ನಿರ್ಭಯಾ ರೇಪ್ ಅಂಡ್ ಮರ್ಡರ್ ಪ್ರಕರಣ: ಅತ್ಯಾಚಾರಿಗಳು ಗಲ್ಲಿಗೇರುವ ಡೇಟ್ ಫಿಕ್ಸ್​

|

Updated on: Jan 08, 2020 | 11:22 AM

ದೆಹಲಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಹತ್ಯೆ ಪ್ರಕರಣದ ಅಪರಾಧಿಗಳಿಗೆ ಡೆತ್ ವಾರಂಟ್ ಜಾರಿ ಮಾಡಲಾಗಿದೆ. ಅಪರಾಧಿಗಳಾದ ಅಕ್ಷಯ್, ಮುಖೇಶ್, ವಿನಯ್, ಪವನ್‌ಗೆೆ ಗಲ್ಲು  ವಿಧಿಸಿಲು ದಿನಾಂಕ ನಿಗದಿ ಮಾಡಿ ಕೋರ್ಟ್​ ತೀರ್ಪು ನೀಡಿದೆ. ಜ.22ರ ಬೆಳಗ್ಗೆ 7 ಗಂಟೆಗೆ ನಾಲ್ವರು ಅಪರಾಧಿಗಳಿಗೆ ಗಲ್ಲು ವಿಧಿಸಲು ದೆಹಲಿಯ ಪಟಿಯಾಲ ಹೌಸ್​ ಕೋರ್ಟ್‌ ಆದೇಶಿಸಿದೆ. ಕ್ಯುರೇಟಿವ್ ಅರ್ಜಿ ಹಾಕಿದ್ರೂ ತಿರಸ್ಕೃತವಾಗುವ ಸಾಧ್ಯತೆ: ಅಪರಾಧಿಗಳಿಗೆ ಕೋರ್ಟ್​ನಿಂದ ಡೆತ್ ವಾರಂಟ್ ಜಾರಿ ಹಿನ್ನೆಲೆಯಲ್ಲಿ ಅಪರಾಧಿಗಳು ಕ್ಯುರೇಟಿವ್ ಅರ್ಜಿ […]

ನಿರ್ಭಯಾ ರೇಪ್ ಅಂಡ್ ಮರ್ಡರ್ ಪ್ರಕರಣ: ಅತ್ಯಾಚಾರಿಗಳು ಗಲ್ಲಿಗೇರುವ ಡೇಟ್ ಫಿಕ್ಸ್​
Follow us on

ದೆಹಲಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಹತ್ಯೆ ಪ್ರಕರಣದ ಅಪರಾಧಿಗಳಿಗೆ ಡೆತ್ ವಾರಂಟ್ ಜಾರಿ ಮಾಡಲಾಗಿದೆ. ಅಪರಾಧಿಗಳಾದ ಅಕ್ಷಯ್, ಮುಖೇಶ್, ವಿನಯ್, ಪವನ್‌ಗೆೆ ಗಲ್ಲು  ವಿಧಿಸಿಲು ದಿನಾಂಕ ನಿಗದಿ ಮಾಡಿ ಕೋರ್ಟ್​ ತೀರ್ಪು ನೀಡಿದೆ. ಜ.22ರ ಬೆಳಗ್ಗೆ 7 ಗಂಟೆಗೆ ನಾಲ್ವರು ಅಪರಾಧಿಗಳಿಗೆ ಗಲ್ಲು ವಿಧಿಸಲು ದೆಹಲಿಯ ಪಟಿಯಾಲ ಹೌಸ್​ ಕೋರ್ಟ್‌ ಆದೇಶಿಸಿದೆ.

ಕ್ಯುರೇಟಿವ್ ಅರ್ಜಿ ಹಾಕಿದ್ರೂ ತಿರಸ್ಕೃತವಾಗುವ ಸಾಧ್ಯತೆ:
ಅಪರಾಧಿಗಳಿಗೆ ಕೋರ್ಟ್​ನಿಂದ ಡೆತ್ ವಾರಂಟ್ ಜಾರಿ ಹಿನ್ನೆಲೆಯಲ್ಲಿ ಅಪರಾಧಿಗಳು ಕ್ಯುರೇಟಿವ್ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ತೀರ್ಪಿನಲ್ಲಿ ಲೋಪಗಳಿದ್ದಾಗ ಅದನ್ನು ಸರಿಪಡಿಸುವಂತೆ ಮಾತ್ರ ಅಪರಾಧಿಗಳು ಕ್ಯುರೇಟಿವ್ ಅರ್ಜಿ ಸಲ್ಲಿಸಬಹುದು. ಆದ್ರೆ, ಕೋರ್ಟ್​ರೂಂನಲ್ಲಿ ಕ್ಯುರೇಟಿವ್ ಅರ್ಜಿ ವಿಚಾರಣೆ ನಡೆಯುವುದಿಲ್ಲ. ನ್ಯಾಯಮೂರ್ತಿಗಳ ಚೇಂಬರ್​ನಲ್ಲಿ ಅರ್ಜಿ ಇತ್ಯರ್ಥವಾಗುತ್ತದೆ. ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಕ್ಯುರೇಟಿವ್ ಅರ್ಜಿಯಿಂದ ಯಾವುದೇ ಅನುಕೂಲವಾಗುವ ಸಾಧ್ಯತೆ ಇಲ್ಲ. ಅಪರಾಧಿಗಳು ಅರ್ಜಿ ಹಾಕಿದರೂ ಶೀಘ್ರ ತಿರಸ್ಕೃತವಾಗುವ ಸಾಧ್ಯತೆಯಿದೆ.

2012ರ ಡಿಸೆಂಬರ್ 16ರಂದು ಸ್ನೇಹಿತನ ಜೊತೆ ಸಿನಿಮಾ ನೋಡಿ ಸಂತ್ರಸ್ತೆ ಮನೆಗೆ ಹಿಂತಿರುಗುತ್ತಿದ್ದರು. ರಾತ್ರಿ 9.30ರ ವೇಳೆ ಸಂತ್ರಸ್ತೆ ಮತ್ತು ಸ್ನೇಹಿತ ಬಸ್ ಹತ್ತಿದರು. ಆಗ ಚಲಿಸುತ್ತಿದ್ದ ಬಸ್​ನಲ್ಲೇ ಸ್ನೇಹಿತನಿಗೆ ಹೊಡೆದು ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿ, ಚಿತ್ರಹಿಂಸೆ ನೀಡಿದ್ದರು. ಬಳಿಕ ಬಸ್​ನಿಂದ ಇಬ್ಬರನ್ನೂ ನಡುರಸ್ತೆಗೆ ತಳ್ಳಿ ಅತ್ಯಾಚಾರಿಗಳು ಪರಾರಿಯಾಗಿದ್ದರು. ಡಿಸೆಂಬರ್ 27ರಂದು ಸಂತ್ರಸ್ತೆಯನ್ನು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಏರ್ ಆ್ಯಂಬುಲೆನ್ಸ್ ಮೂಲಕ ಸ್ಥಳಾಂತರಿಸಲಾಯಿತು. ಆದ್ರೆ ಡಿ. 29ರಂದು ಚಿಕಿತ್ಸೆ ಫಲಿಸದೆ ಮಧ್ಯರಾತ್ರಿ 2.10ಕ್ಕೆ ಸಂತ್ರಸ್ತೆ ಮೃತಪಟ್ಟರು.

Published On - 5:10 pm, Tue, 7 January 20