NEET 2021 ಪರೀಕ್ಷೆ ರದ್ದಾಗುವುದಿಲ್ಲ; ಕೇಂದ್ರ ಸರ್ಕಾರದ ಸ್ಪಷ್ಟನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 10, 2020 | 8:32 PM

JEE 2020 ಪರೀಕ್ಷೆಯನ್ನು ಆನ್​ಲೈನ್​ನಲ್ಲೇ ನಡೆಸಲಾಗಿತ್ತು. ನೀಟ್​​ ಪರೀಕ್ಷೆಯನ್ನು ಲಿಖಿತ ರೂಪದಲ್ಲಿ ನಡೆಸಲಾಗಿತ್ತು. ಈ ಮಧ್ಯೆ ಎಲ್ಲ ಪರೀಕ್ಷೆಗಳನ್ನು ಆನ್​ಲೈನ್​ನಲ್ಲೇ ನಡೆಸಿ ಎನ್ನುವ ಆಗ್ರಹ ಕೇಳಿ ಬಂದಿತ್ತು.

NEET 2021 ಪರೀಕ್ಷೆ ರದ್ದಾಗುವುದಿಲ್ಲ; ಕೇಂದ್ರ ಸರ್ಕಾರದ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್​​)​ ಕೇಂದ್ರ ಸರ್ಕಾರ ರದ್ದು ಮಾಡಲಿದೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ನೀಟ್ ಪರೀಕ್ಷೆ ರದ್ದು ಮಾಡುವ ಯಾವುದೇ ಆಲೋಚನೆ ಇಲ್ಲ ಎಂದು ಹೇಳಿದೆ.

ವಿದ್ಯಾರ್ಥಿಗಳ ಜೊತೆ ಆನ್​ಲೈನ್ ಸಂವಾದ ನಡೆಸಿದ ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಕ್ರಿಯಾಲ್, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. 2021ರ ನೀಟ್​ ಪರೀಕ್ಷೆ ರದ್ದಾಗಲಿದೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಸರ್ಕಾರ ಆ ರೀತಿ ನಿರ್ಧಾರ ಕೈಗೊಳ್ಳುತ್ತಿಲ್ಲ. ಮುಂದಿನ ವರ್ಷ ನೀಟ್​ ಪರೀಕ್ಷೆ ನಡೆಯುತ್ತದೆ. ಇದನ್ನು ರದ್ದು ಮಾಡಿದರೆ ವಿದ್ಯಾರ್ಥಿ ಸಮುದಾಯ ಹಾಗೂ ದೇಶಕ್ಕೆ ಭಾರೀ ನಷ್ಟ ಉಂಟಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

JEE 2020 ಪರೀಕ್ಷೆಯನ್ನು ಆನ್​ಲೈನ್​ನಲ್ಲೇ ನಡೆಸಲಾಗಿತ್ತು. ನೀಟ್​​ ಪರೀಕ್ಷೆಯನ್ನು ಲಿಖಿತ ರೂಪದಲ್ಲಿ ನಡೆಸಲಾಗಿತ್ತು. ಈ ಮಧ್ಯೆ ಎಲ್ಲ ಪರೀಕ್ಷೆಗಳನ್ನು ಆನ್​ಲೈನ್​ನಲ್ಲೇ ನಡೆಸಿ ಎನ್ನುವ ಆಗ್ರಹ ಕೇಳಿ ಬಂದಿತ್ತು. ಈ ಬಗ್ಗೆ ಮಾತನಾಡಿರುವ ಅವರು, ಮುಂದಿನ ದಿನಗಳಲ್ಲಿ ಪರೀಕ್ಷೆಗಳನ್ನು ಆನ್​ಲೈನ್​ನಲ್ಲೇ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದರು.

ಪಠ್ಯಕ್ರಮದಲ್ಲಿ ಬದಲಾವಣೆ?

JEE ಹಾಗೂ ನೀಟ್​ ಪಠ್ಯಕ್ರಮ ಮತ್ತು ಪರೀಕ್ಷಾ ವಿಧಾನದಲ್ಲಿ ಬದಲಾವಣೆ ಅಗತ್ಯವಿದೆ ಎಂದು ಕಂಡು ಬಂದರೆ ನಾವದನ್ನು ಮಾಡುತ್ತೇವೆ. 2021ರ ಸಿಬಿಎಸ್​ಇ ಪರೀಕ್ಷಾ ದಿನಾಂಕವನ್ನು ನಿಗದಿಗಿಂತಲೂ ಮೊದಲೇ ಘೋಷಣೆ ಮಾಡುತ್ತೇವೆ ಎಂದು ರಮೇಶ್​ ಪೋಕ್ರಿಯಾಲ್ ತಿಳಿಸಿದರು.

ಕೊರೊನಾ ಕರಾಳತೆ, ನೀಟ್​ಗೆ ಅಡ್ಡಿ: ವಿದ್ಯಾರ್ಥಿನಿಗೆ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವರ ನೆರವು