ಸುಪ್ರೀಂ ತರಾಟೆ ನಂತರ ಎಚ್ಚೆತ್ತ ಪಂಜಾಬ್​​​ ಸರ್ಕಾರ: ಹುಲ್ಲು ಸುಡುವ ರೈತರ ವಿರುದ್ಧ ಕಠಿಣ ಕ್ರಮ

ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಇದಕ್ಕೆ ಪಂಜಾಬ್​​​​ ಕೂಡ ಒಂದು ರೀತಿಯಲ್ಲಿ ಕಾರಣವಾಗಿದೆ, ಅಲ್ಲಿ ಹೆಚ್ಚು ಹುಲ್ಲು ಸುಡುವ ಕಾರಣ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​​ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಹೇಗೆ ಮಾಡುತ್ತೀರಿ ಎಂಬುದು ನನಗೆ ತಿಳಿದಿಲ್ಲ, ಆದರೆ ಹುಲ್ಲು ಸುಡುವಿಕೆಯನ್ನು ಕಡಿಮೆ ಮಾಡಲೇಬೇಕು ಅದು ನಿಮ್ಮ ಕೆಲಸ, ಈ ಸಮಸ್ಯೆಗೆ ನೀವೇ ಪರಿಹಾರ ಕಂಡುಹಿಡಿಯಬೇಕು ಎಂದು ಹೇಳಿತ್ತು. ಇದೀಗ ಸುಪ್ರೀಂನ ಈ ಎಚ್ಚರಿಕೆ ನಂತರ ಪಂಜಾಬ್​​ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.

ಸುಪ್ರೀಂ ತರಾಟೆ ನಂತರ ಎಚ್ಚೆತ್ತ ಪಂಜಾಬ್​​​ ಸರ್ಕಾರ: ಹುಲ್ಲು ಸುಡುವ ರೈತರ ವಿರುದ್ಧ ಕಠಿಣ ಕ್ರಮ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Nov 08, 2023 | 3:37 PM

ಪಂಜಾಬ್​​​, ನ.8: ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚಾಗುತ್ತಾಳೆ ಇದೆ. ಇದನ್ನು ಕಡಿಮೆ ಮಾಡಲು ದೆಹಲಿ ಸರ್ಕಾರ ಬೇರೆ ಬೇರೆ ಕ್ರಮಗಳನ್ನು ತೆಗೆದುಕೊಂಡು ಬಂದಿದೆ. ಇದರ ಜತೆಗೆ ವಾಯುಮಾಲಿನ್ಯ ಉಂಟು ಮಾಡುವ ವಾಹನಗಳ ಓಡಾಟವನ್ನು ಕಡಿಮೆ ಮಾಡಿದೆ. ಈ ಬಗ್ಗೆ ಅಕ್ಕ ಪಕ್ಕ ರಾಜ್ಯಗಳಿಗೆ ಮನವಿ ಮಾಡಿಕೊಂಡಿದೆ. ಇದೀಗ ದೆಹಲಿ ಮಾಲಿನ್ಯಕ್ಕೆ ಪಕ್ಕದ ಪಂಜಾಬ್ ಕೂಡ ಕಾರಣವಾಗಿದೆ. ಪಂಜಾಬ್​​​ನಲ್ಲಿ ವಿಪರೀತ ಹುಲ್ಲು ಸುಡುವುದರಿಂದ ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ಹಾಗಾಗಿ ಹುಲ್ಲು ಸುಡುವುದನ್ನು ಕಡಿಮೆ ಮಾಡಲು ಸರ್ಕಾರ ಕೂಡ ಹೇಳಿತ್ತು. ಆದರೆ ದೆಹಲಿ ಸರ್ಕಾರದ ಮಾತನ್ನು ಯಾರು ಗಮನಿಸಿದ ಕಾರಣ ಸುಪ್ರೀಂ ಕೋರ್ಟ್ ಪಂಜಾಬ್​​​ ಸರ್ಕಾರವನ್ನು ಮಂಗಳವಾರದಂದು​​ ತರಾಟೆಗೆ ತೆಗೆದುಕೊಂಡಿತು. ನೀವು ಹೇಗೆ ಮಾಡುತ್ತೀರಿ ಎಂಬುದು ನನಗೆ ತಿಳಿದಿಲ್ಲ, ಆದರೆ ಹುಲ್ಲು ಸುಡುವಿಕೆಯನ್ನು ಕಡಿಮೆ ಮಾಡಲೇಬೇಕು ಅದು ನಿಮ್ಮ ಕೆಲಸ, ಈ ಸಮಸ್ಯೆಗೆ ನೀವೇ ಪರಿಹಾರ ಕಂಡುಹಿಡಿಯಬೇಕು ಎಂದು ಹೇಳಿತ್ತು.

ಸುಪ್ರೀಂ ತರಾಟೆ ತೆಗೆದುಕೊಂಡ ನಂತರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ. ಈಗಾಗಲೇ ಹಸಿರು ನ್ಯಾಯಮಂಡಳಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್​​ ನೀಡಿದ ಎಚ್ಚರಿಕೆಯ ನಂತರ ಪಂಜಾಬ್​​ನಲ್ಲಿ ಹುಲ್ಲು ಸುಡುವುದನ್ನು ಕಡಿಮೆ ಮಾಡಿದೆ. ಇದರ ಜತೆಗೆ ಪರಿಸರ ಹಾನಿ ಅಥವಾ ಹುಲ್ಲು ಸುಡುವವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ನವೆಂಬರ್ 5 ರವರೆಗಿನ ಅಂಕಿ ಅಂಶಗಳ ಪ್ರಕಾರ 264 ರೈತರು ಹೆಚ್ಚು ಹುಲ್ಲುಗಳನ್ನು ಸುಡುತ್ತಾರೆ. ಇವರು ನಿಯಮ ಉಲ್ಲಂಘಿಸಿದ್ದು, ಈ ರೈತರನ್ನು ರೆಡ್ ಎಂಟ್ರಿ ಎಂದು ಘೋಷಣೆ ಮಾಡಿದ್ದಾರೆ. ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಆದರ್ಶ್ ಪಾಲ್ ಸಿಂಗ್ ಅವರು ಇಂತಹ ಕೆಲಸ ಮಾಡುವ ರೈತರಿಗೆ ಸರ್ಕಾರದ ಯೋಜನೆಗಳನ್ನು ನೀಡಲಾಗುವುದಿಲ್ಲ. ಜತೆಗೆ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಒಳ್ಳಗೊಂಡಿದೆ ಎಂದು ಹೇಳಿದ್ದಾರೆ.

ಇನ್ನು ರೆಡ್ ಎಂಟ್ರಿಯಲ್ಲಿರುವ ರೈತರಿಗೆ ಯಾವುದೇ ಸರ್ಕಾರದ ಯಾವುದೇ ಸೌಲಭ್ಯ ಸಿಗುವುದಿಲ್ಲ. ಇನ್ನು ಅಂತಹ ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡಲು ಕೂಡ ಸಾಧ್ಯವಿಲ್ಲ ಎಂದು ಆದರ್ಶ್ ಪಾಲ್ ಸಿಂಗ್ ಹೇಳಿದ್ದಾರೆ. ಇದರ ಜತೆಗೆ ರೈತರಲ್ಲಿ ಜಾಗೃತಿ ಕೂಡ ಮೂಡಿಸಲಾಗಿದೆ. ಮುಂದಿನ ದಿನಗಳಲ್ಲಿ ಹುಲ್ಲು ಸುಡುವುದು ಕಡಿಮೆಯಾಗಲಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹುಲ್ಲು ಸುಡುವುದು ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ವಾಯು ಮಾಲಿನ್ಯ, ಪಂಜಾಬ್​ಗೆ ಸುಪ್ರೀಂ ಛೀಮಾರಿ, ಹುಲ್ಲು ಸುಡುವುದನ್ನು ನಿಲ್ಲಿಸಲು ಸೂಚನೆ

ಆದರೆ ವರದಿಗಳ ಪ್ರಕಾರ ಪಂಜಾಬ್​​ ಸರ್ಕಾರ ಈ ಕ್ರಮದ ನಂತರವೂ ಹುಲ್ಲು ಸುಡುವ ಪ್ರಕರಣ ಹೆಚ್ಚಾಗಿದೆ. ಶೇಕಾಡ 27 ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ. ಒಣಹುಲ್ಲಿನ ಬಗ್ಗೆ ಅಲ್ಲಿನ ಜನರಿಗೆ ಜಾಗೃತಿಯನ್ನು ಮೂಡಿಸಿದ್ದೇವೆ ಆದರೆ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಆದರೆ ಸರ್ಕಾರದ ನಾವು ಹುಲ್ಲು ಸುಡುವ ರೈತರ ವಿರುದ್ಧ ಕ್ರಮ ತೆಗೆದುಕೊಳ್ಳತ್ತಿದ್ದೇವೆ. PPCB ಅಂಕಿಅಂಶಗಳ ಪ್ರಕಾರ, ಇದುವರೆಗೆ 1694 ರೈತರಿಗೆ ಹುಲ್ಲು ಸುಟ್ಟ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜತೆಗೆ ಅವರಿಗೆ 45.53 ಲಕ್ಷ ರೂ ದಂಡವನ್ನು ಕೂಡ ವಿಧಿಸಲಾಗಿದೆ ಎಂದು ಆದರ್ಶ್ ಪಾಲ್ ಸಿಂಗ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:32 pm, Wed, 8 November 23