ಇಂಡಿಯಾ ಅಲ್ಲ ಭಾರತ; ದೇಶದ ಹೆಸರು ಬದಲಾವಣೆ ಅಭಿಯಾನಕ್ಕೆ ಆರ್‌ಎಸ್‌ಎಸ್ ಬೆಂಬಲ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಭಾರತ ದೇಶದ ನಾಗರಿಕ ಪರಂಪರೆಗೆ ಹೊಂದಿಕೆಯಾಗುವಂತೆ ಇಂಡಿಯಾವನ್ನು ಭಾರತ ಎಂದು ಮರುನಾಮಕರಣ ಮಾಡಲು ಬೆಂಬಲ ಸೂಚಿಸಿದೆ. ಈ ಹೆಸರು ಬದಲಾವಣೆಯನ್ನು ಪ್ರತಿಪಾದಿಸುವ ರಾಷ್ಟ್ರೀಯ ಅಭಿಯಾನವನ್ನು ಬೆಂಬಲಿಸಲು ಆರ್​ಎಸ್​ಎಸ್​ ಸಜ್ಜಾಗಿದೆ.

ಇಂಡಿಯಾ ಅಲ್ಲ ಭಾರತ; ದೇಶದ ಹೆಸರು ಬದಲಾವಣೆ ಅಭಿಯಾನಕ್ಕೆ ಆರ್‌ಎಸ್‌ಎಸ್ ಬೆಂಬಲ
Indian Flag

Updated on: Feb 15, 2025 | 4:30 PM

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರ್‌ಎಸ್‌ಎಸ್ ಸಂಯೋಜಿತ ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸ್ ಮಾರ್ಚ್‌ನಲ್ಲಿ ಒಂದು ತಿಂಗಳ ಕಾಲ ನಡೆಯುವ ಇಂಡಿಯಾವನ್ನು ಭಾರತ ಎಂದು ಹೆಸರು ಬದಲಾಯಿಸುವ ಅಭಿಯಾನವನ್ನು ಮುನ್ನಡೆಸಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸುವ ಮೊದಲು ಶಿಕ್ಷಣ, ಸರ್ಕಾರ, ಕಾನೂನು ಮತ್ತು ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ನಾಗರಿಕರಿಂದ 10 ಲಕ್ಷ ಸಹಿಗಳನ್ನು ಸಂಗ್ರಹಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ.

ಈ ಅಭಿಯಾನವನ್ನು ಘೋಷಿಸಿದ ನ್ಯಾಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅತುಲ್ ಕೊಠಾರಿ, ಭಾರತ ಎಂಬ ಹೆಸರು ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ ಎಂದು ಒತ್ತಿ ಹೇಳಿದ್ದಾರೆ. ಇಂಡಿಯಾ ಕೇವಲ ಒಂದು ಹೆಸರು, ಆದರೆ ಭಾರತ ಒಂದು ಭಾವನೆ. ಅದು ನಮ್ಮ ಪೂರ್ವಜರ ಪರಂಪರೆ. “ನಾವು ಮಾರ್ಚ್‌ನಲ್ಲಿ 10 ಲಕ್ಷ ಸಹಿಗಳನ್ನು ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತೇವೆ, ರಾಷ್ಟ್ರವನ್ನು ಭಾರತ್ ಎಂದು ಮರುನಾಮಕರಣ ಮಾಡಲು ಸಾಂವಿಧಾನಿಕ ಪರಿಶೀಲನೆಗೆ ಒತ್ತಾಯಿಸುತ್ತೇವೆ” ಎಂದು ಕೊಠಾರಿ ದೆಹಲಿಯಲ್ಲಿ ನಡೆದ ನ್ಯಾಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಮುಂದಿನ ಜಾಗತಿಕ ಶೃಂಗಸಭೆ; ಪ್ಯಾರಿಸ್‌ನಲ್ಲಿ ಪ್ರಧಾನಿ ಮೋದಿ ಘೋಷಣೆ

ಈ ಅಭಿಯಾನಕ್ಕೆ ಆರ್‌ಎಸ್‌ಎಸ್‌ನ ಹಿರಿಯ ನಾಯಕರಿಂದ ಬಲವಾದ ಬೆಂಬಲ ದೊರಕಿತು. ಇದು ಆಂದೋಲನಕ್ಕೆ ಸಾಂಸ್ಥಿಕ ಬೆಂಬಲವನ್ನು ಸೂಚಿಸುತ್ತದೆ. ಸೆಪ್ಟೆಂಬರ್ 2023ರಲ್ಲಿ ನಡೆದ ಜಿ 20 ಶೃಂಗಸಭೆಯ ಸಮಯದಲ್ಲಿ ಇಂಡಿಯಾ ವರ್ಸಸ್ ಭಾರತ್ ಚರ್ಚೆಯು ಮೊದಲು ರಾಷ್ಟ್ರದ ಗಮನ ಸೆಳೆಯಿತು. ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಮಫಲಕವು “ಇಂಡಿಯಾ” ಹೆಸರಿನ ಬದಲಿಗೆ “ಭಾರತ್” ಎಂದು ಬರೆದಿತ್ತು.

ಇದಾದ ನಂತರ ಮತ್ತಷ್ಟು ಊಹಾಪೋಹಗಳಿಗೆ ಉತ್ತೇಜನ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, “ಇಂಡಿಯಾದ ರಾಷ್ಟ್ರಪತಿ” ಬದಲಿಗೆ “ಭಾರತದ ರಾಷ್ಟ್ರಪತಿ” ಎಂಬ ಶೀರ್ಷಿಕೆಯಡಿಯಲ್ಲಿ ಅಧಿಕೃತ ಜಿ 20 ಭೋಜನಕೂಟದ ಆಹ್ವಾನಗಳನ್ನು ಕಳುಹಿಸಿದ್ದರು. ಆ ಸಮಯದಲ್ಲಿ, ಸರ್ಕಾರವು ಸಂವಿಧಾನದ 1ನೇ ವಿಧಿಗೆ ತಿದ್ದುಪಡಿಗಳನ್ನು ಪರಿಚಯಿಸಬಹುದು ಎಂಬ ಊಹಾಪೋಹವಿತ್ತು. ಆ ವಿಧಿಯಲ್ಲಿ “ಭಾರತ, ಅಂದರೆ ಇಂಗ್ಲಿಷ್ ಭಾಷೆಯಲ್ಲಿ ಇಂಡಿಯಾ ರಾಜ್ಯಗಳ ಒಕ್ಕೂಟವಾಗಿರುತ್ತದೆ.” ಎಂದು ನಮೂದಿಸಲಾಗಿದೆ.

ಇದನ್ನೂ ಓದಿ: ಭಾರತ ಮುಂದುವರಿದ ದೇಶವಾಗಲು ಅಸಾಧ್ಯವಾ?

ಇಂಡಿಯಾ ವರ್ಸಸ್ ಭಾರತ ಚರ್ಚೆಯು ಸೆಪ್ಟೆಂಬರ್ 1949ರಲ್ಲಿ ನಡೆದ ಸಂವಿಧಾನ ಸಭೆಯ ಚರ್ಚೆಗಳಿಗಿಂತಲೂ ಹಿಂದಿನದು ಎಂದು ಐತಿಹಾಸಿಕ ದಾಖಲೆಗಳು ತೋರಿಸುತ್ತವೆ. ಹಲವಾರು ಸದಸ್ಯರು ವೇದಗಳು, ಉಪನಿಷತ್ತುಗಳು, ಮಹಾಭಾರತ ಮತ್ತು ವಿವಿಧ ಪುರಾಣಗಳಂತಹ ಪ್ರಾಚೀನ ಗ್ರಂಥಗಳಲ್ಲಿನ ಉಲ್ಲೇಖಗಳನ್ನು ಉಲ್ಲೇಖಿಸಿ ಭಾರತ ಎಂಬ ಹೆಸರನ್ನು ಬೆಂಬಲಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ