Wrestlers Protest: ಇಂಡಿಯಾ ಗೇಟ್‌ನಲ್ಲಿ ಕುಸ್ತಿಪಟುಗಳ ಪ್ರತಿಭಟನೆಗೆ ಅವಕಾಶವಿಲ್ಲ: ದೆಹಲಿ ಪೊಲೀಸ್

|

Updated on: May 30, 2023 | 8:03 PM

ಯಾವುದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಬೇಕಾದರೆ ಕುಸ್ತಿಪಟುಗಳು ಅನುಮತಿ ಪಡೆಯಬೇಕಾಗುತ್ತದೆ ಎಂದು ದೆಹಲಿಯ ಉಪ ಪೊಲೀಸ್ ಆಯುಕ್ತ ಸುಮನ್ ನಲ್ವಾ ಹೇಳಿದ್ದಾರೆ. ಇದಕ್ಕೂ ಮೊದಲು, ಕುಸ್ತಿಪಟುಗಳನ್ನು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಭಾನುವಾರ ಅಲ್ಲಿಂದ ಅವರನನ್ನು ತೆರವು ಮಾಡಲಾಗಿದೆ.

Wrestlers Protest: ಇಂಡಿಯಾ ಗೇಟ್‌ನಲ್ಲಿ ಕುಸ್ತಿಪಟುಗಳ ಪ್ರತಿಭಟನೆಗೆ ಅವಕಾಶವಿಲ್ಲ: ದೆಹಲಿ ಪೊಲೀಸ್
ಪ್ರತಿಭಟನಾ ನಿರತ ಪ್ರತಿಭಟನಾಕಾರರು
Follow us on

ದೆಹಲಿ: ಹಲವಾರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕುಸ್ತಿ ಸಂಸ್ಥೆಯ (WFI) ಮುಖ್ಯಸ್ಥರ ವಿರುದ್ಧ ಪ್ರತಿಭಟಿಸುತ್ತಿರುವ ಕುಸ್ತಿಪಟುಗಳು (Wrestlers Protest), ತಮ್ಮ ಪದಕಗಳನ್ನು ಗಂಗಾ ನದಿಗೆ ಬಿಸಾಡಲು ಹರಿದ್ವಾರಕ್ಕೆ ತೆರಳಿದ್ದಾರೆ. ಪದಕಗಳನ್ನು ಗಂಗಾ ನದಿಗೆ ಬಿಸಾಡಿದ ನಂತರ ಇಂಡಿಯಾ ಗೇಟ್ (India Gate)ಬಳಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ. ಆದರೆ ಅಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಇಂಡಿಯಾ ಗೇಟ್ ಪ್ರತಿಭಟನಾ ಸ್ಥಳವಲ್ಲ. ನಾವು ಅವರಿಗೆ (ಕುಸ್ತಿಪಟುಗಳು) ಅಲ್ಲಿ ಪ್ರತಿಭಟಿಸಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ಮೂಲವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಯಾವುದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಬೇಕಾದರೆ ಕುಸ್ತಿಪಟುಗಳು ಅನುಮತಿ ಪಡೆಯಬೇಕಾಗುತ್ತದೆ ಎಂದು ದೆಹಲಿಯ ಉಪ ಪೊಲೀಸ್ ಆಯುಕ್ತ ಸುಮನ್ ನಲ್ವಾ ಹೇಳಿದ್ದಾರೆ. ಇದಕ್ಕೂ ಮೊದಲು, ಕುಸ್ತಿಪಟುಗಳನ್ನು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಭಾನುವಾರ ಅಲ್ಲಿಂದ ಅವರನನ್ನು ತೆರವು ಮಾಡಲಾಗಿದೆ.

ಈ ಪದಕಗಳು ನಮ್ಮ ಬದುಕು ಮತ್ತು ಆತ್ಮ. ಅವಳು ಗಂಗಾ ಮಾತೆ ಎಂಬ ಕಾರಣದಿಂದ ನಾವು ಅವುಗಳನ್ನು ಗಂಗಾದಲ್ಲಿ ಹರಿಬಿಡಲಿದ್ದೇವೆ. ನಂತರ ಬದುಕಲು ಯಾವುದೇ ಅರ್ಥವಿಲ್ಲ, ಆದ್ದರಿಂದ ನಾವು ಇಂಡಿಯಾ ಗೇಟ್‌ನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಹೇಳಿದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಹಿಂದಿಯಲ್ಲಿ ಬರೆದ ಹೇಳಿಕೆಯನ್ನು ಟ್ವೀಟ್ ಮಾಡಿದ್ದು, ಇದೇ ಹೇಳಿಕೆಯನ್ನು ಇತರ ಪ್ರತಿಭಟನಾ ನಿರತ ಕುಸ್ತಿಪಟುಗಳೂ ಹಂಚಿಕೊಂಡಿದ್ದಾರೆ.

ಮಹಿಳಾ ಕುಸ್ತಿಪಟುಗಳು ಈ ದೇಶದಲ್ಲಿ ಅವರಿಗೆ ಏನೂ ಉಳಿದಿಲ್ಲ. ವ್ಯವಸ್ಥೆಯು ನಮ್ಮನ್ನು ತುಂಬಾ ಕೀಳಾಗಿ ಕಂಡಿದೆ ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.  ಭಾನುವಾರ, ಕುಸ್ತಿಪಟುಗಳು ಮತ್ತು ಅವರ ಬೆಂಬಲಿಗರು ಯೋಜಿತ ಮಹಿಳಾ ‘ಮಹಾಪಂಚಾಯತ್’ ಗಾಗಿ ಹೊಸ ಸಂಸತ್ ಭವನದ ಕಡೆಗೆ ತಮ್ಮ ಮೆರವಣಿಗೆಗೆ ಮುಂಚಿತವಾಗಿ ಭದ್ರತಾ ಕವಚವನ್ನು ಉಲ್ಲಂಘಿಸಿದಾಗ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದರು. ಪೊಲೀಸರು ಅವರನ್ನು ಎಳೆದಾಡಿ ಬಲವಂತವಾಗಿ ವ್ಯಾನ್ ಒಳಗೆ ನೂಕಿದ್ದರು.

ಇದನ್ನೂ ಓದಿ: ಗಂಗಾದಲ್ಲಿ ಪದಕ ಬಿಸಾಡಲು ಬರುವ ಕುಸ್ತಿಪಟುಗಳನ್ನು ನಾವು ತಡೆಯುವುದಿಲ್ಲ: ಹರಿದ್ವಾರ ಪೊಲೀಸರು

ಗಲಭೆ, ಕಾನೂನುಬಾಹಿರ ಸಭೆ ಮತ್ತು ಸಾರ್ವಜನಿಕ ಸೇವಕಿಯ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿಪಡಿಸಿದ್ದಕ್ಕಾಗಿ ಕುಸ್ತಿಪಟುಗಳನ್ನು ಬಂಧಿಸಿ, ಅದೇ ಆರೋಪ ಹೊರಿಸಲಾಗಿತ್ತು. ಬಿಜೆಪಿ ಸಂಸದರೂ ಆಗಿರುವ ಕುಸ್ತಿ ಸಂಸ್ಥೆಯ ಮುಖ್ಯಸ್ಥ ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳು ಏಪ್ರಿಲ್ 23 ರಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ