ಬಿಹಾರ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಪ್ರಧಾನಿಯಾಗುವ ಬಯಕೆಯಿಂದ ಆರ್‌ಜೆಡಿ, ಕಾಂಗ್ರೆಸ್‌ನ ಮಡಿಲಲ್ಲಿ ಕುಳಿತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಹೇಳಿದ ಅಮಿತ್ ಶಾ, ನಿತೀಶ್ ಕುಮಾರ್‌ಗೆ ಯಾವುದೇ ಸಿದ್ಧಾಂತವಿಲ್ಲ ಎಂದಿದ್ದಾರೆ. 2014 ರಲ್ಲಿ, ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಕೇವಲ 2 ಲೋಕಸಭಾ ಸ್ಥಾನಗಳನ್ನು ಹೊಂದಿದ್ದರು, ‘ನಾ ಘರ್ ಕೆ ರಹೇ ಥೆ, ನಾ ಘಾಟ್ ಕೆ’. 2024 ರ ಲೋಕಸಭೆ ಚುನಾವಣೆ ಬರಲಿ, ಬಿಹಾರದ ಸಾರ್ವಜನಿಕರು ಲಾಲು-ನಿತೀಶ್ ಜೋಡಿಯನ್ನು ಅಳಿಸಿ ಹಾಕುತ್ತಾರೆ ಎಂದಿದ್ದಾರೆ ಶಾ. ಶುಕ್ರವಾರ ಪೂರ್ಣೆಯಾದಲ್ಲಿ ‘ಜನ ಭಾವನಾ ಮಹಾಸಭಾ’ದಲ್ಲಿ ಮಾತನಾಡುತ್ತಿದ್ದರವರು. ನಾವು ಸ್ವಾರ್ಥ ಮತ್ತು ಅಧಿಕಾರದ ಬದಲಿಗೆ ಸೇವೆ ಮತ್ತು ಅಭಿವೃದ್ಧಿಯ ರಾಜಕೀಯವನ್ನು ನಂಬುತ್ತೇವೆ. ಪ್ರಧಾನಿಯಾಗಬೇಕೆಂಬ ಆಸೆಯಿಂದ ನಿತೀಶ್ ಕುಮಾರ್ ಬೆನ್ನಿಗೆ ಚೂರಿ ಹಾಕಿದ್ದು, ಈಗ ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಮಡಿಲಲ್ಲಿ ಕುಳಿತಿದ್ದಾರೆ. ನಾವು ಪೂರ್ಣ ಬಹುಮತದೊಂದಿಗೆ 2025 ರ ಚುನಾವಣೆಯಲ್ಲಿ ಇಲ್ಲಿ ಅಧಿಕಾರಕ್ಕೆ ಬರಲಿದ್ದೇವೆ” ಎಂದು ಶಾ ಹೇಳಿದ್ದಾರೆ.
ಬಿಹಾರದ ಸಾರ್ವಜನಿಕರು ಸಿಎಂ ನಿತೀಶ್ ಕುಮಾರ್‌ಗೆ ಅನುಮಾನದ ಲಾಭವನ್ನು ಬಹಳ ಸಮಯದಿಂದ ನೀಡಿದರು. ಈಗ ಅವರಿಗೆ ತಿಳಿದಿದೆ, ಲಾಲು ಅವರ ಪಕ್ಷ ಅಥವಾ ನಿಮ್ಮ ಪಕ್ಷವು ಈ ಬಾರಿ ಬರುವುದಿಲ್ಲ. ಈ ಬಾರಿ ಬಿಹಾರದಲ್ಲಿ ಪ್ರಧಾನಿ ಮೋದಿಯವರ ಕಮಲ ಮಾತ್ರ ಅರಳಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.
ಬಿಹಾರದ ಸೀಮಾಂಚಲ್ ಪ್ರದೇಶಕ್ಕೆ ಎರಡು ದಿನಗಳ ಪ್ರವಾಸದಲ್ಲಿರುವ ಅಮಿತ್ ಶಾ ಪಕ್ಷ ಮತ್ತು ಆಡಳಿತ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.
#WATCH | Can Nitish babu become the PM by changing political alliances? He has betrayed many since he entered politics. Lalu ji, beware that Nitish babu might sit in Congress’s lap tomorrow leaving you behind: Union Home Minister & BJP leader Amit Shah at Purnea, Bihar pic.twitter.com/Iw2jPOYK6w
— ANI (@ANI) September 23, 2022
ಅಮಿತ್ ಶಾ ಭಾಷಣದ ಮುಖ್ಯಾಂಶಗಳು
Published On - 3:51 pm, Fri, 23 September 22