ಅಮೆರಿಕ, ಇರಾನ್ ಸಂಘರ್ಷ: ಗಗನಕ್ಕೇರಿದ ಚಿನ್ನದ ದರ
ಬೆಂಗಳೂರು: ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಷೇರುಮಾರುಕಟ್ಟೆ ನೆಲಕಚ್ಚಿದೆ. ದೇಶದಲ್ಲಿ ಬಂಗಾರದ ದರ ಏರಿಕೆಯಾಗಿದೆ. ಡಾಲರ್ ಬೆಲೆ ಹೆಚ್ಚಿರುವುದರಿಂದ ಚಿನ್ನದ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ ಮುಂದಿನ ದಿನಗಳಲ್ಲಿ ಮತ್ತೆ ಈ ಎರಡು ದೇಶಗಳ ನಡುವೆ ದಾಳಿ ನಡೆದರೆ ಚಿನ್ನದ ಬೆಲೆ ಮತ್ತಷ್ಟು ಗಗನಕ್ಕೇರಲಿದೆ. ರೂಪಾಯಿ ಮೌಲ್ಯ ಒಂದೇ ದಿನದಲ್ಲಿ 29 ಪೈಸೆ ಕುಸಿತ ಕಂಡಿದೆ. ದಿನದಿಂದ ದಿನಕ್ಕೆ ತೈಲ ಬೆಲೆಯೂ ಸಹ ಏರಿಕೆಯಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ […]
ಬೆಂಗಳೂರು: ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಷೇರುಮಾರುಕಟ್ಟೆ ನೆಲಕಚ್ಚಿದೆ. ದೇಶದಲ್ಲಿ ಬಂಗಾರದ ದರ ಏರಿಕೆಯಾಗಿದೆ. ಡಾಲರ್ ಬೆಲೆ ಹೆಚ್ಚಿರುವುದರಿಂದ ಚಿನ್ನದ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ ಮುಂದಿನ ದಿನಗಳಲ್ಲಿ ಮತ್ತೆ ಈ ಎರಡು ದೇಶಗಳ ನಡುವೆ ದಾಳಿ ನಡೆದರೆ ಚಿನ್ನದ ಬೆಲೆ ಮತ್ತಷ್ಟು ಗಗನಕ್ಕೇರಲಿದೆ.
ರೂಪಾಯಿ ಮೌಲ್ಯ ಒಂದೇ ದಿನದಲ್ಲಿ 29 ಪೈಸೆ ಕುಸಿತ ಕಂಡಿದೆ. ದಿನದಿಂದ ದಿನಕ್ಕೆ ತೈಲ ಬೆಲೆಯೂ ಸಹ ಏರಿಕೆಯಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ನಿಂತರೆ ಚಿನ್ನದ ಬೆಲೆ ಮತ್ತೆ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದೆ. ಸದ್ಯ 10 ಗ್ರಾಂ ಚಿನ್ನದ ದರ ಸರಾಸರಿ 1 ಸಾವಿರ ರೂಪಾಯಿ ಹೆಚ್ಚಳವಾಗಿದೆ. 22 ಕ್ಯಾರಟ್ ಚಿನ್ನದ ದರ 3,830 ರೂಪಾಯಿಯಾಗಿದೆ. 24 ಕ್ಯಾರಟ್ ಚಿನ್ನದ ದರ 4,100 ರೂಪಾಯಿಯಾಗಿದೆ. ಬೆಳ್ಳಿ ದರ ಪ್ರತಿ ಕೆಜಿ 48,600 ರೂಪಾಯಿಗೆ ಏರಿಕೆಯಾಗಿದೆ.
Published On - 1:42 pm, Mon, 6 January 20