ್ವವಿದ್ಯಾಲಯಕ್ಕೆ ಜಾಯಿನ್​ ಆಗಲು ಸೂಚಿಸಲಾಗಿತ್ತು. ಆದರೆ, ಕೊರೊನಾ ಕಾರಣದಿಂದ ಹಾರ್ವರ್ಡ್​ ವಿಶ್ವವಿದ್ಯಾಲಯದ ತರಗತಿಗಳು ಜನವರಿ 2021ರವರೆಗೆ ಮುಂದೂಡಲ್ಪಟ್ಟಿವೆ ಎಂದು ನಿಧಿಗೆ ಇ-ಮೇಲ್​ ಮೂಲಕ ತಿಳಿಸಲಾಗಿತ್ತು.

ಈಗ ಮತ್ತೆ ವಿಚಾರಣೆ ಮಾಡಿದಾಗ, ತರಗತಿಗೆ ಆರಂಭ ಆಗೋದು ಕೊಂಚ ವಿಳಂಬವಾಗಬಹುದು ಎಂದು ಆ ಕಡೆಯಿಂದ ಉತ್ತರ ಬಂದಿತ್ತು. ಈ ವೇಳೆ ಅನುಮಾನಗೊಂಡ ನಿಧಿ, ನೇರವಾಗಿ ಹಾರ್ವರ್ಡ್​ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಈ ವೇಳೆ ಆ ರೀತಿಯ ಯಾವುದೇ ಆಫರ್​ ಕೊಟ್ಟಿಲ್ಲ ಎನ್ನುವ ವಿಚಾರ ಬಯಲಾಗಿದೆ. ಅಲ್ಲದೆ, ನಿಧಿ ಅವರ ಖಾಸಗಿ ಮಾಹಿತಿ ಕೂಡ ಕದ್ದಿರುವ ವಿಚಾರ ಕೂಡ ಹೊರ ಬಿದ್ದಿದೆ. ಸದ್ಯ, ನಿಧಿ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ಫಿಶಿಂಗ್​ ವಂಚನೆ ಕೆಲ ಕಂಪೆನಿ ಹೆಸರನ್ನು ಅಥವಾ ವ್ಯಕ್ತಿ ಬಳಕೆ ಮಾಡಿಕೊಂಡು ನಡೆಸುವ ವಂಚನೆ. ಖಾಸಗಿ ಮಾಹಿತಿ ಕದಿಯಲು ಈ ತಂತ್ರ ಬಳಕೆ ಮಾಡಲಾಗುತ್ತದೆ.

 

ವಿವಾದಿತ ‘ಕೊವ್ಯಾಕ್ಸಿನ್​’ ಲಸಿಕೆ ಸ್ವೀಕರಿಸಿದ ಪತ್ರಕರ್ತೆ.. ನೀವೂ ಲಸಿಕೆ ಸ್ವೀಕರಿಸಿ ಎಂದು ಜನಸಾಮಾನ್ಯರಿಗೆ ಕರೆ