ಡಿಸೆಂಬರ್ನಲ್ಲಿ ಸ್ಥಾನದಿಂದ ಕೆಳಗಿಳಿಯುವ ಸಿದ್ದರಾಮಯ್ಯ ಜಾತಿಗಣತಿ ಮರುಸಮೀಕ್ಷೆ ಹೇಗೆ ಮಾಡಿಸ್ತಾರೆ? ಹೆಚ್ ವಿಶ್ವನಾಥ್
ದಿ ದೇವರಾಜ ಅರಸು ಅವರೊಂದಿಗೆ ಹೋಲಿಸಿಕೊಳ್ಳುವ ಸಿದ್ದರಾಮಯ್ಯ ಪ್ರಯತ್ನ ಅರ್ಥವಿಲ್ಲದ್ದು, ಆ ಪುಣ್ಯಾತ್ಮನ ಪ್ರಯತ್ನಗಳಿಂದ ಹಿಂದುಳಿದ ವರ್ಗಗಳ ಜನ ಬದುಕಿಕೊಂಡಿದ್ದಾರೆ, ಹಾವನೂರ್ ವರದಿ ಅನುಷ್ಠಾನಗೊಳಿಸಬಾರದೆಂದು ಅವರ ಮೇಲೆ ಭಾರೀ ಒತ್ತಡವಿತ್ತು, ಅದರೆ ಅವರು ಯಾರ ಮಾತಿಗೂ ಸೊಪ್ಪು ಹಾಕದೆ ಅದನ್ನು ಜಾರಿಗೊಳಿಸಿದರು, ಅಂಥ ಧೈರ್ಯವನ್ನು ಸಿದ್ದರಾಮಯ್ಯ ಪ್ರದರ್ಶಿಸಲಿ ಸಾಧ್ಯವಿಲ್ಲ ಎಂದು ವಿಶ್ವನಾಥ್ ಹೇಳಿದರು.
ಮೈಸೂರು, ಜೂನ್ 13: ಕರ್ನಾಟಕದ ಇತಿಹಾಸದಲ್ಲಿ ಸಿದ್ದರಾಮಯ್ಯನವರು ಒಬ್ಬ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದು ಬಿಡುತ್ತಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (H Vishwanath) ಹೇಳಿದರು. ಹಿಂದುಳಿದ ವರ್ಗಗಳ ವೋಟು ಪಡೆದು ಎರಡನೇ ಸಲ ಮುಖ್ಯಮಂತ್ರಿಯಾದವರು ಅಹಿಂದ ವರ್ಗದವರಿಗೆ ಸುಳ್ಳು ಹೇಳುತ್ತಿದ್ದಾರೆ, ಜಾತಿ ಗಣತಿ ಮರುಸರ್ವೇಯನ್ನು ಅವರು ಮೂರು ತಿಂಗಳಲ್ಲಿ ಮಾಡಿಸೋದು ಹೇಗೆ ಸಾಧ್ಯ? ಅವರು ಹೆಚ್ಚೆಂದರೆ ಡಿಸೆಂಬರ್ ವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ, ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡಬೇಕಿರುವುದು ಈಗಾಗಲೇ ನಿರ್ಣಯಿಸಲ್ಪಟ್ಟಿದೆ, ಎಂದು ಹೇಳಿದ ಅವರು ದೆಹಲಿಯಲ್ಲಿ ಹೈಕಮಾಂಡ್ನವರು ಮತ್ತೊಮ್ಮೆ ಜಾತಿಗಣತಿ ಮಾಡಿಸಿ ಅಂದಾಗ ಸಿದ್ದರಾಮಯ್ಯ ಚಕಾರವೆತ್ತದೆ ಬಾಯಿಮುಚ್ಚಿಕೊಂಡು ಅಲ್ಲಿಂದ ವಾಪಸ್ಸಾದರು ಎಂದು ಮೂದಲಿಸಿದರು. ಎಲ್ಲಿ ಹೋಯಿತು ಅವರ ಧೈರ್ಯ? ಮರುಸರ್ವೇ ಮಾಡಿಸಲ್ಲ ಅಂತ ಹೇಳಿದ್ದರೆ ಅವರು ಹಿಂದುಳಿದ ವರ್ಗ ಸಮುದಾಯಗಳ ದೃಷ್ಟಿಯಲ್ಲಿ ಹೀರೋ ಆಗಿರುತ್ತಿದ್ದರು ಎಂದು ವಿಶ್ವನಾಥ್ ಹೇಳಿದರು.
ಇದನ್ನೂ ಓದಿ: ಅಧಿಕಾರ ಪಡೆವ ದುರಾಸೆಗಾಗಿ ಸಿದ್ದರಾಮಯ್ಯರಿಂದ ನನ್ನ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ: ಜನಾರ್ಧನ ರೆಡ್ಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

