ಮಸೀದಿಯ 100 ಮೀ ಸುತ್ತಮುತ್ತ ಹನುಮಾನ್ ಚಾಲೀಸಾ ಪಠಣಕ್ಕೆ ಅವಕಾಶ ಕೊಡಲ್ಲ ಎಂದ ಮಹಾರಾಷ್ಟ್ರ ಪೊಲೀಸರು! ಮುಂದೇನು?

| Updated By: ಸಾಧು ಶ್ರೀನಾಥ್​

Updated on: Apr 18, 2022 | 3:17 PM

"ಮೇ 1 ರಂದು, ನಾನು ಔರಂಗಾಬಾದ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತೇನೆ. ಜೂನ್ 5 ರಂದು, ನಾನು MNS ಸ್ವಯಂಸೇವಕರೊಂದಿಗೆ ದರ್ಶನಕ್ಕಾಗಿ ಅಯೋಧ್ಯೆಗೆ ಭೇಟಿ ನೀಡುತ್ತೇನೆ. ನಾನು ಅಯೋಧ್ಯೆಗೆ ಬರುವಂತೆ ಇತರರಿಗೆ ಮನವಿ ಮಾಡುತ್ತೇನೆ" ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

ಮಸೀದಿಯ 100 ಮೀ ಸುತ್ತಮುತ್ತ ಹನುಮಾನ್ ಚಾಲೀಸಾ ಪಠಣಕ್ಕೆ ಅವಕಾಶ ಕೊಡಲ್ಲ ಎಂದ ಮಹಾರಾಷ್ಟ್ರ ಪೊಲೀಸರು! ಮುಂದೇನು?
ಮಸೀದಿಯ 100 ಮೀಟರ್ ವ್ಯಾಪ್ತಿಯಲ್ಲಿ ಹನುಮಾನ್ ಚಾಲೀಸಾ ಪಠಣಕ್ಕೆ ಅವಕಾಶ ಕೊಡಲ್ಲ ಎಂದ ಮಹಾರಾಷ್ಟ್ರ ಪೊಲೀಸರು
Follow us on

ಮಹಾರಾಷ್ಟ್ರದಲ್ಲಿ ಆಜಾನ್ ಗೆ ವಿರುದ್ಧವಾಗಿ ದೇವಾಲಯದ ಮೈಕ್ ಗಳ ಮುಖಾಂತರ ಹನುಮಾನ್ ಚಾಲೀಸಾ ಪಠಣ ಮಾಡುವುದಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದರು. ಇದಾದ ಬಳಿಕ ಮಹಾರಾಷ್ಟ್ರದಲ್ಲಿ ಸಮಸ್ಯೆ ಬಿಗಡಾಯಿಸಿದೆ. ಈಗ ಮೈಕ್ ಗಳಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಲು ಪೊಲೀಸರಿಂದ ಅನುಮತಿ ತೆಗೆದುಕೊಳ್ಳಬೇಕೆಂದು ನಾಸಿಕ್ ಪೊಲೀಸ್ ಕಮೀಷನರ್ ಹೇಳಿದ್ದಾರೆ. ಮಸೀದಿಯ ನೂರು ಮೀಟರ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಹನುಮಾನ್ ಚಾಲೀಸಾ ಪಠಣಕ್ಕೆ ಅವಕಾಶ ಕೊಡಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಹನುಮಾನ್ ಚಾಲೀಸಾ ಪಠಣದ ಮೈಕ್‌ಗೆ ಅನುಮತಿ ಪಡೆಯಿರಿ
ಮುಸ್ಲಿಂರ ಪ್ರಾರ್ಥನೆ ಆಜಾನ್ ಕುರಿತು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ತೀಕ್ಷ್ಣವಾದ ಕಾಮೆಂಟ್‌ಗಳ ನಡುವೆ, ಮಹಾರಾಷ್ಟ್ರ ಗೃಹ ಇಲಾಖೆ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಕುರಿತು ಹಿಂದಿನ ನ್ಯಾಯಾಲಯದ ಆದೇಶಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ರಾಜ್ಯ ಸರ್ಕಾರ ಈಗ ಧಾರ್ಮಿಕ ಸ್ಥಳಗಳಿಗೆ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರು ಇಂದು ಪೊಲೀಸ್ ಮಹಾನಿರ್ದೇಶಕರೊಂದಿಗೆ ಸಭೆ ನಡೆಸಲಿದ್ದು, ಈ ನಿರ್ಧಾರದ ಕುರಿತು ಎಲ್ಲಾ ಪೊಲೀಸ್ ಆಯುಕ್ತರು ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸೂಚನೆ ನೀಡಲಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯ ವಿಷಯದ ಬಗ್ಗೆ ಚರ್ಚಿಸಲು ಸಭೆ ನಡೆಸಲಿದ್ದಾರೆ.

ದೀಲೀಪ್‌ ಪಾಟೀಲ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆ ಕುರಿತು ಮುಂದಿನ 1-2 ದಿನಗಳಲ್ಲಿ ಮಾರ್ಗಸೂಚಿ ಹೊರಡಿಸಲಾಗುವುದು. “ನಾವು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಮೇಲೆ ಕಣ್ಣಿಟ್ಟಿದ್ದೇವೆ. ರಾಜ್ಯದಲ್ಲಿ ಶಾಂತಿ ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಗೃಹ ಸಚಿವ ದೀಲೀಪ್ ವಾಲ್ಸೆ ಪಾಟೀಲ್ ಹೇಳಿದ್ದಾರೆ.

ನಾಸಿಕ್ ಪೊಲೀಸರು ಈಗಾಗಲೇ ಧ್ವನಿವರ್ಧಕಗಳ ಅನುಮತಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಆದೇಶವನ್ನು ಹೊರಡಿಸಿದ್ದಾರೆ. ಆದೇಶದ ಅನುಷ್ಠಾನಕ್ಕಾಗಿ ಜಿಲ್ಲಾಡಳಿತಗಳೊಂದಿಗೆ ಪರಿಶೀಲನಾ ಸಭೆ ನಡೆಸುವಂತೆ ಮಹಾರಾಷ್ಟ್ರ ಡಿಜಿಪಿಗೆ ಸೂಚಿಸಲಾಗಿದೆ.

ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ಅಥವಾ ಭಜನೆ ನುಡಿಸಲು ಅನುಮತಿ ತೆಗೆದುಕೊಳ್ಳಬೇಕು. ಆಜಾನ್ ಕೂಗುವುದರ ಮೊದಲು ಮತ್ತು ನಂತರದ 15 ನಿಮಿಷಗಳಲ್ಲಿ ಹನುಮಾನ್ ಚಾಲೀಸಾ ಅಥವಾ ಭಜನೆಗೆ ಅನುಮತಿ ನೀಡುವುದಿಲ್ಲ ಎಂದು ನಾಸಿಕ್‌ನ ಪೊಲೀಸ್ ಕಮಿಷನರ್ ದೀಪಕ್ ಪಾಂಡೆ ತಿಳಿಸಿದ್ದಾರೆ. “ಮಸೀದಿಯ 100 ಮೀಟರ್ ಒಳಗೆ ಹನುಮಾನ್ ಚಾಲೀಸಾ, ಭಜನೆಯ ಮೈಕ್‌ಗೆ ಅನುಮತಿ ನೀಡಲ್ಲ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಈ ಆದೇಶದ ಗುರಿಯಾಗಿದೆ” ಎಂದು ನಾಸಿಕ್ ಪೊಲೀಸ್ ಕಮೀಷನರ್ ದೀಪಕ್ ಪಾಂಡೆ ಹೇಳಿದ್ದಾರೆ.

ಮೇ 3 ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ “ಹಿಂದೂ ಸಹೋದರರು” “ಸಿದ್ಧರಾಗಿರಿ” ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನಾಯಕ ರಾಜ್ ಠಾಕ್ರೆ ಹೇಳಿದ್ದಾರೆ. ಹಿಂದುತ್ವಕ್ಕಾಗಿ ಧ್ವನಿ ಎತ್ತಿದ ನಂತರ ಧ್ವನಿವರ್ಧಕ ಬಳಕೆಯ ಮೇಲಿನ ಗಲಾಟೆ ಉಲ್ಬಣಗೊಂಡಿತು.

ಆದಾಗ್ಯೂ, ಭಾನುವಾರ, ರಾಜ್‌ ಠಾಕ್ರೆ ಧ್ವನಿವರ್ಧಕಗಳು ‘ಆಜಾನ್’ ಕರೆಯನ್ನು ಪ್ರಸಾರ ಮಾಡುವುದು ಧಾರ್ಮಿಕ ವಿಷಯಕ್ಕಿಂತ ಸಾಮಾಜಿಕ ಸಮಸ್ಯೆಯಾಗಿದೆ ಎಂದು ಹೇಳಿದರು. ಪುಣೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಕದಡುವುದನ್ನು ಬಯಸುವುದಿಲ್ಲ, ಆದರೆ ಧ್ವನಿವರ್ಧಕಗಳ ಬಳಕೆಯನ್ನು ಮುಂದುವರೆಸಿದರೆ ಮುಸ್ಲಿಮರು ಧ್ವನಿವರ್ಧಕದಲ್ಲಿ ನಮ್ಮ ಪ್ರಾರ್ಥನೆಯನ್ನು ಕೇಳಬೇಕಾಗುತ್ತದೆ.

“ಮೇ 1 ರಂದು, ನಾನು ಔರಂಗಾಬಾದ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತೇನೆ. ಜೂನ್ 5 ರಂದು, ನಾನು MNS ಸ್ವಯಂಸೇವಕರೊಂದಿಗೆ ದರ್ಶನಕ್ಕಾಗಿ ಅಯೋಧ್ಯೆಗೆ ಭೇಟಿ ನೀಡುತ್ತೇನೆ. ನಾನು ಅಯೋಧ್ಯೆಗೆ ಬರುವಂತೆ ಇತರರಿಗೆ ಮನವಿ ಮಾಡುತ್ತೇನೆ” ಎಂದು ರಾಜ್‌ ಠಾಕ್ರೆ ಹೇಳಿದರು.

Published On - 3:13 pm, Mon, 18 April 22