ಸಂಸತ್ ಚಳಿಗಾಲದ ಅಧಿವೇಶನ ರದ್ದು: ಕೊರೊನಾ ಕಾರಣ ನೀಡಿದ ಪ್ರಲ್ಹಾದ ಜೋಶಿ

ಈ‌ ಬಾರಿ ಚಳಿಗಾಲದ ಸಂಸತ್ ಅಧಿವೇಶನ ರದ್ದಾಗಿದೆ. ಕೊರೊನಾ ಸೋಂಕಿನಿಂದ ಈ ಬಾರಿ ಚಳಿಗಾಲದ ಅಧಿವೇಶನ ನಡೆಯುವುದಿಲ್ಲವೆಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್‌ ಚೌಧರಿಗೆಯವರಿಗೆ ತಿಳಿಸಿದ್ದಾರೆ.

ಸಂಸತ್ ಚಳಿಗಾಲದ ಅಧಿವೇಶನ ರದ್ದು: ಕೊರೊನಾ ಕಾರಣ ನೀಡಿದ ಪ್ರಲ್ಹಾದ ಜೋಶಿ
ಪ್ರಾತಿನಿಧಿಕ ಚಿತ್ರ

Updated on: Dec 15, 2020 | 3:32 PM

ದೆಹಲಿ: ಈ‌ ಬಾರಿ ಚಳಿಗಾಲದ ಸಂಸತ್ ಅಧಿವೇಶನ ರದ್ದಾಗಿದೆ. ಕೊರೊನಾ ಸೋಂಕಿನಿಂದ ಈ ಬಾರಿ ಚಳಿಗಾಲದ ಅಧಿವೇಶನ ನಡೆಯುವುದಿಲ್ಲವೆಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಲೋಕಸಭೆಯ ಕಾಂಗ್ರೆಸ್ ನಾಯಕ, ಅಧೀರ್ ರಂಜನ್‌ ಚೌಧರಿಗೆಯವರಿಗೆ ತಿಳಿಸಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಯದ ಕಾರಣ ಈ ಸಲ ಚಳಿಗಾಲದ ಅಧಿವೇಶನ ನಡೆಸುವುದಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವರು ತಿಳಿಸಿದ್ದಾರೆ. ದೆಹಲಿಯಲ್ಲಿ ಗಣನೀಯ ಚಳಿಯಿದ್ದು, ಕೊರೊನಾ ಸೋಂಕು ಹೆಚ್ಚುವ ಸಂಭವವೂ ಇದೆ. ಫೆಬ್ರವರಿಯಲ್ಲಿ ಬಜೆಟ್ ಅಧಿವೇಶನ ನಡೆಯಲಿದ್ದು, ಒಟ್ಟಿಗೆ ಎರಡೂ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಂಸತ್ತಿನ ಹೊಸ ಭವನಕ್ಕೆ ಶಿಲಾನ್ಯಾಸ ಮಾಡಲು ಮುಹೂರ್ತ ಫಿಕ್ಸ್

Published On - 3:01 pm, Tue, 15 December 20