ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿರುವ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಪರಮ್ ಬೀರ್ ಸಿಂಗ್ ವಿರುದ್ಧ ಜಾರಿಯಾಗುತ್ತಿರುವ ಮೂರನೇ ಜಾಮೀನು ರಹಿತ ವಾರೆಂಟ್ ಇದಾಗಿದೆ. ಪರಮ್ ಬೀರ್ ಸಿಂಗ್ ವಿರುದ್ಧ ಸುಮಾರು 15 ಕೋಟಿ ರೂಪಾಯಿಗಳಷ್ಟು ಸುಲಿಗೆ ಮಾಡಿದ ಆರೋಪವಿದ್ದು, ಅವರೀಗ ನಾಪತ್ತೆಯಾಗಿದ್ದಾರೆ. ಅಂದಹಾಗೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ರನ್ನು ಇಡಿ ಬಂಧಿಸಿದೆ. ಸಿಬಿಐ ಕೂಡ ತನಿಖೆಗೆ ಮುಂದಾಗಿದೆ.
ಸುಲಿಗೆ ಪ್ರಕರಣದಲ್ಲಿ ಪರಮ್ ಬೀರ್ ಸಿಂಗ್ ಜತೆಗೆ ಸಹ ಆರೋಪಿಗಳೆಂದು ಗುರುತಿಸಲಾಗಿರುವ, ಕ್ರೈಂ ಬ್ರ್ಯಾಂಚ್ನ ನಂದಕುಮಾರ್ ಗೋಪಾಲೆ ಮತ್ತು ಶಾಶಾ ಕೊರ್ಕೆ ಅವರನ್ನು ಸಿಐಡಿ ಸೋಮವಾರ ಬಂಧಿಸಿದೆ. ಭಾಯಂದರ್ ಮೂಲದ ಡೆವಲಪರ್ ಶ್ಯಾಮಸುಂದರ್ ಅಗರವಾಲ್ ಅವರ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿತ್ತು. ಇದೀಗ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ವಾರೆಂಟ್ ಜಾರಿ ಮಾಡಿದೆ. ಕಳೆದ 217ದಿನಗಳಿಂದಲೂ ಅವರು ನಾಪತ್ತೆಯಾಗಿದ್ದು, ಹುಡುಕಾಟವೂ ನಡೆದಿದೆ.
ಇದನ್ನೂ ಓದಿ: ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಎತ್ತಿನ ಬಂಡಿ ಓಡಿಸಿ ಬಂಡಿ ಓಟದ ಸ್ಪರ್ಧೆ ಉದ್ಘಾಟಿಸಿದರು!
Published On - 4:37 pm, Wed, 10 November 21