ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ, ಹೆಚ್ಚಿದ ಆತಂಕ
ನಿರಂತರವಾಗಿ ಭಾರೀ ಮಳೆಯಾಗುತ್ತಿರುವುದರಿಂದ ಪ್ರವಾಸಿಗರ ಸ್ವರ್ಗ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಗುಡ್ಡ ಕುಸಿತವಾಗುತ್ತಿದೆ. ಕವಿಕಲ್ ಗಂಡಿ ಬಳಿ ಗುಡ್ಡ ಕುಸಿದಿದ್ದು,ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ಸಂಪರ್ಕಿಸುವ ರಸ್ತೆ ಮೇಲೆ ಗುಡ್ಡದ ಮಣ್ಣು ಕಲ್ಲು ರಸ್ತೆ ಮೇಲೆ ಬಿದ್ದಿದೆ. ಇನ್ನು ಕುಸಿತವಾದ ಸ್ಥಳದಲ್ಲೇ ಮತ್ತೆ ಕುಸಿಯುವ ಸಾಧ್ಯತೆ ಇದ್ದು, ಗುಡ್ಡ ಕುಸಿತವಾದ ಮೇಲ್ಬಾಗದಲ್ಲಿ ಇರುವ ಭಾರೀ ಗಾತ್ರದ ಬಂಡೆಗಳು ಕುಸಿಯುವ ಆತಂಕ ಶುರುವಾಗಿದೆ.
ಚಿಕ್ಕಮಗಳೂರು, (ಜೂನ್ 14): ನಿರಂತರವಾಗಿ ಭಾರೀ ಮಳೆಯಾಗುತ್ತಿರುವುದರಿಂದ ಪ್ರವಾಸಿಗರ ಸ್ವರ್ಗ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಗುಡ್ಡ ಕುಸಿತವಾಗುತ್ತಿದೆ. ಕವಿಕಲ್ ಗಂಡಿ ಬಳಿ ಗುಡ್ಡ ಕುಸಿದಿದ್ದು,ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ಸಂಪರ್ಕಿಸುವ ರಸ್ತೆ ಮೇಲೆ ಗುಡ್ಡದ ಮಣ್ಣು ಕಲ್ಲು ರಸ್ತೆ ಮೇಲೆ ಬಿದ್ದಿದೆ. ಇನ್ನು ಕುಸಿತವಾದ ಸ್ಥಳದಲ್ಲೇ ಮತ್ತೆ ಕುಸಿಯುವ ಸಾಧ್ಯತೆ ಇದ್ದು, ಗುಡ್ಡ ಕುಸಿತವಾದ ಮೇಲ್ಬಾಗದಲ್ಲಿ ಇರುವ ಭಾರೀ ಗಾತ್ರದ ಬಂಡೆಗಳು ಕುಸಿಯುವ ಆತಂಕ ಶುರುವಾಗಿದೆ.
ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಗುಡ್ಡ ಕುಸಿದ ಕುರಿತು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ತಂಡ ಕಳೆದ ವರ್ಷವೇ ಸೂಚನೆ ನೀಡಿತ್ತು. ಭಾರಿ ವಾಹನಗಳ ಸಂಚಾರದ, ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಗುಡ್ಡ ಕುಸಿಯುವ ಬಗ್ಗೆ ವಿಜ್ಞಾನಿಗಳು ಸೂಚನೆ ನೀಡಿದ್ದರು. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಎಚ್ಚರಿಕೆ ನೀಡಿದ್ದರೂ ಸಹ ಜಿಲ್ಲಾಡಳಿ ಯಾವುದೇ ಕ್ರಮಕ್ಕೆ ಮುಂದಾಗುತ್ತುಲ್ಲ ಎನ್ನುವ ಆರೋಪ ಕೇಳಿಬಂದಿದೆ. ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ವಾಹನಗಳು ಸಂಚಾರ ಮಾಡುತ್ತವೆ. ಈಗ ಮಳೆಗಾಲ ಆರಂಭವಾಗುತ್ತಿದ್ದಂತೆ ಗುಡ್ಡ ಕುಸಿತvಆಗುತ್ತಿದ್ದರಿಂದ ವಾಹನ ಸವಾರರು ಆತಂಕಗೊಂಡಿದ್ದಾರೆ.




