ಜಮ್ಮುವಿನಲ್ಲಿ ಹೆಚ್ಚಿದ ಉಗ್ರ ಚಟುವಟಿಕೆ; ನಿನ್ನೆ ಎರಡು ಡ್ರೋನ್​ ಪತ್ತೆಯಾದ ಬೆನ್ನಲ್ಲೇ ಇಂದು ಸುಂಜ್ವಾನಾದಲ್ಲಿ ಇನ್ನೊಂದು ಡ್ರೋನ್​ ಹಾರಾಟ

ಜಮ್ಮುವಿನ ಮಿಲಿಟರಿ ಇನ್​​ಸ್ಟಾಲೇಶನ್​ ಸಮೀಪ ಕಳೆದ ಮೂರು ದಿನಗಳಿಂದಲೂ ಡ್ರೋನ್​ಗಳು ಹಾರಾಡುತ್ತಿದ್ದು, ಸೋಮವಾರ ಕುಲಚಕ್​ ಮಿಲಿಟರಿ ಕ್ಯಾಂಪ್​ ಬಳಿ ಕಾಣಿಸಿಕೊಂಡ ಡ್ರೋನ್​ ಮೇಲೆ ಭಾರತೀಯ ಸೇನೆ ಯೋಧರು ಗುಂಡಿನ ದಾಳಿಯನ್ನೂ ನಡೆಸಿದ್ದರು.

ಜಮ್ಮುವಿನಲ್ಲಿ ಹೆಚ್ಚಿದ ಉಗ್ರ ಚಟುವಟಿಕೆ; ನಿನ್ನೆ ಎರಡು ಡ್ರೋನ್​ ಪತ್ತೆಯಾದ ಬೆನ್ನಲ್ಲೇ ಇಂದು ಸುಂಜ್ವಾನಾದಲ್ಲಿ ಇನ್ನೊಂದು ಡ್ರೋನ್​ ಹಾರಾಟ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jun 29, 2021 | 10:01 AM

ಜಮ್ಮುವಿನಲ್ಲಿ ಉಗ್ರ ಚಟುವಟಿಕೆ ಹೆಚ್ಚುತ್ತಿದೆ. ಇಂದು ಮುಂಜಾನೆ 2.30ರ ಹೊತ್ತಿಗೆ ಜಮ್ಮುವಿನ ಸುಂಜ್ವಾನ್​ ಮಿಲಿಟರಿ ಸ್ಟೇಶನ್​​ ಬಳಿ ಇನ್ನೊಂದು ಡ್ರೋನ್​ ಪತ್ತೆಯಾಗಿದೆ. ಈ ಡ್ರೋನ್​ ಕುಂಜ್ವಾನಿ, ಸುಂಜ್ವಾನ್ ಮತ್ತು ಕಲುಚಕ್ ಪ್ರದೇಶಗಳಲ್ಲಿ ಕಾಣಿಸಿಕೊಂಡಿತ್ತು. ಅದಾದ ಬಳಿಕ ಕೆಲವೇ ಹೊತ್ತಲ್ಲಿ ಕಣ್ಮರೆಯಾಗಿದೆ. ಕುಂಜ್ವಾನಿ ಪ್ರದೇಶ ಜಮ್ಮು ಪಟ್ಟಣದ ಒಳಗೇ ಇದ್ದು, ಸತ್ವಾರಿ ಏರ್​ಫೋರ್ಸ್​ ಸ್ಟೇಶನ್​​ ಸಮೀಪ ಇದೆ. ಕುಲಚಕ್​​ನಿಂದ 4.5 ಕಿಮೀ ದೂರದಲ್ಲಿ ಸುಂಜ್ವಾನಾ ಇದ್ದು, ಇಲ್ಲಿಂದ 6.5 ಕಿಮೀ ದೂರದಲ್ಲಿ ಕುಂಜ್ವಾನಿ ಇದೆ. ಈ ಏರಿಯಾ ಸುತ್ತಮುತ್ತಲೂ ಡ್ರೋನ್​ಗಳು ಮಧ್ಯರಾತ್ರಿಯಿಂದ ಮುಂಜಾನೆವರೆಗೆ ಹಾರಾಟ ನಡೆಸುತ್ತಿವೆ.

ಜಮ್ಮುವಿನ ಮಿಲಿಟರಿ ಇನ್​​ಸ್ಟಾಲೇಶನ್​ ಸಮೀಪ ಕಳೆದ ಮೂರು ದಿನಗಳಿಂದಲೂ ಡ್ರೋನ್​ಗಳು ಹಾರಾಡುತ್ತಿದ್ದು, ಸೋಮವಾರ ಕುಲಚಕ್​ ಮಿಲಿಟರಿ ಕ್ಯಾಂಪ್​ ಬಳಿ ಕಾಣಿಸಿಕೊಂಡ ಡ್ರೋನ್​ ಮೇಲೆ ಭಾರತೀಯ ಸೇನೆ ಯೋಧರು ಗುಂಡಿನ ದಾಳಿಯನ್ನೂ ನಡೆಸಿದ್ದರು. ಒಂದು ಮಾನವರಹಿತ ವೈಮಾನಿಕ ವಾಹನ ((UAV) ಭಾನುವಾರ ರಾತ್ರಿ 11: 45 ಕ್ಕೆ ಸೇನಾ ನೆಲೆಯೊಳಗೆ ಮತ್ತು ಇನ್ನೊಂದು ಸೋಮವಾರ ಮುಂಜಾನೆ 2:40 ಕ್ಕೆ ಹಾರಾಟ ನಡೆಸುತ್ತಿತ್ತು. ಅದರ ಮೇಲೆ ಯೋಧರು ಸುಮಾರು 202-25 ಬಾರಿ ಗುಂಡು ಹಾರಿಸಿದ್ದರು.

ಅದಕ್ಕೂ ಮೊದಲು ಜಮ್ಮುವಿನ ಏರ್​ಪೋರ್ಟ್​​ನಲ್ಲಿರುವ ಏರ್​ಫೋರ್ಸ್​ ಸ್ಟೇಶನ್​ನಲ್ಲಿ ಎರಡು ಸ್ಫೋಟ ಆಗಿತ್ತು. ಐಇಡಿ ಸ್ಫೋಟಕವನ್ನು ಡ್ರೋನ್​ ಮೂಲಕವೇ ಎಸೆದು ಸ್ಫೋಟಿಸಿದ್ದಾಗಿ ತನಿಖೆಯಿಂದ ಗೊತ್ತಾಗಿದೆ. ಒಟ್ಟಾರೆ ಜಮ್ಮುವಿನಲ್ಲಿ ಮತ್ತೆ ಉಗ್ರ ಚಟುವಟಿಕೆ ಹೆಚ್ಚಿದೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನ ಮಾಡಿದಷ್ಟೂ ಉಗ್ರರು ಮತ್ತೆಮತ್ತೆ ದಾಳಿ ಮಾಡುತ್ತಿದ್ದಾರೆ. ಹಾಗೇ ಇಂದು ಕಾಶ್ಮೀರದಲ್ಲಿ ಲಷ್ಕರ್ ಇ ತೈಬಾ ಉಗ್ರಸಂಘಟನೆಯ ಉನ್ನತ ಕಮಾಂಡರ್​ ನದೀಮ್​ ಅಬ್ರಾಬ್​ನನ್ನು ಜಮ್ಮು-ಕಾಶ್ಮೀರ ಪೊಲೀಸರು ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ