ಬೆಂಗಳೂರಿನ ಬಿಡದಿಯಲ್ಲಿ ನನ್ನ ದೇಹ ಸಜೀವ ಸಮಾಧಿಯಾಗಲಿದೆ -ಇದು ನಿತ್ಯಾನಂದನ ಸ್ವಘೋಷಣೆ

| Updated By: KUSHAL V

Updated on: Aug 22, 2020 | 2:32 PM

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ತನ್ನದೇ ಆದಂಥ ಕೈಲಾಸ ದೇಶವನ್ನು ಘೋಷಣೆ ಮಾಡಿಕೊಂಡ ಬಳಿಕ ಈ ಸಂಗತಿ ಭಾರತದೆಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಇದೀಗ, ತನ್ನ ಸ್ವಘೋಷಿತ ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಎಂಬ ಬ್ಯಾಂಕನ್ನು ಸಹ ಸ್ಥಾಪಿಸಿದ್ದಾನೆ. ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿರುವ ನಿತ್ಯಾನಂದ ಇದೀಗ ಮತ್ತೊಂದು ದೇಶದೊಂದಿಗೆ ಒಪ್ಪಂದ ಮಾಡಿಕೊಂಡು, ಕೈಲಾಸ ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಎಂಬ ಬ್ಯಾಂಕನ್ನು ಗಣೇಶ ಚತುರ್ಥಿಯಂದು ಸ್ಥಾಪಿಸಿದ್ದಾನೆ. ಜೊತೆಗೆ ಒಂದಿಷ್ಟು ಹೇಳಿಕೆ ಬಿಡುಗಡೆ ಮಾಡಿರುವ ನಿತ್ಯಾನಂದ ತನ್ನೆಲ್ಲ […]

ಬೆಂಗಳೂರಿನ ಬಿಡದಿಯಲ್ಲಿ ನನ್ನ ದೇಹ ಸಜೀವ ಸಮಾಧಿಯಾಗಲಿದೆ -ಇದು ನಿತ್ಯಾನಂದನ ಸ್ವಘೋಷಣೆ
ನಿತ್ಯಾನಂದ ಸ್ವಾಮಿ
Follow us on

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ತನ್ನದೇ ಆದಂಥ ಕೈಲಾಸ ದೇಶವನ್ನು ಘೋಷಣೆ ಮಾಡಿಕೊಂಡ ಬಳಿಕ ಈ ಸಂಗತಿ ಭಾರತದೆಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಇದೀಗ, ತನ್ನ ಸ್ವಘೋಷಿತ ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಎಂಬ ಬ್ಯಾಂಕನ್ನು ಸಹ ಸ್ಥಾಪಿಸಿದ್ದಾನೆ.

ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿರುವ ನಿತ್ಯಾನಂದ ಇದೀಗ ಮತ್ತೊಂದು ದೇಶದೊಂದಿಗೆ ಒಪ್ಪಂದ ಮಾಡಿಕೊಂಡು, ಕೈಲಾಸ ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಎಂಬ ಬ್ಯಾಂಕನ್ನು ಗಣೇಶ ಚತುರ್ಥಿಯಂದು ಸ್ಥಾಪಿಸಿದ್ದಾನೆ.

ಜೊತೆಗೆ ಒಂದಿಷ್ಟು ಹೇಳಿಕೆ ಬಿಡುಗಡೆ ಮಾಡಿರುವ ನಿತ್ಯಾನಂದ ತನ್ನೆಲ್ಲ ಸಂಪತ್ತನ್ನು ತಮಿಳುನಾಡಿನ ತಿರುವಣ್ಣಾಮಲೈಗೆ ಸೇರುವಂತೆ ಮಾಡಿದ್ದಾನೆ. ಜೊತೆಗೆ, ನನ್ನ ದೇಹ ಬೆಂಗಳೂರಿನ ಬಿಡದಿಯಲ್ಲಿ ಸಜೀವ ಸಮಾಧಿಯಾಗಲಿದೆ ಎಂದು ಹೇಳಿಕೊಂಡಿದ್ದಾನೆ.

Published On - 2:26 pm, Sat, 22 August 20