ಒಡಿಶಾದ ಬಾಲಸೋರ್ನಲ್ಲಿ ಸಂಭವಿಸಿದ ರೈಲು ಅಪಘಾತ(Train Accident)ದ ಬಗ್ಗೆ ಮಾತನಾಡುತ್ತಾ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(Ashwini Vaishnaw) ಭಾವುಕರಾದರು. ನಮ್ಮ ಜವಾಬ್ದಾರಿ ಇನ್ನೂ ಮುಗಿದಿಲ್ಲ ಎಂದು ರೈಲು ಅಪಘಾತದಲ್ಲಿ ಕಾಣೆಯಾದವರ ಬಗ್ಗೆ ನೆನೆದು ಕಣ್ಣೀರು ಹಾಕಿದರು. ಸತತ 51 ಗಂಟೆಗಳ ಕಾರ್ಯಾಚರಣೆ ಬಳಿಕ ರೈಲುಗಳು ಆ ಮಾರ್ಗದಲ್ಲಿ ಪುನರಾರಂಭಗೊಂಡಿವೆ. ಎರಡು ದಿನಗಳ ಕಾಲ ಖುದ್ದು ಅಶ್ವಿನಿ ವೈಷ್ಣವ್ ಅವರೇ ಅಲ್ಲಿ ನಿಂತು ಕಾಮಗಾರಿಯ ಮೇಲ್ವಿಚಾರಣೆ ಮಾಡಿ ರೈಲು ಪುನರಾರಂಭಗೊಳ್ಳಲು ನೆರವಾದರು. ಅವರು ಎಂಜಿನಿಯರ್ ಆಗಿದ್ದ ಕಾರಣ ಎಲ್ಲಾ ಟೆಕ್ನಿಕಲ್ ಸಮಸ್ಯೆಯ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ಇತ್ತು.
ಅಪಘಾತದಲ್ಲಿ 288 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ, 1000 ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ, ಅದರಲ್ಲಿ 56 ಮಂದಿಯ ಸ್ಥಿತಿ ಗಂಭೀರವಾಗಿದೆ. ಅದೇ ಸಮಯದಲ್ಲಿ, ಒಡಿಶಾ ರೈಲು ಅಪಘಾತದಲ್ಲಿ ಚಾಲಕನ ದೋಷ ಮತ್ತು ಸಿಸ್ಟಂ ಅಸಮರ್ಪಕ ಕಾರ್ಯದ ಸಾಧ್ಯತೆಯನ್ನು ರೈಲ್ವೆ ನಿರಾಕರಿಸಿದೆ.
ನಾಪತ್ತೆಯಾಗಿರುವ ಕುಟುಂಬ ಸದಸ್ಯರನ್ನು ಆದಷ್ಟು ಬೇಗ ಅವರ ಸಂಬಂಧಿಕರ ಬಳಿ ಸೇರಿಸುವುದು ನಮ್ಮ ಗುರಿಯಾಗಿದೆ ಎಂದರು.
ಬಾಲಸೋರ್ನಲ್ಲಿ ಪರಿಸ್ಥಿತಿಯು ವೇಗವಾಗಿ ಬದಲಾಗುತ್ತಿದೆ. ಹಳಿಗಳ ಮೇಲೆ ಅಲ್ಲಲ್ಲಿ ಬಿದ್ದಿದ್ದ ಬೋಗಿಗಳನ್ನು ಶನಿವಾರ ರಾತ್ರಿಯೇ ತೆರವುಗೊಳಿಸಲಾಗಿತ್ತು. ಅಪಘಾತದ ಬಳಿಕ ಎಕ್ಸ್ಪ್ರೆಸ್ ರೈಲು, ಗೂಡ್ಸ್ ರೈಲಿನ ಬೋಗಿಗಳು ಹಳಿ ತಪ್ಪಿದ್ದವು. 51 ಗಂಟೆಗಳ ಬಳಿಕ ಮೊದಲ ರೈಲು ಸಂಚರಿಸಿದೆ, ಹಳಿಗಳನ್ನು ಸರಿಯಾಗಿ ಅಳವಡಿಸಲಾಗಿದೆಯೇ ಎಂದು ತಿಳಿಯಲು ರೈಲನ್ನು ಓಡಿಸಲಾಯಿತು.
ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಿಸ್ಟಂ
ಒಡಿಶಾದ ಬಾಲಾಸೋರ್ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಸರಣಿ ರೈಲು ಅಪಘಾತ ಘಟನೆಗೆ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಪ್ರಕ್ರಿಯೆಯಲ್ಲಾದ ಲೋಪವೇ ಕಾರಣ ಎಂದು ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಹೇಳಿದ್ದಾರೆ. ಕೋರಮಂಡಲ್ ಎಕ್ಸ್ಪ್ರೆಸ್, ಬೆಂಗಳೂರು ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲುಗಳ ಮಧ್ಯೆ ಕೇವಲ ಒಂದು ನಿಮಿಷ ಅಂತರದಲ್ಲಿ ಡಿಕ್ಕಿಯಾಗಿದೆ. ಕೋರಮಂಡಲ್ ಎಕ್ಸ್ಪ್ರೆಸ್ 128 ಕಿಮೀ ವೇಗದಲ್ಲಿತ್ತು. ಹೌರಾ ಎಕ್ಸ್ಪ್ರೆಸ್ 126 ಕಿಮೀ ವೇಗದಲ್ಲಿತ್ತು. ಸಿಗ್ನಲ್ ಸಮಸ್ಯೆಯಿಂದ ಒಂದು ನಿಮಿಷ ಅಂತರದಲ್ಲಿ ತ್ರಿವಳಿ ರೈಲು ದುರಂತವಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಮತ್ತಷ್ಟು ಓದಿ: Odisha Train Accident: 51 ಗಂಟೆ ಬಳಿಕ ರೈಲು ಸಂಚಾರ ಪುನರಾರಂಭ, ಟ್ರೇನ್ಗೆ ನಮಸ್ಕರಿಸಿದ ಸಚಿವ ಅಶ್ವಿನಿ ವೈಷ್ಣವ್
ಒಂದೇ ರೈಲು ಹಳಿಯಲ್ಲಿ ವಿವಿಧ ಕಾಲ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ರೈಲುಗಳು ಸಂಚರಿಸುತ್ತವೆ. ಮಾರ್ಗಮಧ್ಯೆ ಹಳಿ ಬದಲಾವಣೆ ಮೂಲಕ ಮಾರ್ಗಬದಲಾವಣೆ ಇತ್ಯಾದಿ ನಡೆಯುತ್ತವೆ. ಭಾರತೀಯ ರೈಲ್ವೆಯು ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದ್ದು, ದಿನವೂ ಸಾವಿರಾರು ಟ್ರೈನುಗಳು ಸಂಚರಿಸುತ್ತವೆ. ದಿನನಿತ್ಯ 2 ಕೋಟಿಗೂ ಹೆಚ್ಚು ಜನರನ್ನು ಹಾಗೂ 200ಎಂಟಿಗೂ ಹೆಚ್ಚು ಸರಕುಗಳನ್ನು ಭಾರತೀಯ ರೈಲ್ವೆ ಸಾಗಿಸುತ್ತದೆ. ಹೀಗಾಗಿ, ರೈಲುಗಳು ಘರ್ಷಣೆ ಆಗದಂತೆ ಸುಗಮವಾಗಿ ಸಂಚರಿಸಲು ಟ್ರ್ಯಾಕ್ ಮತ್ತು ಸಿಗ್ನಲ್ಗಳ ನಿಯಂತ್ರಣ ಬಹಳ ಮುಖ್ಯ. ಈ ಕಾರ್ಯವನ್ನು ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಮರ್ಪಕವಾಗಿ ಮಾಡುತ್ತದೆ. ಒಂದು ರೈಲು ಸರಿಯಾದ ಮಾರ್ಗದಲ್ಲಿ ಸಂಚರಿಸಿ ಸುರಕ್ಷಿತವಾಗಿ ಗಮ್ಯಸ್ಥಾನ ತಲುಪುವಂತೆ ದಾರಿ ತೋರಿಸುತ್ತದೆ ಇದು.
#WATCH | Balasore,Odisha:…”Our goal is to make sure missing persons’ family members can find them as soon as possible…our responsibility is not over yet”: Union Railway Minister Ashwini Vaishnaw gets emotional as he speaks about the #OdishaTrainAccident pic.twitter.com/bKNnLmdTlC
— ANI (@ANI) June 4, 2023
ಈ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ವ್ಯವಸ್ಥೆಯು ಎಲೆಕ್ಟ್ರಾನಿಕ್ ಕಂಟ್ರೋಲ್ ಸಿಸ್ಟಂಗಳು ಮತ್ತು ಕಂಪ್ಯೂಟರುಗಳ ಸಹಾಯದಿಂದ ರೈಲುಗಳ ಚಲನೆಯ ಮೇಲೆ ನಿಗಾ ಇಡುತ್ತದೆ. ಹಿಂದೆಯೂ ಇಂಟರ್ಲಾಕಿಂಗ್ ಸಿಸ್ಟಂ ಇತ್ತಾದರೂ ಅದು ರಾಡ್ ಮತ್ತು ಲಿವರ್ಗಳನ್ನು ಕೈಯಿಂದ ತಿರುಗಿಸಿ ಸಿಗ್ನಲ್ಗಳನ್ನು ಕಂಟ್ರೋಲ್ ಮಾಡಬೇಕಿತ್ತು. ಆದರೆ, ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಿಸ್ಟಂ ಬಹಳ ಕ್ಷಿಪ್ರವಾಗಿ ಮತ್ತು ಹೆಚ್ಚು ನಿಖರವಾಗಿ ಈ ಕೆಲಸ ಮಾಡುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ