Naveen Patnaik: ಪ್ರಧಾನಿ ಮೋದಿಯನ್ನು ಭೇಟಿಯಾದ ಒಡಿಶಾ ಸಿಎಂ ನವೀನ್ ಪಟ್ನಾಯಕ್, ತೃತೀಯ ರಂಗಕ್ಕೆ ನನ್ನ ಬೆಂಬಲವಿಲ್ಲ

|

Updated on: May 11, 2023 | 7:23 PM

ಒಡಿಶಾ ಸಿಎಂ ನವೀನ್ ಪಟ್ನಾಯಕ್ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ನಿತೀಶ್ ಕುಮಾರ್ ಅವರು ಭೇಟಿ ಬಿಜೆಪಿಯನ್ನು 2024 ಲೋಕಸಭೆ ಚುನಾವಣೆಯಲ್ಲಿ ಸೋಲಿಸಬೇಕು ಎಂಬ ಕಾರಣಕ್ಕೆ ಅನೇಕ ಪಕ್ಷಗಳು ನಾಯಕರನ್ನು ಭೇಟಿಯಾಗಿದ್ದಾರೆ.

Naveen Patnaik: ಪ್ರಧಾನಿ ಮೋದಿಯನ್ನು ಭೇಟಿಯಾದ ಒಡಿಶಾ ಸಿಎಂ ನವೀನ್ ಪಟ್ನಾಯಕ್, ತೃತೀಯ ರಂಗಕ್ಕೆ ನನ್ನ ಬೆಂಬಲವಿಲ್ಲ
Follow us on

ದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ತೃತೀಯರಂಗಗಳು ಸೇರಲು ಬಿಹಾರದ ಮುಖ್ಯಮಂತ್ರಿ ಭುವನೇಶ್ವರದಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ (Naveen Patnaik) ಭೇಟಿಯಾಗಿದ್ದಾರೆ. ಆದರೆ ಈಗ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ನಿತೀಶ್ ಕುಮಾರ್ ಅವರು ಭೇಟಿ ಬಿಜೆಪಿಯನ್ನು 2024 ಲೋಕಸಭೆ ಚುನಾವಣೆಯಲ್ಲಿ ಸೋಲಿಸಬೇಕು ಎಂಬ ಕಾರಣಕ್ಕೆ ಅನೇಕ ಪಕ್ಷಗಳು ನಾಯಕರನ್ನು ಭೇಟಿಯಾಗಿದ್ದಾರೆ. ಇಂದು (ಮೇ 11) ನಿತೀಶ್​​ ಕುಮಾರ್​ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದಾರೆ. ಇದೀಗ ಒಡಿಶಾ ಸಿಎಂ, ಪ್ರಧಾನಿ ಮೋದಿ ಭೇಟಿಯಿಂದ ಸದ್ಯದ ಮಟ್ಟಿಗೆ ತೃತೀಯ ರಂಗದ ಸಾಧ್ಯತೆಯೇ ಇಲ್ಲ ಎಂದು ಪಟ್ನಾಯಕ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ನಾನು ಪ್ರಧಾನಿ ಅವರನ್ನು ಭೇಟಿ ಮಾಡಿದ್ದೇನೆ ಮತ್ತು ಒಡಿಶಾದಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ಆ ಕಾರಣಕ್ಕೆ ಪ್ರಧಾನಿ ಮೋದಿ ಜತೆಗೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದ್ದಾರೆ. ಪುರಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಬೇಕು ಎಂಬುದರ ಬಗ್ಗೆ ಪ್ರಸ್ತಾವನೆ ಇಟ್ಟಿದ್ದೇನೆ, ಜತೆಗೆ ಭುವನೇಶ್ವರ್​​ದಲ್ಲಿ ಈಗಾಗಲೇ ತುಂಬಾ ಟ್ರಾಫಿಕ್ ಸಮಸ್ಯೆಗಳು ಆಗುತ್ತಿದೆ, ಆ ಕಾರಣಕ್ಕೆ ಅಲ್ಲಿಗೆ ಶಾಶ್ವತ ಪರಿಹಾರ ಬೇಕು ಎಂದು ಕೇಳಿದ್ದೇನೆ, ಅದಕ್ಕೆ ಅವರು ಖಂಡಿತವಾಗಿಯೂ ಮಾಡುವುದಾಗಿ ಹೇಳಿದ್ದಾರೆ. ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಿ ಎಂದು ಹೇಳಿದ್ದೇನೆ ಎಂದರು.

ಇದನ್ನೂ ಓದಿ: ತಾರತಮ್ಯವನ್ನು ಕಡಿಮೆ ಮಾಡಲು ನಮ್ಮ ಜನರಿಗೆ ಸೂಕ್ತವಾದುದನ್ನು ಮಾಡುತ್ತೇವೆ: ನವೀನ್ ಪಟ್ನಾಯಕ್

2024ರ ಲೋಕಸಭೆ ಚುನಾವಣೆಗೆ ವಿರೋಧಪಕ್ಷಗಳ ಒಗ್ಗಟ್ಟಿನ ಅಭಿಯಾನ

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಪಣ ತೊಟ್ಟಿದ್ದ ಬಿಹಾರ ಸಿಎಂ, ತಮ್ಮ ‘ವಿರೋಧಪಕ್ಷಗಳ ಒಗ್ಗಟ್ಟಿನ ಅಭಿಯಾನ’ದ ಭಾಗವಾಗಿ ಹಲವು ರಾಜ್ಯಗಳಿಗೆ ಪ್ರವಾಸ ಮಾಡಿ ವಿವಿಧ ರಂಗಗಳ ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದಾರೆ. ನಿತೀಶ್ ಕುಮಾರ್ ಅವರು ಈ ಹಿಂದೆ ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಒಡಿಶಾ ಸಿಎಂ ಜತೆಗೆ ಮೇ 10ಕ್ಕೆ ಮಾತುಕತೆ ನಡೆಸಿದ್ದಾರೆ. ಆದರೆ ಅವರು ವಿರೋಧಪಕ್ಷಗಳ ಒಗ್ಗಟ್ಟಿನ ಅಭಿಯಾನ ನೀಡಲು ಸಾಧ್ಯವಿಲ್ಲ ಎನ್ನುವುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.