ಡೆಲಿವರಿ ಆ್ಯಪ್‌ನಿಂದ ಆರ್ಡರ್ ಮಾಡಿದ ಐಸ್ ಕ್ರೀಂ(Ice-Cream)ನಲ್ಲಿ ಜರಿಹುಳು(ಶತಪದಿ) ಪತ್ತೆಯಾಗಿದೆ. ವಿಷಯದ ಬಗ್ಗೆ ಮಾಹಿತಿ ಬಂದ ತಕ್ಷಣ, ಆಹಾರ ಮತ್ತು ಸರಬರಾಜು ಇಲಾಖೆ ತಂಡವು ಸೆಕ್ಟರ್ -22 ರಲ್ಲಿರುವ ಡೆಲಿವರಿ ಆಪ್ ಸ್ಟೋರ್‌ಗೆ ಭೇಟಿ ನೀಡಿದೆ. ಎಲ್ಲಾ ಐಸ್ಕ್ರೀಂಗಳ ಮಾರಾಟವನ್ನು ನಿಷೇಧಿಸಿದೆ. ಐಸ್ ಕ್ರೀಂ ಮಾದರಿಯನ್ನು ಪರೀಕ್ಷಿಸಲಾಗುತ್ತದೆ. ಐಸ್ ಕ್ರೀಂ ತಯಾರಿಕಾ ಕಂಪನಿ ಮತ್ತು ಡೆಲಿವರಿ ಆ್ಯಪ್ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ದೀಪಾ ದೇವಿ ಅವರು ಮಕ್ಕಳಿಗೆ ಮ್ಯಾಂಗೋ ಶೇಕ್ ಮಾಡಲು ಡೆಲಿವರಿ ಅಪ್ಲಿಕೇಶನ್‌ನಿಂದ ಐಸ್‌ಕ್ರೀಂ ಆರ್ಡರ್ ಮಾಡಿದ್ದರು.
ಐಸ್‌ಕ್ರೀಂ ಮುಚ್ಚುಳ ತೆಗೆದ ತಕ್ಷಣ ಹುಳು ಕಾಣಿಸಿತ್ತು, ಆ್ಯಪ್‌ನ ಸಹಾಯವಾಣಿ ಸಂಖ್ಯೆಗೆ ದೂರು ನೀಡಿದ್ದಾರೆ. ಕಂಪನಿಯು ತನ್ನ ತಪ್ಪನ್ನು ಒಪ್ಪಿಕೊಂಡು, ಐಸ್‌ಕ್ರೀಂ ಹಣವನ್ನು ಹಿಂದಿರುಗಿಸಿತು.
ವಿಷಯದ ಬಗ್ಗೆ ಮಾಹಿತಿ ಪಡೆದ ಆಹಾರ ಸುರಕ್ಷತಾ ಅಧಿಕಾರಿಗಳ ತಂಡವೂ ಸೆಕ್ಟರ್-12 ತಲುಪಿತು. ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಅವರು ಸೆಕ್ಟರ್ -22 ರಲ್ಲಿರುವ ಆಪ್ ಸ್ಟೋರ್‌ಗೆ ತಲುಪಿದರು ಮತ್ತು ಆ ಬ್ಯಾಚ್ ಐಸ್ ಕ್ರೀಮ್ ಮಾರಾಟವನ್ನು ನಿಲ್ಲಿಸಿದರು.
ಮತ್ತಷ್ಟು ಓದಿ:ಆನ್ಲೈನ್ ಮೂಲಕ ಆರ್ಡರ್ ಮಾಡಿದ್ದ ಐಸ್ಕ್ರೀಂನಲ್ಲಿ ಮನುಷ್ಯನ ಬೆರಳು ಪತ್ತೆ
ಈ ಸಂಬಂಧ ದೂರನ್ನು ಸ್ವೀಕರಿಸಿ ಕೂಡಲೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯ ಆಹಾರ ಸುರಕ್ಷತಾ ಅಧಿಕಾರಿ ಅಕ್ಷಯ್ ಗೋಯಲ್ ಹೇಳಿದ್ದಾರೆ. ಭಾನುವಾರ ಪ್ರಕರಣ ದಾಖಲಾಗಲಿದೆ.
ಕೆಲವು ದಿನಗಳ ಹಿಂದೆ ಆನ್ಲೈನ್ ಮೂಲಕ ತರಿಸಲಾಗಿದ್ದ ಕೋನ್ ಐಸ್ಕ್ರೀಂನಲ್ಲಿ ಮಾನವನ ಬೆರಳುಗಳು ಪತ್ತೆಯಾಗಿತ್ತು. ಬಳಿಕ ಸ್ವತಃ ವೈದ್ಯರಾಗಿರುವ ಗ್ರಾಹಕರು ಅದನ್ನು ಅರಿತು ಕೂಡಲೇ ಪೊಲೀಸರಿಗೆ ದೂರು ನೀಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ