AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರ ಪಡೆವ  ದುರಾಸೆಗಾಗಿ ಸಿದ್ದರಾಮಯ್ಯರಿಂದ ನನ್ನ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ: ಜನಾರ್ಧನ ರೆಡ್ಡಿ

ಅಧಿಕಾರ ಪಡೆವ ದುರಾಸೆಗಾಗಿ ಸಿದ್ದರಾಮಯ್ಯರಿಂದ ನನ್ನ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ: ಜನಾರ್ಧನ ರೆಡ್ಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 12, 2025 | 7:09 PM

Share

ಅಂಜನಾದಿ ಹನುಮನ ಪರಮ ಭಕ್ತನಾಗಿರುವ ತನಗೆ ಗಂಗಾವತಿ ಜನರ ಸೇವೆ ಮಾಡುವ ಅವಕಾಶ ಆ ಭಗವಂತನಿಂದಲೇ ಪ್ರಾಪ್ತಿಯಾಗಿದೆ, ಹನುಮ ಜನಿಸಿದ ಅಂಜನಾದ್ರಿ ಪ್ರದೇಶವನ್ನು ಅಯೋಧ್ಯಾ ಮತ್ತು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ಉದ್ದೇಶ ತನಗಿದೆ ಎಂದು ಹೇಳಿದ ರೆಡ್ಡಿ, ಮೈನಿಂಗ್ ಲೀಸ್ ತನಗೆ ನೀಡಿರುವುದಕ್ಕೆ ಸಂಬಂಧಿಸಿದಂತೆ ತನಗೆ ಶಿಕ್ಷೆ ಪ್ರಕಟವಾಗಿತ್ತು ಎಂದು ಹೇಳಿದರು.

ಬೆಂಗಳೂರು, ಜೂನ್ 12: ಸಿಬಿಐ ಕೋರ್ಟ್ ವಿಧಿಸಿದ್ದ ಶಿಕ್ಷೆಯ ವಿರುದ್ಧ ತೆಲಂಗಾಣ ಹೈಕೋರ್ಟ್​​ನಿಂದ ತಾತ್ಕಾಲಿಕ ತಡೆಯಾಜ್ಞೆ (interim stay order) ಪಡೆದು ಇವತ್ತು ಜೈಲಿನಿಂದ ಹೊರಬಂದ ಗಾಲಿ ಜನಾರ್ಧನ ರೆಡ್ಡಿ ಮಾಧ್ಯಮಗಳೊಂದಿಗೆ ಮಾತಾಡುತ್ತಾ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ಪಡೆಯಬೇಕೆಂಬ ರಾಜಕೀಯ ದುರಾಸೆಯಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ, ತನ್ನ ವಿರುದ್ಧ ಅಕ್ರಮ ಗಣಿಗಾರಿಕೆಯ ಆರೋಪ ಹೊರೆಸಿ ಜೈಲಿಗೆ ಹೋಗುವಂತೆ ಮಾಡಿದ್ದರು ಎಂದು ಹೇಳಿದರು. ಆದರೆ, ಸಿಬಿಐ ಕೋರ್ಟ್ ತನ್ನ ತೀರ್ಪಿನಲ್ಲಿ ಅಕ್ರಮ ಗಣಿಗಾರಿಕೆ ನಡೆದಿಲ್ಲ ಎಂದು ಹೇಳಿದೆ ಮತ್ತು ಓಬಳಪುರಂ ಮೈನಿಂಗ್ ಕಂಪನಿಯಿಂದ ಬೇರೆ ದೇಶಗಳಿಗೆ ಅದಿರನ್ನು ರಫ್ತು ಮಾಡಿದರೆಂಬ ಅರೋಪವನ್ನೂ ನ್ಯಾಯಾಲಯ ಹೊಡೆದು ಹಾಕಿದೆ ಎಂದು ರೆಡ್ಡಿ ಹೇಳಿದರು.

ಇದನ್ನೂ ಓದಿ:  ಜನಾರ್ಧನ ರೆಡ್ಡಿಗೆ ಶಿಕ್ಷೆ; ನ್ಯಾಯಾಂಗ ವ್ಯವಸ್ಥೆಯಲ್ಲಿ ನಮ್ಮ ವಿಶ್ವಾಸ ಇಮ್ಮಡಿಗೊಂಡಿದೆ: ಎಸ್ ಅರ್ ಹಿರೇಮಠ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ