ಮಾಜಿ ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣದ ರೂವಾರಿ, ಲಷ್ಕರ್ ಇ ತೈಯ್ಬಾದ ಉನ್ನತ ಕಮಾಂಡರ್ ನದೀಮ್ ಅಬ್ರಾರ್ ಹತ್ಯೆ..
ನದೀಮ್ ಅಬ್ರಾರ್ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಇದ್ದ ಉಗ್ರನಾಗಿದ್ದ. ಇತ್ತೀಚೆಗೆ ಕಾಶ್ಮೀರದಲ್ಲಿ ರಕ್ಷಣಾ ಪಡೆಗಳು, ನಾಗರಿಕರ ಮೇಲೆ ನಡೆದ ಹಲವು ದಾಳಿಯಲ್ಲಿ ಭಾಗಿಯಾಗಿದ್ದ. ನಿನ್ನೆ ರಾತ್ರಿ ಈತನನ್ನು ಬಂಧಿಸಲಾಗಿತ್ತು
ಪಾಕಿಸ್ತಾನದ ಲಷ್ಕರ್ ಇ ತೈಬಾ ಉಗ್ರಸಂಘಟನೆಯ ಉನ್ನತ ಕಮಾಂಡರ್ ಆಗಿದ್ದ ನದೀಮ್ ಅಬ್ರಾರ್ ಮತ್ತು ಇನ್ನೊಬ್ಬಾತ ಉಗ್ರನನ್ನು ಇಂದು ಮುಂಜಾನೆ ಎನ್ಕೌಂಟರ್ನಲ್ಲಿ ಹತ್ಯೆಗೈದಿದ್ದಾಗಿ ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ. ಶ್ರೀನಗರದ ಮಲ್ಹೂರಾ ಪರಿಂಪೋರದಲ್ಲಿ ಉಗ್ರರು ಮತ್ತು ರಕ್ಷಣಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇಬ್ಬರನ್ನು ಹತ್ಯೆಗೈಯಲಾಗಿದ್ದು, ಅವರ ಬಳಿಯಿದ್ದ ಹಲವಾರು ಮದ್ದುಗುಂಡುಗಳು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೇ, ಉನ್ನತ ಕಮಾಂಡರ್ ಸೇರಿ ಇಬ್ಬರನ್ನು ಹತ್ಯೆ ಮಾಡಿದ ಬಗ್ಗೆ ಕಾಶ್ಮೀರ ಝೋನ್ ಐಜಿಪಿ ವಿಜಯ್ ಕುಮಾರ್ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ.
ನದೀಮ್ ಅಬ್ರಾರ್ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಇದ್ದ ಉಗ್ರನಾಗಿದ್ದ. ಇತ್ತೀಚೆಗೆ ಕಾಶ್ಮೀರದಲ್ಲಿ ರಕ್ಷಣಾ ಪಡೆಗಳು, ನಾಗರಿಕರ ಮೇಲೆ ನಡೆದ ಹಲವು ದಾಳಿಯಲ್ಲಿ ಭಾಗಿಯಾಗಿದ್ದ. ನಿನ್ನೆ ರಾತ್ರಿ ಈತನನ್ನು ಬಂಧಿಸಲಾಗಿತ್ತು. ಆದರೆ ನಂತರ ಉಗ್ರರ ಅಡಗುತಾಣವನ್ನು ತೋರಿಸಲು ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಅಬ್ರಾರ್ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಯಿತು. ಆತನ ಸಹಚರನೊಬ್ಬ ನಮ್ಮ ಸಿಆರ್ಪಿಎಫ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ. ಇದರಿಂದಾಗಿ ಮೂವರು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡರು. ಇದರಿಂದಾಗಿ ಮತ್ತೆ ಉಗ್ರರು ಹಾಗೂ ರಕ್ಷಣಾ ಪಡೆಗಳ ನಡುವೆ ಎನ್ಕೌಂಟರ್ ನಡೆಯಿತು. ಈ ವೇಳೆ ಅಬ್ರಾರ್ನನ್ನು ಹತ್ಯೆಗೈಯಲಾಯಿತು ಎಂದು ಕಾಶ್ಮೀರ ಝೋನ್ ಐಜಿಪಿ ಮಾಹಿತಿ ನೀಡಿದ್ದಾರೆ.
ಮೊನ್ನೆಯಷ್ಟೇ ಮಾಜಿ ಪೊಲೀಸ್ ಅಧಿಕಾರಿ ಫಯಾಜ್ ಅಹ್ಮದ್, ಅವರ ಪತ್ನಿ ಮತ್ತು ಪುತ್ರಿಯನ್ನು ಉಗ್ರರು ಮನೇಗೆ ನುಗ್ಗಿ ಗುಂಡು ಹೊಡೆದು ಹತ್ಯೆ ಮಾಡಿದ್ದರು. ಈ ದಾಳಿಯಲ್ಲಿ ಸಹ ಅಬ್ರಾರ್ ಕೈವಾಡವಿತ್ತು. ಈ ಅಬ್ರಾರ್ ನೇತೃತ್ವದಲ್ಲಿ ಅನೇಕ ದಾಳಿಗಳು ನಡೆದಿದ್ದು, ಹಲವು ಸಿಆರ್ಪಿಎಫ್ ಯೋಧರು ಜೀವ ಕಳೆದುಕೊಂಡಿದ್ದಾರೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಪುಲ್ವಾಮಾದಲ್ಲಿ ಮಾಜಿ ಪೊಲೀಸ್ ಅಧಿಕಾರಿ, ಅವರ ಪತ್ನಿ, ಪುತ್ರಿಯನ್ನೂ ಕೊಂದ ಉಗ್ರರು; ಮನೆಗೇ ನುಗ್ಗಿ ಗುಂಡಿನ ದಾಳಿ
ಮೈಸೂರಿನಲ್ಲಿ ಮನೆಯ ಪಕ್ಕದ ಗಲ್ಲಿಯಲ್ಲೇ ಗಾಂಜಾ ಬೆಳೆದಿದ್ದ ವ್ಯಕ್ತಿ ಪೊಲೀಸರ ವಶಕ್ಕೆ; ಬೆಂಗಳೂರಿನಲ್ಲೂ ಓರ್ವ ಬಂಧನ
(Lashkar e Taiba top commander Nadeem Abrar shot down In Kashmir)