ಕಡಲ ಅಬ್ಬರ, ರಸ್ತೆ ಮೇಲೆ ನೀರು, ಸೈಲೆನ್ಸರ್ ಮೂತಿಗೆ ಪ್ಲಾಸ್ಟಿಕ್ ಬ್ಯಾಗ್: #ChennaiRain ಟ್ರೆಂಡಿಂಗ್​

| Updated By: ganapathi bhat

Updated on: Nov 24, 2020 | 6:52 PM

ಟ್ವಿಟರ್​ನಲ್ಲಿ #ChennaiRain ಹ್ಯಾಷ್​ಟ್ಯಾಗ್​ ಟ್ರೆಂಡ್ ಆಗಿದ್ದು ಜನರು ಮಳೆ ಅನಾಹುತದ ಮಾಹಿತಿ ಜೊತೆಗೆ ಮಳೆ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಯ ಚಿತ್ರ / ವಿಡಿಯೊಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.

ಕಡಲ ಅಬ್ಬರ, ರಸ್ತೆ ಮೇಲೆ ನೀರು, ಸೈಲೆನ್ಸರ್ ಮೂತಿಗೆ ಪ್ಲಾಸ್ಟಿಕ್ ಬ್ಯಾಗ್: #ChennaiRain ಟ್ರೆಂಡಿಂಗ್​
ಸಾಂದರ್ಭಿಕ ಚಿತ್ರ
Follow us on

ನಿವಾರ್ ಚಂಡಮಾರುತದ ಅಬ್ಬರ ಚೆನ್ನೈ ಮಹಾನಗರದಲ್ಲಿ ಈಗಾಗಲೇ ಕಾಣಿಸಿಕೊಂಡಿದೆ. ನಗರದಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಟ್ವಿಟರ್​ನಲ್ಲಿ #ChennaiRain ಹ್ಯಾಷ್​ಟ್ಯಾಗ್​ ಟ್ರೆಂಡ್ ಆಗಿದ್ದು ಜನರು ಮಳೆ ಅನಾಹುತದ ಮಾಹಿತಿ ಜೊತೆಗೆ ಮಳೆ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಯ ಚಿತ್ರ / ವಿಡಿಯೊಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.

ರಾಮ್​ ಎನ್ನುವವರು #ChennaiRain ಹ್ಯಾಷ್​ಟ್ಯಾಗ್​ನೊಂದಿಗೆ ಹಂಚಿಕೊಂಡಿರುವ ವಿಡಿಯೊ ವೈರಲ್ ಆಗಿದೆ. ಮಳೆಯಲ್ಲಿ ಸಾಗುತ್ತಿದ್ದ ವಾಹನಗಳ ಮೇಲೆ ಜಾಹೀರಾತು ಫಲಕವೊಂದು ಬೀಳುವ ದೃಶ್ಯ ಮೈ ಝುಂ ಎನ್ನಿಸುವಂತಿದೆ.

ಕೆಲವರು ಚಂಡಮಾರುತದ ಪ್ರಭಾವದಿಂದ ಕಡಲಿನಲ್ಲಿ ಕಾಣಿಸಿಕೊಂಡಿರುವ ಎತ್ತರದ ಅಲೆಗಳ ಅಬ್ಬದ ತುಣುಕುಗಳನ್ನು ಹಂಚಿಕೊಂಡಿದ್ದಾರೆ.

#CycloneNivar ಹ್ಯಾಷ್​ಟ್ಯಾಗ್​ನೊಂದಿಗೆ ಚೆನ್ನೈ ಕಡಲ ತೀರದಲ್ಲಿ ಆವರಿಸಿಕೊಂಡಿರುವ ಮೋಡದ ವಿಡಿಯೊ ಎಂಬ ಒಕ್ಕಣೆಯೊಂದಿಗೆ ಸಾವಿರಾರು ಮಂದಿ ಈ ವಿಡಿಯೊ ಟ್ವೀಟ್ ಮಾಡಿದ್ದಾರೆ.

ಚೆನ್ನೈನ ನುಂಗಾ ಪ್ರದೇಶವು ಮಳೆಯ ಮೊದಲ ಹೊಡೆತಕ್ಕೇ ನೀರಿನಿಂದ ಆವೃತ್ತವಾದ ವಿಡಿಯೊ ಹಂಚಿಕೊಂಡಿರುವ ಆಶಿಕ್ ಆರ್. 2015ರ ಮಳೆಯಿಂದ ನಾವು ಎಷ್ಟೆಲ್ಲಾ ಪಾಠ ಕಲಿತೆವು ಎಂದು ವ್ಯಂಗ್ಯವಾಡಿದ್ದಾರೆ.

ರಸ್ತೆಯ ಮೇಲೆ ಮಳೆನೀರು ಹರಿಯುತ್ತಿದೆ. ಮನೆಯಲ್ಲಿಯೇ ಕ್ಷೇಮವಾಗಿರಿ ಎಂದು ಲೆನಿನ್ ಎಲಮರನ್ ವಿಡಿಯೊ ಟ್ವೀಟ್ ಮಾಡಿದ್ದಾರೆ

ರಸ್ತೆಯ ಮೇಲೆ ಮಳೆ ನೀರು ಹರಿಯುವಾಗ ದ್ವಿಚಕ್ರವಾಹನಗಳ ಸೈಲೆನ್ಸರ್​ಗಳಿಗೆ ನೀರು ನುಗ್ಗಿ ವಾಹನಗಳು ಎಲ್ಲೆಂದರಲ್ಲಿ ನಿಲ್ಲುವುದು ಸಾಮಾನ್ಯ. ಇಂಥ ಸಂದರ್ಭ ಎದುರಿಸಲು ಚೆನ್ನೈನ ಜನರು ಒಂದು ಉಪಾಯ ಕಂಡುಕೊಂಡಿದ್ದಾರೆ. ಸೈಲೆನ್ಸರ್​ನ ಬಾಯಿಗೆ ಪ್ಲಾಸ್ಟಿಕ್ ಬ್ಯಾಗ್ ಕಟ್ಟಿರುವ ಚಿತ್ರಗಳನ್ನು ಹಲವರು ಟ್ವೀಟ್ ಮಾಡಿದ್ದಾರೆ.