ಸೆಡಾನ್‌ನಲ್ಲಿ ಬಂದು ಮನೆಯಿಂದ ಹೂಕುಂಡ ಕದ್ದ ಮಹಿಳೆಯರು, ಕೃತ್ಯ ಸಿಸಿಟಿವಿಯಲ್ಲಿ ಸೆರೆ

|

Updated on: Nov 15, 2023 | 4:37 PM

ಈ ವರ್ಷದ ಆರಂಭದಲ್ಲಿ ಇಬ್ಬರು ವ್ಯಕ್ತಿಗಳು ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್‌ವೇನಲ್ಲಿರುವ ಆಂಬಿಯೆನ್ಸ್ ಮಾಲ್‌ನ ಮುಂಭಾಗದಲ್ಲಿ ಇರಿಸಲಾಗಿದ್ದ ಹೂಕುಂಡಗಳನ್ನು ಕದ್ದು ಎಸ್‌ಯುವಿಯಲ್ಲಿ ಹಾಕುತ್ತಿದ್ದ ಘಟನೆ ವರದಿ ಆಗಿತ್ತು. ಈ ಪ್ರಕರಣದಲ್ಲಿ ಗುರುಗ್ರಾಮ್‌ನಿಂದ 50 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಸೆಡಾನ್‌ನಲ್ಲಿ ಬಂದು ಮನೆಯಿಂದ ಹೂಕುಂಡ ಕದ್ದ ಮಹಿಳೆಯರು, ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಹೂಕುಂಡ ಕಳ್ಳತನ
Follow us on

ಚಂಡೀಗಢ ನವೆಂಬರ್ 15: ಪಂಜಾಬ್‌ನ (Punjab) ಮನೆಯೊಂದರ ಹೊರಗಿನ ಹೂಕುಂಡ ಕಳ್ಳತನದ ವಿಡಿಯೊ ವೈರಲ್ (Viral Video) ಆಗಿದೆ, ಆದರೆ ವಿಚಿತ್ರವೆಂದರೆ ಸೆಡಾನ್‌ನಲ್ಲಿ ಬಂದ ಇಬ್ಬರು ಮಹಿಳೆಯರೇ ಕಳ್ಳತನ ಮಾಡಿದ್ದಾರೆ. ಮಹಿಳೆಯರು ಮೊಹಾಲಿಯ ಸೆಕ್ಟರ್ 78 ರಲ್ಲಿ ಮನೆಯ ಹೊರಗೆ ಸೇಡನ್‌ (Sedan) ನಿಲ್ಲಿಸಿ ಮನೆಯತ್ತ ಬರುತ್ತಾರೆ. ನಂತರ ಮುಖ್ಯ ಗೇಟ್‌ನ ಎರಡು ಬದಿಗಳಲ್ಲಿ ಇರಿಸಲಾಗಿದ್ದ ಹೂಕುಂಡಗಳನ್ನು ಕದ್ದು ಅವರ ಕಾರಿನ ಕಡೆಗೆ ಓಡಿ ವೇಗವಾಗಿ ಓಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ವರ್ಷದ ಆರಂಭದಲ್ಲಿ ಇಬ್ಬರು ವ್ಯಕ್ತಿಗಳು ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್‌ವೇನಲ್ಲಿರುವ ಆಂಬಿಯೆನ್ಸ್ ಮಾಲ್‌ನ ಮುಂಭಾಗದಲ್ಲಿ ಇರಿಸಲಾಗಿದ್ದ ಹೂಕುಂಡಗಳನ್ನು ಕದ್ದು ಎಸ್‌ಯುವಿಯಲ್ಲಿ ಹಾಕುತ್ತಿದ್ದ ಘಟನೆ ವರದಿ ಆಗಿತ್ತು. ಈ ಪ್ರಕರಣದಲ್ಲಿ ಗುರುಗ್ರಾಮ್‌ನಿಂದ 50 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಈ ವರ್ಷ G20 ಶೃಂಗಸಭೆಯ ನಂತರ ದೆಹಲಿಯ ರಸ್ತೆಗಳನ್ನು ಹೂಕುಂಡಗಳು ಮತ್ತು ಇತರ ಸ್ಥಾಪನೆಗಳಿಂದ ಅಲಂಕರಿಸಿದಾಗ ಹೂವು ಕುಂಡಗಳ ಕಳ್ಳತನದ ಹಲವಾರು ಘಟನೆಗಳು ವರದಿಯಾಗಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Wed, 15 November 23