ಪಿಕಪ್​ ವಾಹನ ಕಮರಿಗೆ ಬಿದ್ದು 9 ಮಂದಿ ಸಾವು, ಮೂವರಿಗೆ ಗಾಯ; ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

| Updated By: Lakshmi Hegde

Updated on: Jun 29, 2021 | 9:06 AM

Himachal Pradesh: ಪಿಕಪ್​ ವಾಹನ ಶಿಲ್ಲೈ ಉಪವಿಭಾಗದ, ಪಾವೊಂಟಾ ಸಾಹಿಬ್ ಗಡಿ ಬಳಿ ಇರುವ ಪಾಶೋಗ್ ಬಳಿಯ ಕಮರಿಗೆ ಬಿದ್ದಿದೆ ಎಂದು ಪಾವೊಂಟಾ ಪೊಲೀಸ್​ ಅಧಿಕಾರಿ ಬೀರ್​ ಬಹದ್ದೂರ್​ ಹೇಳಿದ್ದಾರೆ.

ಪಿಕಪ್​ ವಾಹನ ಕಮರಿಗೆ ಬಿದ್ದು 9 ಮಂದಿ ಸಾವು, ಮೂವರಿಗೆ ಗಾಯ; ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ಪ್ರಾತಿನಿಧಿಕ ಚಿತ್ರ
Follow us on

ಪಿಕಪ್​ ವಾಹನವೊಂದು ಆಳವಾದ ಕಂದಕಕ್ಕೆ ಬಿದ್ದು 9 ಮಂದಿ ಮೃತಪಟ್ಟಿದ್ದಾರೆ. ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ವಾಹನದಲ್ಲಿ ಮದುವೆ ಸಮಾರಂಭಕ್ಕೆಂದು ಹೋದವರೇ ತುಂಬಿದ್ದರು. ಸೋಮವಾರ ಹಿಮಾಚಲ ಪ್ರದೇಶದ ಸಿರ್ಮೌರ್​​ ಜಿಲ್ಲೆಯಲ್ಲಿ ದುರ್ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಪಿಕಪ್​ ವಾಹನ ಶಿಲ್ಲೈ ಉಪವಿಭಾಗದ, ಪಾವೊಂಟಾ ಸಾಹಿಬ್ ಗಡಿ ಬಳಿ ಇರುವ ಪಾಶೋಗ್ ಬಳಿಯ ಕಮರಿಗೆ ಬಿದ್ದಿದೆ ಎಂದು ಪಾವೊಂಟಾ ಪೊಲೀಸ್​ ಅಧಿಕಾರಿ ಬೀರ್​ ಬಹದ್ದೂರ್​ ಹೇಳಿದ್ದಾರೆ. ಹಾಗೇ, ಸ್ಥಳೀಯ ಪೊಲೀಸ್​ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿ ಪ್ರಧಾನಿ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ. ಸಿರ್ಮೌರ್​ ಅಪಘಾತದ ವಿಷಯ ಕೇಳಿ ತುಂಬ ನೋವಾಯಿತು. ಮೃತರ ಕುಟುಂಬಗಳಿಗೆ ಸಾಂತ್ವನಗಳು. ಹಾಗೇ, ಗಾಯಗೊಂಡವರು ಬೇಗನೇ ಗುಣಮುಖರಾಗಲೆಂದು ಹಾರೈಸುತ್ತೇವೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ನೀಡಲಾಗುವುದು. ಹಾಗೇ, ಗಾಯಗೊಂಡವರಿಗೆ ತಲಾ 50 ಸಾವಿರ ರೂ.ಕೊಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿದ್ದಾಗಿ ಟ್ವೀಟ್​​ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Gold Rate Today: ಪ್ರೀತಿಯಿಂದ ಪ್ರಿಯತಮನಿಗಾಗಿ ಚಿನ್ನ ಕೊಡಿಸುವ ಆಸೆ ಇದೆಯೇ? ಇಂದಿನ ಚಿನ್ನ, ಬೆಳ್ಳಿ ದರ ವಿವರ ತಿಳಿಯಿರಿ

Nine dead three Injured after vehicle falls into gorge in Himachal Pradesh

Published On - 9:04 am, Tue, 29 June 21