ಒಬಾಮಾ ತಮ್ಮ ಪುಸ್ತಕದಲ್ಲಿ ರಾಹುಲ್ ಬಗ್ಗೆ ಬರೆಯುವಾಗ, ‘‘ಧೃತಿಗೆಟ್ಟ, ಅಪ್ರಬುದ್ಧ; ತನ್ನ ಹೋಮ್ವರ್ಕ್ ಮಾಡಿದ್ದರೂ, ವಿಷಯದ ಮೇಲೆ ಹಿಡಿತ ಸಾಧಿಸಲಾಗದೆ ಟೀಚರನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುವ ವಿದ್ಯಾರ್ಥಿಯಂತೆ ಭಾಸವಾಗುತ್ತಾರೆ,’’ ಎಂದಿದ್ದಾರೆ.
ಅವರ ಈ ಕಾಮೆಂಟನ್ನು ಗಂಭೀರವಾಗಿ ಪರಿಗಣಿಸಿರುವ ಶಿವ ಸೇನಾ, ಒಬ್ಬ ವಿದೇಶೀ ರಾಜಕಾರಣಿ ಕುರಿತು ಹಾಗೆ ಕಾಮೆಂಟ್ ಮಾಡುವ ಅಧಿಕಾರ ಒಬಾಮಾ ಅವರಿಗಿಲ್ಲವೆಂದು ಹೇಳಿದೆ. ಪಕ್ಷದ ಹಿರಿಯ ನಾಯಕ ಸಂಜಯ ರಾವತ್ ಅವರು ತಮ್ಮ ಟ್ವೀಟ್ನಲ್ಲಿ, ಒಬಾಮಾರನ್ನು ತರಾ
‘‘ವಿದೇಶೀ ರಾಜಕಾರಣಿಯೊಬ್ಬ, ಭಾರತದ ರಾಜಕೀಯ ನಾಯಕರ ಬಗ್ಗೆ ಅಂಥ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಸರಿಯಲ್ಲ. ನಂತರ ಅವರು ಮಾಡಿರುವ ರಾಜಕೀಯ ವಿಶ್ಲೇಷಣೆ ಕೀಳು ಅಭಿರುಚಿಯದ್ದಾಗಿದೆ. ನಾವು, ‘ಟ್ರಂಪ್ ಒಬ್ಬ ಹುಚ್ಚ’ ಅಂತ ಹೇಳಲಾರೆವು. ನಮ್ಮ ದೇಶದ ಬಗ್ಗೆ ಒಬಾಮಾಗೇನು ಗೊತ್ತಿದೆ,’’ ಎಂದು ರಾವುತ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸೇರಿದಂತೆ ವಿಶ್ವದ ಹಲವಾರು ನಾಯಕರನ್ನು ಕುರಿತು ಒಬಾಮಾ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಒಬಾಮಾ, ಮಹಿಳಾ ನಾಯಕರ ಸೌಂದರ್ಯದ ಬಗ್ಗೆ ಯಾರೊಬ್ಬರೂ ಮಾತಾಡುತ್ತಿಲ್ಲ ಎಂದು ಬರೆಯುವಾಗ ಸೋನಿಯಾ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಹಾಗೆಯೇ, ಮನಮೋಹನ್ ಸಿಂಗ್ ಅವರ ‘ಅಗಾಧವಾದ ಅಖಂಡತೆಯನ್ನು’ ಕೊಂಡಾಡಿದ್ದಾರೆ.