ಗಂಗಾ ನದಿಯಲ್ಲಿ 17 ಮಂದಿ ಪ್ರಯಾಣಿಸುತ್ತಿದ್ದ ದೋಣಿ ಮುಳುಗಡೆ, 6 ಮಂದಿ ನಾಪತ್ತೆ
ಗಂಗಾನದಿಯಲ್ಲಿ 17 ಮಂದಿ ಪ್ರಯಾಣಿಸುತ್ತಿದ್ದ ದೋಣಿ ಮುಳುಗಡೆಯಾಗಿದ್ದು, 6 ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಪಾಟ್ನಾದಿಂದ 70 ಕಿಮೀ ದೂರದಲ್ಲಿರುವ ಬಾರ್ಹ್ ಪಟ್ಟಣದ ಬಳಿ ಗಂಗಾ ನದಿಯಲ್ಲಿ ಮುಳುಗಿದೆ. ಹನ್ನೊಂದು ಪ್ರಯಾಣಿಕರು ಈಜಿ ದಡ ತಲುಪಿದ್ದಾರೆ, ಉಳಿದ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಗಂಗಾನದಿಯಲ್ಲಿ 17 ಮಂದಿ ಪ್ರಯಾಣಿಸುತ್ತಿದ್ದ ದೋಣಿ ಮುಳುಗಡೆಯಾಗಿದ್ದು, 6 ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಪಾಟ್ನಾದಿಂದ 70 ಕಿಮೀ ದೂರದಲ್ಲಿರುವ ಬಾರ್ಹ್ ಪಟ್ಟಣದ ಬಳಿ ಗಂಗಾ ನದಿಯಲ್ಲಿ ಮುಳುಗಿದೆ. ಹನ್ನೊಂದು ಪ್ರಯಾಣಿಕರು ಈಜಿ ದಡ ತಲುಪಿದ್ದಾರೆ, ಉಳಿದ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಘಟನೆ ಸಂಭವಿಸಿದಾಗ ಬೋಟ್ ಬರ್ಹ್‌ನ ಉಮಾನಾಥ್ ಘಾಟ್‌ನಿಂದ ಡಿಯಾರಾಗೆ ಪ್ರಯಾಣಿಸುತ್ತಿದ್ದು, ಪ್ರಸ್ತುತ ಬೋಟ್‌ನಲ್ಲಿರುವ ಉಳಿದ ಆರು ಪ್ರಯಾಣಿಕರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳ ಆರಂಭದಲ್ಲಿ ಬಿಹಾರದ ಮಹಾವೀರ್ ತೋಲಾ ಗ್ರಾಮದ ಬಳಿ ಗಂಗಾ ನದಿಯಲ್ಲಿ ದೋಣಿ ಮುಳುಗಿ ಇಬ್ಬರು ನಾಪತ್ತೆಯಾಗಿದ್ದರು.
ಮೇ 19 ರಂದು ಬೆಳಿಗ್ಗೆ 7-8 ರ ಸುಮಾರಿಗೆ ಕೆಲವು ರೈತರು ತಮ್ಮ ತರಕಾರಿಗಳನ್ನು ದೋಣಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.
ಮಹಾವೀರ ತೋಲಾ ಘಾಟ್‌ಗೆ ತಲುಪಲು ಮುಂದಾದಾಗ ದೋಣಿ ಮಗುಚಿ ಬಿದ್ದಿತ್ತು. ಇಬ್ಬರನ್ನು ಬಿಟ್ಟು ಉಳಿದವರು ಈಜಿಕೊಂಡು ದಡ ಸೇರಿದ್ದರು. ದೋಣಿಯಲ್ಲಿ 10-12 ಜನರಿದ್ದರು ಎಂದು ಹೇಳಲಾಗಿತ್ತು.
ಮತ್ತಷ್ಟು ಓದಿ: Europa 2: ನವಮಂಗಳೂರು ಬಂದರಿಗೆ ಆಗಮಿಸಿದ ಕ್ರೂಸ್ ಹಡಗು
ಕಾಂಗೋ: ನದಿಯಲ್ಲಿ ಎರಡು ಹಡಗುಗಳು ಡಿಕ್ಕಿ, 270 ಜನರಿದ್ದ ಹಡಗು ಮಗುಚಿ 80ಕ್ಕೂ ಅಧಿಕ ಮಂದಿ ಸಾವು ಎರಡು ಹಡಗುಗಳ ನಡುವೆ ಡಿಕ್ಕಿಯಾದ ರಭಸಕ್ಕೆ 270 ಜನರಿದ್ದ ಹಡಗು ನದಿಯಲ್ಲಿ ಮಗುಚಿ 80ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ಕಾಂಗೋದಲ್ಲಿ ನಡೆದಿದೆ. ಈ ಹಡಗು ಕಾಂಗೋದ ರಾಜಧಾನಿ ಕಿನ್ಶಾಸಾಗೆ ಹೋಗುತ್ತಿತ್ತು. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಮೈ-ನ್ಡೊಂಬೆ ಪ್ರಾಂತ್ಯದ ಕ್ವಾ ನದಿಯಲ್ಲಿ ದೋಣಿ ಅಪಘಾತ ಸಂಭವಿಸಿದೆ.
ಕಾಂಗೋಲೀಸ್ ನೀರಿನಲ್ಲಿ ಮಾರಣಾಂತಿಕ ಹಡಗು, ಅಪಘಾತಗಳು ಸಾಮಾನ್ಯವಾಗಿದೆ, ಅಲ್ಲಿ ಹಡಗುಗಳು ಹೆಚ್ಚಾಗಿ ಸರಕುಗಳಿಂದ ತುಂಬಿರುತ್ತವೆ ಮತ್ತು ಅಪಘಾತಗಳಿಗೆ ಬಲಿಯಾಗುತ್ತವೆ.
ಮಧ್ಯ ಆಫ್ರಿಕಾದ ದೇಶದ ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಕೆಲವೇ ಸುಸಜ್ಜಿತ ರಸ್ತೆಗಳಿವೆ. ಆದ್ದರಿಂದ ನದಿಯ ಮೂಲಕ ಪ್ರಯಾಣಿಸುವುದು ಸಾಮಾನ್ಯವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ