ಕಾಜಿರಂಗ: ಸತತವಾಗಿ ಸುರಿದ ಮಳೆಗೆ ಆಸ್ಸಾಂ ನಲ್ಲಿರುವ ಪ್ರಖ್ಯಾತ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ನೂರಾರು ಪ್ರಾಣಿಗಳು ನೀರಲ್ಲಿ ಕೊಚ್ಚಿ ಹೋಗಿದ್ದು, ಈ ನಡುವೆ ಅಧಿಕಾರಿಗಳು ನಾಲ್ಕು ದಿನಗಳ ಘೇಂಡಾಮೃಗದ ಮರಿಯನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ.
ಹೌದು ಸತತವಾಗಿ ಸುರಿದ ಭಾರೀ ಮಳೆ ಮತ್ತು ಪ್ರವಾಹಕ್ಕೆ ಈಶಾನ್ಯ ರಾಜ್ಯಗಳು ಅಕ್ಷರಶಃ ನಲುಗಿಹೋಗಿವೆ. ಸಾವಿರಾರು ಜನರು ಮನೆ ಮಠಗಳನ್ನೇ ಕಳೆದುಕೊಂಡಿದ್ದಾರೆ. ಇನ್ನು ದೇಶದ ಪ್ರಖ್ಯಾತ ರಾಷ್ಟ್ರೀಯ ಉದ್ಯಾನವನ ಕಾಜಿರಂಗದಲ್ಲಿ ಪ್ರವಾಹಕ್ಕೆ ನೂರಾರು ಪ್ರಾಣಿಗಳು ಸಾವನ್ನಪ್ಪಿವೆ. ಇನ್ನು ಕೆಲವು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಹೀಗೆ ಕೊಚ್ಚಿ ಹೋಗಿರುವ ಪ್ರಾಣಿಗಳ ರಕ್ಷಣಾ ಕಾರ್ಯ ನಡೆದಿದ್ದು, ಇಂದು ಹುಟ್ಟಿ ಕೇವಲ ನಾಲ್ಕು ದಿನಗಳ ಒಂದು ಘೇಂಡಾಮೃಗವನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಪ್ರವಾಹ ಇಳಿಮುಖವಾದ ನಂತರ ನಡೆಯುತ್ತಿರುವ ರಕ್ಷಣಾಕಾರ್ಯದಲ್ಲಿ ಈ ಮರಿಯನ್ನು ರಕ್ಷಣೆ ಮಾಡಲಾಗಿದೆ. ಈಗ ಅಧಿಕಾರಿಗಳು ಇದರ ತಾಯಿಯನ್ನು ಹುಡುಕುತ್ತಿದ್ದು, ಅಲ್ಲಿಯವರೆಗೆ ಈ ಮರಿಯನ್ನು ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಸಾಗಿಸಲಾಗಿದೆ.
Kaziranga: A 4-day old Rhino calf was rescued by Kaziranga National Park staff today morning and was taken to the rescue centre. Efforts are underway to reunite the calf with his mother.
(Pic source: PRO to Assam Minister of Environment and Forest Parimal Suklabaidya) pic.twitter.com/mVib1UvIaZ
— ANI (@ANI) August 2, 2020
Published On - 5:00 pm, Sun, 2 August 20