ಉತ್ತರಪ್ರದೇಶ: ತವರು ಮನೆಗೆ ಹೋಗಬೇಡ ಎಂದಿದ್ದಕ್ಕೆ, ನೇಣು ಬಿಗಿದುಕೊಂಡು ನವವಿವಾಹಿತೆ ಆತ್ಮಹತ್ಯೆ
ಮದುವೆಯ ಆರಂಭದಲ್ಲಿ ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗೂ ಸ್ವಲ್ಪ ಸಮಯ ಸಿಕ್ಕರೂ ಸಾಕು ತವರು ಮನೆಗೆ ಹೋಗಬೇಕೆಂದು ಹಂಬಲಿಸುತ್ತಿರುತ್ತಾರೆ.
ಮದುವೆ(Marriage)ಯ ಆರಂಭದ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗೂ ಸ್ವಲ್ಪ ಸಮಯ ಸಿಕ್ಕರೂ ಸಾಕು ತವರು ಮನೆಗೆ ಹೋಗಬೇಕೆಂದು ಹಂಬಲಿಸುತ್ತಿರುತ್ತಾರೆ. ತವರು ಮನೆಗೆ ಹೋಗಬೇಡ ಎಂದಿದ್ದಕ್ಕೆ ನವವಿವಾಹಿತೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ.
ಮಹಿಳೆಯ ತಂದೆಯ ದೂರಿನ ಮೇರೆಗೆ ಪತಿ ಸೇರಿದಂತೆ ಆರು ಮಂದಿಯ ವಿರುದ್ಧ ಪೊಲೀಸರು ವರದಕ್ಷಿಣೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ನಿಶಾ ತನ್ನ ಪತಿ ನೌಕಾಪಡೆಯ ವ್ಯಕ್ತಿ ಕರ್ತವ್ಯಕ್ಕೆ ಸೇರಲು ಹೋದ ನಂತರ ತನ್ನ ಹೆತ್ತವರ ಮನೆಗೆ ಹೋಗಲು ಬಯಸಿದ್ದಳು, ಆದರೆ ನಿರಾಕರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ಅತ್ತೆ ಮಹಿಳೆಯನ್ನು ತಕ್ಷಣವೇ ಕಳುಹಿಸಲು ಸಿದ್ಧರಿರಲಿಲ್ಲ ಮತ್ತು ಆಕೆಯ ತಂದೆಯ ಮನೆಗೆ ಭೇಟಿ ನೀಡಲು ಮುಹೂರ್ತ (ಶುಭ ಸಮಯ) ಕುರಿತು ಮಾತನಾಡುತ್ತಿದ್ದರು ಎಂದು ಅವರು ಹೇಳಿದರು.
ಮತ್ತಷ್ಟು ಓದಿ: ಮಂಗಳೂರಿನಲ್ಲಿ ಅಪಾರ್ಟ್ಮೆಂಟ್ನಿಂದ ಹಾರಿ ಬಿಲ್ಡರ್ ಆತ್ಮಹತ್ಯೆ
ನಿಶಾಳ ತಂದೆ ಧ್ರುವ ಪ್ರಸಾದ್ ವರ್ಮಾ ನೀಡಿದ ದೂರಿನ ಮೇರೆಗೆ ಆಕೆಯ ಪತಿ, ಮಾವ, ಅತ್ತೆ ಸೇರಿದಂತೆ ಆರು ಮಂದಿಯ ವಿರುದ್ಧ ವರದಕ್ಷಿಣೆ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಎಸ್‌ಎಚ್‌ಒ ರಾಜೀವ್ ಸಿಂಗ್ ತಿಳಿಸಿದ್ದಾರೆ.
ನಿಶಾ 2022 ರ ಡಿಸೆಂಬರ್ 2 ರಂದು ಅಮಿತ್ ಅವರನ್ನು ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:15 am, Mon, 7 August 23