Niyaz Khan: ಮುಸ್ಲಿಮರು ಸಸ್ಯಾಹಾರಿಯಾಗಬೇಕು, ಬ್ರಾಹ್ಮಣ ಪರ ನಿಂತ ಐಎಎಸ್ ಅಧಿಕಾರಿ ನಿಯಾಜ್ ಖಾನ್

|

Updated on: Jun 10, 2023 | 2:25 PM

ಮಧ್ಯಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ನಿಯಾಜ್ ಖಾನ್ ಭಾರತದಲ್ಲಿ ನಡೆಯುತ್ತಿರುವ ಧಾರ್ಮಿಕ ಮತಾಂತರಕ್ಕೆ ಬಾಲಿವುಡ್ ಕಾರಣ ಎಂದು ಹೇಳಿದ್ದಾರೆ

Niyaz Khan: ಮುಸ್ಲಿಮರು ಸಸ್ಯಾಹಾರಿಯಾಗಬೇಕು, ಬ್ರಾಹ್ಮಣ ಪರ ನಿಂತ ಐಎಎಸ್ ಅಧಿಕಾರಿ ನಿಯಾಜ್ ಖಾನ್
ನಿಯಾಜ್ ಖಾನ್
Follow us on

ಭಾರತದಲ್ಲಿ ನಡೆಯುತ್ತಿರುವ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಭಾರತೀಯ ಆಡಳಿತ ಸೇವೆಯ ಅಧಿಕಾರಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಐಎಎಸ್ (IAS) ಅಧಿಕಾರಿ, ನಿಯಾಜ್ ಖಾನ್ (Niyaz Khan) ಅವರು ಸಾಹಿತ್ಯ ಕ್ಷೇತ್ರದಲ್ಲಿ ಹೆಸರುವಾಸಿ, ಅವರು ಭಾರತದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಧಾರ್ಮಿಕ ಮತಾಂತರಗಳ ಬಗ್ಗೆ ಮಾತನಾಡಿದ್ದಾರೆ. ಮಧ್ಯಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ನಿಯಾಜ್ ಖಾನ್ ಭಾರತದಲ್ಲಿ ನಡೆಯುತ್ತಿರುವ ಧಾರ್ಮಿಕ ಮತಾಂತರಕ್ಕೆ ಬಾಲಿವುಡ್ ಕಾರಣ ಎಂದು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ANI ಉಲ್ಲೇಖಿಸಿದೆ. ಮತಾಂತರದ ವಿಷಯದ ಬಗ್ಗೆ ನಿಯಾಜ್ ಖಾನ್ ಅವರು ಟ್ವೀಟ್ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಅವರು ಮುಸ್ಲಿಂ ಬಾಂಧವರು ಹಸುಗಳನ್ನು ಸಾಕಬೇಕು ಮತ್ತು ಸಸ್ಯಾಹಾರವನ್ನು ನಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಮುಸ್ಲಿಮೇತರರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವಂತೆ ಒತ್ತಾಯಿಸಬಾರದು ಎಂದು ಹೇಳಿದರು. ಈ ಕುರಿತು ಹಲವು ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

ಐಎಎಸ್ ಅಧಿಕಾರಿ ನಿಯಾಜ್ ಖಾನ್ ಯಾರು?

ನಿಯಾಜ್ ಖಾನ್ ಮಧ್ಯಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ. ಅನೇಕ ಸಂಘಟನೆಗಳು ಮುಸ್ಲಿಂ ಧರ್ಮವನ್ನು ಕೆಟ್ಟದಾಗಿ ಚಿತ್ರಿಸುತ್ತಿದ್ದಾರೆ. ಇಸ್ಲಾಂ ಧರ್ಮದ ಪ್ರತಿಷ್ಠೆಯನ್ನು ಹಾಳು ಮಾಡಿವೆ ಎಂದು ಅವರು ಹೇಳಿದ್ದಾರೆ. ನಿಯಾಜ್ ಖಾನ್ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅನೇಕ ಇಂತಹ ಧರ್ಮ ವಿಚಾರವಾಗಿ ಪುಸ್ತಕಗಳನ್ನು ಬರೆದಿದ್ದಾರೆ. ಕಳೆದ ವರ್ಷ ಕಾಶ್ಮೀರ ಫೈಲ್ಸ್ ಚಿತ್ರದ ಕುರಿತಾದ ಟೀಕೆಯಿಂದ ಅವರ ಬಗ್ಗೆ ಅಕ್ರೋಶ ಕೂಡ ವ್ಯಕ್ತವಾಗಿತ್ತು.

ಈ ಹಿಂದೆ ನಿಯಾಜ್ ಖಾನ್ ತಮ್ಮ ಉಪನಾಮದ ಬಗ್ಗೆ ಟ್ವೀಟ್ ಮಾಡಿದ್ದರು. 2019ರಲ್ಲಿ, ತಮ್ಮ ಹೆಸರಿನಿಂದ ತಮ್ಮ ಸೇವೆಗೂ ಕೂಡ ತೊಂದರೆ ಆಗಿತ್ತು ಎಂದು ಹೇಳಿದ್ದರು. ನನ್ನ ಉಪನಾಮವು ಭೂತದಂತೆ ಕಾಡುತ್ತಿದೆ ಎಂದು ಬರೆದಿದ್ದಾರೆ. ನಿಯಾಜ್ ಖಾನ್ ಅವರು ಹಿಜಾಬ್ ವಿವಾದದ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಿದರು ಮತ್ತು ಹಿಜಾಬ್ ನಮ್ಮ ಜೀವನವನ್ನು ರಕ್ಷಿಸುತ್ತದೆ ಹಾಗೂ ಮಾಲಿನ್ಯದಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ಬರೆದಿದ್ದಾರೆ.

ಇದನ್ನೂ ಓದಿ:‘ದಿ ಕಾಶ್ಮೀರ್ ಫೈಲ್ಸ್​​’ನಿಂದ ಬಂದ ಹಣವನ್ನೆಲ್ಲಾ ದಾನ ಮಾಡಿ ಎಂದ ಐಎಎಸ್ ಆಫೀಸರ್; ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ಏನು?

ಬ್ರಾಹ್ಮಿನ್ ದಿ ಗ್ರೇಟ್, ಇದು ಬ್ರಾಹ್ಮಣರ ಮೇಲಿನ ಅಭಿಮಾನ

ನಿಯಾಜ್ ಖಾನ್ ಇದುವರೆಗೆ ಎಂಟು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅವರ ಇತ್ತೀಚಿನ ಪುಸ್ತಕ ‘ಬ್ರಾಹ್ಮಿನ್ ದಿ ಗ್ರೇಟ್’ ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು. ತಮ್ಮ ಪುಸ್ತಕದಲ್ಲಿ ಬ್ರಾಹ್ಮಣರಿಗೆ ಸೂಪರ್ ಬ್ರೈನ್ ಇದೆ ಎಂದು ಬರೆದಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಬ್ರಾಹ್ಮಣರಿಗೆ ಬೌದ್ಧಿಕ ನಾಯಕತ್ವ ನೀಡಿದರೆ, ಸಲಹೆಗಾರರನ್ನಾಗಿ ಮಾಡಿದರೆ ದೇಶದೊಳಗೆ ಸುಧಾರಣೆ ಸಾಧ್ಯ, ಇದು ಒಂದು ಕ್ರಾಂತಿಕಾರಿ ಬದಲಾವಣೆ ಎಂದು ಈ ಪುಸ್ತಕದಲ್ಲಿ ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:19 pm, Sat, 10 June 23