ಪಿಕಪ್ ವಾಹನ ಕಮರಿಗೆ ಬಿದ್ದು 9 ಮಂದಿ ಸಾವು, ಮೂವರಿಗೆ ಗಾಯ; ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
Himachal Pradesh: ಪಿಕಪ್ ವಾಹನ ಶಿಲ್ಲೈ ಉಪವಿಭಾಗದ, ಪಾವೊಂಟಾ ಸಾಹಿಬ್ ಗಡಿ ಬಳಿ ಇರುವ ಪಾಶೋಗ್ ಬಳಿಯ ಕಮರಿಗೆ ಬಿದ್ದಿದೆ ಎಂದು ಪಾವೊಂಟಾ ಪೊಲೀಸ್ ಅಧಿಕಾರಿ ಬೀರ್ ಬಹದ್ದೂರ್ ಹೇಳಿದ್ದಾರೆ.
ಪಿಕಪ್ ವಾಹನವೊಂದು ಆಳವಾದ ಕಂದಕಕ್ಕೆ ಬಿದ್ದು 9 ಮಂದಿ ಮೃತಪಟ್ಟಿದ್ದಾರೆ. ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ವಾಹನದಲ್ಲಿ ಮದುವೆ ಸಮಾರಂಭಕ್ಕೆಂದು ಹೋದವರೇ ತುಂಬಿದ್ದರು. ಸೋಮವಾರ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ದುರ್ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪಿಕಪ್ ವಾಹನ ಶಿಲ್ಲೈ ಉಪವಿಭಾಗದ, ಪಾವೊಂಟಾ ಸಾಹಿಬ್ ಗಡಿ ಬಳಿ ಇರುವ ಪಾಶೋಗ್ ಬಳಿಯ ಕಮರಿಗೆ ಬಿದ್ದಿದೆ ಎಂದು ಪಾವೊಂಟಾ ಪೊಲೀಸ್ ಅಧಿಕಾರಿ ಬೀರ್ ಬಹದ್ದೂರ್ ಹೇಳಿದ್ದಾರೆ. ಹಾಗೇ, ಸ್ಥಳೀಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿ ಪ್ರಧಾನಿ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ. ಸಿರ್ಮೌರ್ ಅಪಘಾತದ ವಿಷಯ ಕೇಳಿ ತುಂಬ ನೋವಾಯಿತು. ಮೃತರ ಕುಟುಂಬಗಳಿಗೆ ಸಾಂತ್ವನಗಳು. ಹಾಗೇ, ಗಾಯಗೊಂಡವರು ಬೇಗನೇ ಗುಣಮುಖರಾಗಲೆಂದು ಹಾರೈಸುತ್ತೇವೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ನೀಡಲಾಗುವುದು. ಹಾಗೇ, ಗಾಯಗೊಂಡವರಿಗೆ ತಲಾ 50 ಸಾವಿರ ರೂ.ಕೊಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿದ್ದಾಗಿ ಟ್ವೀಟ್ನಲ್ಲಿ ಹೇಳಲಾಗಿದೆ.
Pained by the loss of lives due to an accident in Sirmaur, HP. Condolences to the bereaved families and prayers with the injured. An ex-gratia of Rs. 2 lakh each from PMNRF would be provided to the next of kin of the deceased. Rs. 50,000 would be given to the injured: PM Modi
— PMO India (@PMOIndia) June 28, 2021
ಇದನ್ನೂ ಓದಿ: Gold Rate Today: ಪ್ರೀತಿಯಿಂದ ಪ್ರಿಯತಮನಿಗಾಗಿ ಚಿನ್ನ ಕೊಡಿಸುವ ಆಸೆ ಇದೆಯೇ? ಇಂದಿನ ಚಿನ್ನ, ಬೆಳ್ಳಿ ದರ ವಿವರ ತಿಳಿಯಿರಿ
Nine dead three Injured after vehicle falls into gorge in Himachal Pradesh
Published On - 9:04 am, Tue, 29 June 21