ಕೇಬಲ್ ತುಂಡಾಗಿ ಮಹಡಿಗಳ ಮಧ್ಯೆ ಸಿಲುಕಿದ ಲಿಫ್ಟ್​, ಹೃದಯ ಸ್ತಂಭನದಿಂದ ಮಹಿಳೆ ಸಾವು

|

Updated on: Aug 04, 2023 | 9:03 AM

ವಸತಿ ಸಮುಚ್ಛಯವೊಂದರ ಲಿಫ್ಟ್​ನ ಕೇಬಲ್ ತುಂಡಾಗಿ ಒಳಗೆ ಸಿಲುಕಿದ್ದ ಮಹಿಳೆ ಹೃದಯಸ್ತಂಭನದಿಂದ ಮೃತಪಟ್ಟಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

ಕೇಬಲ್ ತುಂಡಾಗಿ ಮಹಡಿಗಳ ಮಧ್ಯೆ ಸಿಲುಕಿದ ಲಿಫ್ಟ್​, ಹೃದಯ ಸ್ತಂಭನದಿಂದ ಮಹಿಳೆ ಸಾವು
ಲಿಫ್ಟ್​ ಕುಸಿದು ಮಹಿಳೆ ಸಾವು
Image Credit source: NDTV
Follow us on

ವಸತಿ ಸಮುಚ್ಛಯವೊಂದರ ಲಿಫ್ಟ್​ನ ಕೇಬಲ್ ತುಂಡಾಗಿ ಒಳಗೆ ಸಿಲುಕಿದ್ದ ಮಹಿಳೆ ಹೃದಯಸ್ತಂಭನದಿಂದ ಮೃತಪಟ್ಟಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಲಿಫ್ಟ್​ ನೆಲಕ್ಕೆ ಅಪ್ಪಳಿಸಲಿಲ್ಲ ಬದಲಾಗಿ ಕಟ್ಟಡಗಳ ನಡುವೆ ಸಿಕ್ಕಿಬಿದ್ದಿತ್ತು, ಲಿಫ್ಟ್​ನಲ್ಲಿ ಮಹಿಳೆ ಒಬ್ಬಂಟಿಯಾಗಿದ್ದರು, ಆ ಸಮಯದಲ್ಲಿ ಲಿಫ್ಟ್​ನ ತಂತಿ ತುಂಡಾಗಿತ್ತು.

ಆ ಸಂದರ್ಭದಲ್ಲಿ ಮಹಿಳೆ ಪ್ರಜ್ಞೆ ತಪ್ಪಿದ್ದರು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ.
ಘಟನೆ 4.30ರ ಸುಮಾರಿಗೆ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿ ಒಂದು ಗಂಟೆಯ ಬಳಿಕ ಮಹಿಳೆ ಕೊನೆಯುಸಿರೆಳೆದಿದ್ದಾರೆ, ಲಿಫ್ಟ್​ನಲ್ಲಿ ಸಿಲುಕಿರುವ ಸಂದರ್ಭದಲ್ಲಿ ಹೃದಯಸ್ತಂಭನಕ್ಕೆ ಒಳಗಾಗಿದ್ದರು.

ಮತ್ತಷ್ಟು ಓದಿ: Shocking News: ಲಿಫ್ಟ್​ನಲ್ಲಿ ಸಿಲುಕಿ ಶಾಲಾ ಮಕ್ಕಳ ಎದುರೇ 26 ವರ್ಷದ ಶಿಕ್ಷಕಿ ಸಾವು!

ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿತ್ತು, ಮೊಣಕೈಗೂ ಕೂಡ ಪೆಟ್ಟಾಗಿತ್ತು, ಆಸ್ಪತ್ರೆಗೆ ಕರೆತಂದಾಗ ನಾಡಿಮಿಡಿತವೂ ನಿಲ್ಲುವ ಸ್ಥಿತಿಯಲ್ಲಿತ್ತು, ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಯಿತು ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ನೂರಾರು ನಿವಾಸಿಗಳು ಪಾರಸ್ ಟಿಯೆರಾ ಎದುರು ಪ್ರತಿಭಟನೆ ನಡೆಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ