ಸಿಎಂ ಬಿಎಸ್​ವೈ, ಡಿಕೆಶಿಗೆ ‘ಬೆನ್ನಿಗಾನಹಳ್ಳಿ’ ಕಂಟಕ, ಸುಪ್ರೀಂಕೋರ್ಟ್​ನಲ್ಲಿಂದು ಮೇಲ್ಮನವಿ ಅರ್ಜಿ ವಿಚಾರಣೆ

ಸಿಎಂ ಬಿಎಸ್​ವೈ, ಡಿಕೆಶಿಗೆ ‘ಬೆನ್ನಿಗಾನಹಳ್ಳಿ’ ಕಂಟಕ, ಸುಪ್ರೀಂಕೋರ್ಟ್​ನಲ್ಲಿಂದು ಮೇಲ್ಮನವಿ ಅರ್ಜಿ ವಿಚಾರಣೆ

ದೆಹಲಿ: ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಇಬ್ಬರು ರಾಜಕೀಯ ವೈರಿಗಳನ್ನು ಒಂದಾಗುವಂತೆ ಮಾಡಿದೆ.‌ ಮೊದಲ ಬಾರಿಗೆ ಸಿಎಂ ಆಗಿದ್ದಾಗ ಯಡಿಯೂರಪ್ಪ ಬೆನ್ನಿಗಾನಹಳ್ಳಿ ಬಳಿ 4.20 ಎಕರೆ ಜಮೀನು ಡಿನೋಟಿಫೈ ಮಾಡಿ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್​ಗೆ ಸಹಾಯವಾಗುವಂತೆ ಮಾಡಿದ್ರು. ಆದ್ರೀಗ ಇದೇ ಡಿನೋಟಿಫೈ ಕೇಸ್ ಒಳಸುಳಿಗೆ ಸಿಲುಕಿ ಇಬ್ಬರು ನಾಯಕರು ನಲುಗುತ್ತಿದ್ದಾರೆ. ಅಕ್ರಮ ಡಿನೋಟಿಫಿಕೇಷನ್ ಆರೋಪ ಎದುರಿಸುತ್ತಿರುವ ಯಡಿಯೂರಪ್ಪ ಹಾಗೂ ಡಿ.ಕೆ‌.ಶಿವಕುಮಾರ್ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.‌ ಸಾಮಾಜಿಕ‌ ಹೋರಾಟಗಾರ ಕಬ್ಬಾಳೆಗೌಡ ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆ ನಡೆಯಲಿದೆ.

ಇಂದು ‘ಸುಪ್ರೀಂ’ ವಿಚಾರಣೆ:
ಸುಪ್ರೀಂಕೋರ್ಟ್​ನಲ್ಲಿ ಮುಂದುವರಿದ ವಿಚಾರಣೆ ನಡೆಯಲಿದೆ. ಸಮಾಜಪರಿವರ್ತನ ಸಮುದಾಯದ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಾಡ್ತಿದ್ದಾರೆ. ಇತ್ತ ಯಡಿಯೂರಪ್ಪ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಪ್ರತಿವಾದ ಮಾಡ್ತಿದ್ದಾರೆ. ಡಿ.ಕೆ ಶಿವಕುಮಾರ್ ಪರವೂ ಮುಕುಲ್ ರೋಹಟಗಿ ವಾದ ಮಾಡುವ ಸಾಧ್ಯತೆ ಇದೆ. ಇಲ್ಲದಿದ್ರೆ ಡಿಕೆಶಿ ಪರ ಹಿರಿಯ ವಕೀಲರಾದ ಕಿಪಿಲ್ ಸಿಬಲ್‌ ಅಥವಾ ಅಭಿಷೇಕ್ ಮನುಸಿಂಘ್ವಿ ಪ್ರತಿವಾದ ಮಾಡಲಿದ್ದಾರೆ.

ನಿರಾಳರಾಗಿದ್ದ ಬಿಎಸ್​ವೈ, ಡಿಕೆಶಿಗೆ ಮತ್ತೆ ಟ್ರಬಲ್?
ಬೆನ್ನಿಗಾನಹಳ್ಳಿ ಡಿನೋಟಿಪೀಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬಾಳೆಗೌಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ರು. ಕಳೆದ ವರ್ಷ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಾಪಸ್ ಪಡೆದು ಕಬ್ಬಾಳೆಗೌಡ ಅಚ್ಚರಿ ಮೂಡಿಸಿದ್ರು. ಆದ್ರೆ, ಕಬ್ಬಾಳೆಗೌಡ ಅರ್ಜಿ ವಾಪಸ್ ಪಡೆದ ಬಳಿಕ, ಅರ್ಜಿ ವಾಪಸ್ ಪಡೆದುದ್ದನ್ನು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.‌ ಡಿ.ಕೆ.ಶಿವಕುಮಾರ್ ಯಡಿಯೂರಪ್ಪ ವಿರುದ್ಧದ ಅರ್ಜಿಯನ್ನು ನಾವು ಮುಂದುವರೆಸುತ್ತೇವೆ ಅಂತಾ ಸುಪ್ರೀಂಕೋರ್ಟ್​ನಲ್ಲಿ ಕೇಳಿಕೊಂಡಿದ್ರು. ಹೀಗಾಗಿ, ಸುಪ್ರೀಂಕೋರ್ಟ್ ವಿಚಾರಣೆ ಮುಂದುವರೆಸಲು ಅವಕಾಶ ನೀಡಿತ್ತು. ಈಗ ಮತ್ತೆ ಇಬ್ಬರು ನಾಯಕರಿಗೆ ಟ್ರಬಲ್ ಶುರುವಾಗಿದೆ.

ಒಟ್ನಲ್ಲಿ, ಒಂದು ಡಿನೋಟಿಫಿಕೇಷನ್ ಕೇಸ್ ಇಬ್ಬರು ರಾಜಕೀಯ ವೈರಿಗಳನ್ನು ಒಂದಾಗುವಂತೆ ಮಾಡಿತ್ತು. ಆದ್ರೀಗ ಇದೇ ಕೇಸ್​ನಿಂದ ಬಿಎಸ್​ವೈ ಮತ್ತು ಡಿಕೆಶಿಗೆ ಕಂಟಕ ಶುರುವಾಗಿದೆ. ಹೀಗಾಗಿ, ಸುಪ್ರೀಂಕೋರ್ಟ್​ನಲ್ಲಿ ಒಟ್ಟಾಗಿ ಹೋರಾಟ ಮಾಡ್ತಿದ್ದಾರೆ.

Click on your DTH Provider to Add TV9 Kannada