ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾರತ ಅದರಲ್ಲೂ ಈಶಾನ್ಯ ಭಾರತದ ಬದಲಾವಣೆ ಮತ್ತು ಅಭಿವೃದ್ಧಿ ಮಂತ್ರಕ್ಕೆ ಆದ್ಯತೆ ನೀಡಲಾಗಿದ್ದು, ಈಶಾನ್ಯ ಭಾರತದಲ್ಲಿ ಶಾಂತಿ ಮತ್ತು ಅಭಿವೃದ್ಧಿ ಪರ್ವ ಶುರುವಾಗಿದೆ. ಈ ಸಂಬಂಧ ಅನುದಾನ ಬಿಡುಗಡೆ ಮಾಡಲು ಬೇಡಿಕೆಯಿಡಲಾಗಿದ್ದು, ರಾಜ್ಯಸಭೆಯಲ್ಲಿ ಚರ್ಚೆ ನಡೆದಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಂಪರ್ಕ ಯೋಜನೆಗಳು ಭಾರೀ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಈಶಾನ್ಯ ಭಾಗದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸಲಾಗಿದೆ ಎಂದು ಈಶಾನ್ಯ ಭಾಗದ ಅಭಿವೃದ್ಧಿ ಸಚಿವ, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಅವರು (Minister of Development of North East Region, Tourism and Culture G Kishan Reddy) ತಿಳಿಸಿದ್ದಾರೆ.
ಈಶಾನ್ಯ ಭಾಗದ ಅಭಿವೃದ್ಧಿಗಾಗಿ ಮೀಸಲಿರಿಸಲಾದ ಕೇಂದ್ರ ಬಜೆಟ್ ನೆರವು ಪ್ರಮಾಣವನ್ನು ಶೇ. 110 ರಷ್ಟು ಏರಿಸಲಾಗಿದೆ. ಒಟ್ಟಾರೆಯಾಗಿ 54 ಸಚಿವಾಲಯಗಳ ಮೂಲಕ 76,040 ಕೋಟಿ ರೂಪಾಯಿ ಅನುದಾನ ಏರಿಸಲಾಗಿದೆ. ರಸ್ತೆ, ರೈಲ್ವೆ, ವಾಯುಯಾನ, ಜಲ ಮತ್ತು ದೂರ ಸಂಪರ್ಕ ಅಭಿವೃದ್ಧಿಗಾಗಿ ವ್ಯಾಪಕ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಆರ್ಥಿಕ ಅಭಿವೃದ್ಧಿ, ವ್ಯಾಪಾರ ವಹಿವಾಟು ಹಾಗೂ ಹೂಡಿಕೆಗೆ ವಿಫುಲ ಅವಕಾಶಗಳು ತೆರೆದುಕೊಂಡಿವೆ. 2014-2021 ಅವಧಿಯಲ್ಲಿ ರೈಲ್ವೆ ಸಂಪರ್ಕ ಸ್ಥಾಪನೆಗಾಗಿ 39,000 ಕೋಟಿ ರೂಪಾಯಿ ವ್ಯಯಿಸಲಾಗಿದೆ.
ಈಶಾನ್ಯ ಭಾಗದ ರಾಜ್ಯ ಸರ್ಕಾರಗಳ ಜೊತೆ ರಾಜಕೀಯ ಸಂಪರ್ಕ ಸಾಧಿಸಿಕೊಂಡು ಕೇಂದ್ರ ವಲಯದ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಾಗಿದೆ. ಇದಕ್ಕೆ ಕೇಂದ್ರ ಸಚಿವರುಗಳು ನಿರಂತರವಾಗಿ ಈಶಾನ್ಯ ಭಾರತದ ನಾನಾ ಭಾಗಗಳಿಗೆ ಭೇಟಿ ನೀಡಿರುವುದು ಹೇತುವಾಗಿದೆ. ಇಂದು ಬುಧವಾರ ಸಂಸತ್ತಿನ ಮೇಲ್ಮನೆಯಲ್ಲಿ ಈಶಾನ್ಯ ಭಾಗದ ಅಭಿವೃದ್ಧಿ ಸಚಿವ, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಅವರು ಈಶಾನ್ಯ ಭಾಗದ ಅಭಿವೃದ್ಧಿ ಸಚಿವಾಲಯದ (DONER) ಕಾರ್ಯಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಈ ಮಾಹಿತಿ ತಿಳಿಸಿದರು. ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತದ ಮಾರ್ಪಾಡು ಅಜೆಂಡಾದಡಿ ಈಶಾನ್ಯ ಭಾಗದ ರಾಜ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
ದೇಶದ ಈ ಭಾಗದಲ್ಲಿ ಅಭಿವೃದ್ಧಿ ಕೈಗೊಳ್ಳುವ ನಿಟ್ಟಿನಲ್ಲಿ ಶಾಂತಿ ಮತ್ತು ಭದ್ರತೆಗೆ ಭಾರೀ ಮಹತ್ವ ನೀಡಲಾಗಿದೆ. ಅನೇಕ ಹೆಗ್ಗುರುತರ ಯೋಜನೆಗಳು ಕೈಗೂಡಿ ಇಲ್ಲಿನ ಭದ್ರತಾ ಪರಿಸ್ಥಿತಿ ಮತ್ತು ತದನಂತರದ ಸ್ಥೀರತೆಯನ್ನು ಕಾಯ್ದುಕೊಳ್ಳಲಾಗಿದೆ. ಈ ಹಿಂದೆ ಇಲ್ಲಿ ಅಭಿವೃದ್ಧಿ ಕೈಗೊಳ್ಳುವುದಕ್ಕೆ ಹಿಂದುಮುಂದು ನೋಡಲಾಗುತ್ತಿತ್ತು. ಆದರೆ ಈ ಹಿಂದಿನ ಪರಿಸ್ಥಿತಿಗೂ ಮತ್ತು ಇಂದಿನ ಪರಿಸ್ಥಿತಿಗೂ ಅಜಗಜಾಂತರವಿದೆ. ಅಂದಿನ ರಸ್ತೆ ತಡೆಗಳು, ಪ್ರತಿಭಟನೆಗಳು, ಕರ್ಫ್ಯೂ ಜಾರಿ ಮತ್ತು ಗುಂಡಿನ ಚಕಮಕಿ ಸದ್ದು ಅಡಗಿಸಲಾಗಿದೆ.
ಈಶಾನ್ಯ ರಾಜ್ಯಗಳಿಗೆ PM Modi ಕೊಡುಗೆಯನ್ನ ಎಳೆ ಎಳೆಯಾಗಿ ಬಿಡಿಸಿಟ್ಟ ಕೇಂದ್ರ ಸಚಿವ G Kishan Reddy
ಇನ್ನು 2014ರಲ್ಲಿ ಕಾಣಿಸಿಕೊಂಡಿದ್ದ ದೇಶದೊಳಕ್ಕೆ ಒಳನುಸುಳುವಿಕೆ ಪ್ರಕರಣಗಳ ಸಂಖ್ಯೆ 824 ಇತ್ತು. ಅದೀಗ 2020ಕ್ಕೆ 163ಕ್ಕೆ ಕ್ಷೀಣಿಸಿದೆ. ಇನ್ನು ನಾಗರಿಕರ ಸಾವು ಮತ್ತು ಭದ್ರತಾ ಪಡೆಯವರ ಸಾವಿನ ಪ್ರಮಾಣ ಸಹ ಕಡಿಮೆಯಾಗಿದೆ. ಈ ಭಾಗದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಬಂಡುಕೋರ ಗುಂಪುಗಳ ಜೊತೆ ಅನೇಕ ಐತಿಹಾಸಿಕ ಒಪ್ಪಂದಗಳನ್ನು ಕೈಗೊಳ್ಳಲಾಗಿದೆ. ಅವರ ಪುನರ್ವಸತಿಗಾಗಿ ಭಾರೀ ಪ್ರಮಾಣದ ಹಣಕಾಸು ಪ್ಯಾಕೇಜುಗಳನ್ನು ನೀಡಲಾಗಿದೆ ಎಂದು ಈಶಾನ್ಯ ಭಾಗದ ಅಭಿವೃದ್ಧಿ ಸಚಿವ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಸದನಕ್ಕೆ ಮಾಹಿತಿ ಒದಗಿಸಿದರು.
ಗತಿ ಶಕ್ತಿ (Gati Shakti) ಆಶಯದಡಿ ಪ್ರಧಾನ ಮಂತ್ರಿಗಳ PM-DevINE ಅಭಿವೃದ್ಧಿ ಉಪಕ್ರಮವನ್ನು ಘೋಷಿಸಲಾಗಿದ್ದು 1500 ಕೋಟಿ ರೂಪಾಯಿ ತೆಗೆದಿರಿಸಲಾಗಿದೆ. ಇದರೊಂದಿಗೆ ದೇಶದ ಅಭಿವೃದ್ಧಿ ಪಥದಲ್ಲಿ ಈಶಾನ್ಯ ಭಾಗದ ಕೊಡುಗೆಯನ್ನು ಗಣನೀಯವಾಗಿ ಹೆಚ್ಚಿಸಲು ರೈಲ್ವೆ ಸಂಪರ್ಕ ಭದ್ರಗೊಳಿಸಲಾಗುವುದು ಎಂದು ಈಶಾನ್ಯ ಭಾಗದ ಅಭಿವೃದ್ಧಿ ಸಚಿವ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ತಿಳಿಸಿದರು. ಈ ನಿಟ್ಟಿನಲ್ಲಿ ರೈಲ್ವೆ ಸಂಪರ್ಕ ಸಾಧಿಸಲು 2014-2021 ಅವಧಿಯಲ್ಲಿ 39,000 ಕೋಟಿ ರೂಪಾಯಿ ಒದಗಿಸಲಾಗಿದೆ.
The @narendramodi Government has always given importance to agriculture in the #NER.
Giving impetus to producing edible oil in India, Central Govt is giving incentives to our Annadatas!
53% of the total sanction under National Edible Oil Mission has been allocated to NER. pic.twitter.com/pSoh8kAJ0J
— G Kishan Reddy (@kishanreddybjp) March 15, 2022
Published On - 5:07 pm, Wed, 16 March 22